ಅಲರ್ಜಿ: ದೇಹದಲ್ಲಿ ಮೃದುವಾದ ಅಂಗಗಳ ಮೇಲೆ ಅಸಾಮಾನ್ಯವಾಗಿ ವೈರಾಣು ಸೋಂಕುಗಳು ತಗುಲಿ ಅದನ್ನು ಪಿಡಿಸುತ್ತವೆ. ಸಾಮಾನ್ಯವಾಗಿ ನಾವು ತೆಗೆದುಕೊಳ್ಳುವ ಆಹಾರ, ಔಷಧ ಪಾನೀಯ ಮತ್ತು ಹವಮಾನ ವಾತಾವರಣ ವ್ಯತ್ಯಾಸದಿಂದ ರಕ್ತನಾಳಗಳ ಮೇಲೆ ಪರಿಣಾಮ ಬೀರಿ ದೇಹದ ಕೆಲವು ಮೃದುವಾದ ಅಂಗಗಳು ಹೊಂದಿಕೊಳ್ಳುತ್ತದೆ ವೃತ್ತಿ ರಿಕ್ತವಾದ ಅನೇಕ ಪರಿಣಾಮಗಳನ್ನುಂಟು ಮಾಡುತ್ತದೆ.ಅದರಲ್ಲಿ ಮೃದು ಚರ್ಮಕ್ಕೆ ಸೋಂಕು ತಗುಲಿ ಅಲರ್ಜಿ ಆಗುವುದು.ಅಂಗ ಭಾವುವಾಗುವುದು, ಸೋಂಕು ತಗುಲಿ ಹುಣ್ಣಾಗುವುದು, ತನ್ನ ಕಾರ್ಯಗಳಲ್ಲಿ ವ್ಯತ್ಯಾಸ ಆಗುವುದು ಕೆಲವು ಸಲ ಮೂರ್ಛೆ ಹೋಗುವುದೂ ಇರುತ್ತದೆ.
ಉದಾಹರಣೆ: ನಾವು ಪರಾಗ ವಿರುವ ಹೂವಿನ ವಾಸನೆ ಸೇವಿಸುವಾಗ ಅದರ ಧೂಳಿನಂತೆ ಇರುವ ಪರಾಗವು ನಮ್ಮ ಮೂಗಿನ ಸೂಕ್ಷ್ಮ ಗ್ರಂಥಿಗಳಿಗೆ ಸೇರಿ ಅಲರ್ಜಿಯಾಗಿ ಸೀನುಗಳು ಉಂಟಾಗಿ ಕೆಲವೇ ನಿಮಿಷದಲ್ಲಿ ಮೂಗಿನ ರಂದ್ರವು ಬಾವಿಯಿಂದ ಕಿರಿದಾಗುತ್ತದೆ. ಇದೆ ಆಗುತ್ತದೆ ಇದೇ ರೀತಿ ಮನೆಯ ಧೂಳು ಸೇವಿಸಿದಾಗ ಶ್ವಾಸನಾಳಕ್ಕೆ ಸೋಂಕು ತಗುಲಿ ಬಾವುವಾಗಿ ನಾಳ ಕಿರಿದಾಗುತ್ತದೆ..ಇದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.
ನಾವು ತೆಗೆದುಕೊಳ್ಳುವ ಆಹಾರದಲ್ಲಿ ಬೂಸ್ಟ್, ಮೊಟ್ಟೆ, ಮೀನು, ಹಾಲು, ಸೀಬೆಕಾಯಿ, ಐಸ್ ಕ್ರೀಮ್, ನಿಲ್ಖ್ಗಖ್ಯ ಕ್ರೋಮಿಯಂ,ಶೀತಕಾಲದಲ್ಲಿ ಬೇಗ ಅಲರ್ಜಿಗಳಾಗುತ್ತದೆ.ಏಕೆಂದರೆ. ಶೀತಕ್ಕೆ ಈ ಆಹಾರ ಸೇವನೆಯಿಂದ ಮೂಗಿನ ರಂದ್ರ ಕಿರಿದಾಗುತ್ತದೆ ಅದು ಉಸಿರಾಟ ತೊಂದರೆ ಯಾಗುತ್ತದೆ.
ವಂಶಪರಂಪರ್ಯವಾಗಿ : ಈ ವ್ಯಾದಿಯು ಕುಟುಂಬದಲ್ಲಿಯೇ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ನಿಧಾನವಾಗಿ ಹರಡುವ ಸಂಭವವಿರುತ್ತದೆ. ಕುಟುಂಬದಲ್ಲಿ ಒಂದೇ ರೀತಿಯಲ್ಲಿ ವ್ಯಾದಿ ಕಾಣಿಸಿಕೊಳ್ಳುತ್ತದೆಂದು ಇಲ್ಲ ಸ್ವಲ್ಪ ಹೆಚ್ಚು ಕಡಿಮೆಯಾಗಿರುತ್ತದೆ. ಆದರೆ ಯಾವುದೋ ಅಲರ್ಜಿ ಇರುತ್ತದೆ. ಒಬ್ಬರಿಗೆ ಚರ್ಮ ಲಗ್ಗಿದರೆ ಮತ್ತೊಬ್ಬರಿಗೆ ಸೀನು ಅಲರ್ಜಿಯಾದರೆ ಮತ್ತೊಬ್ಬರಿಗೆ ಸೀನು ಅಲರ್ಜಿಯಿರುತ್ತದೆ. ಆದರೆ ಅದು ಆಸ್ತಮಾ ಕುಟುಂಬಕ್ಕೆ ಸೇರುತ್ತದೆ. ಅದೇ ರೀತಿ ಒಬ್ಬ ಹುಡುಗ ಬಾಲ್ಯದಲ್ಲಿ ಸೀನು ಅಲರ್ಜಿಯಿಂದ ಬಳಲುತ್ತಿದ್ದರೆ ವಯಸ್ಸಾದಂತೆ ಅವನು ಅಸ್ತಮವ್ಯಾಧಿಗೆ ತುತ್ತಾಗುತ್ತಾನೆ . ಇದು ಋಣಮಾನದಂತೆ ಬರುವ ವ್ಯಾದಿಯೂ ಸಹ ಆಗಿರುತ್ತದೆ ಇದರಿಂದ ಅಲರ್ಜಿ ಆರಂಭವಾದರೆ ಚರ್ಮಬಾಹುವಾಗಿ ಕೆಂಪು ಬಣ್ಣಕ್ಕೆ ತಿರುಗುವುದು ಶೇಕಡ 50 ಭಾಗ ಜನರಿಗೆ ವಂಶ ಪಾರಂಪರ್ಯವಾಗಿ ಅಸ್ತಮಾ ಅಥವಾ ಯಾವುದಾದರೂ ಅಲರ್ಜಿಯಿಂದ ಬಳಲುತ್ತಿರುತ್ತಾರೆ.
ಮಾನಸಿಕವಾಗಿ : ಮಾನಸಿಕವಾಗಿಯೂ ಸಹ ಈ ಆಸ್ತಮ ವ್ಯಾದಿಯು ಬರುವ ಸಾಧ್ಯತೆ ಇರುತ್ತದೆ. ಮಾನಸಿಕವಾಗಿ,ಅವಿರತ್ತವಾಗಿ ವರ್ತಿಸುವುದರಿಂದ ಅಂದರೆ ಅಸೂಯೆ,ಕೋಪ,, ಹಂಗಿಸುವುದು ಮನಸ್ಸಿಗೆ ಹೆಚ್ಚಿಕೊಳ್ಳುವುದರಿಂದ, ಒಂಟಿಯಾಗಿರುವುದು, ದೀರ್ಘಕಾಲದವರೆಗೂ ಪ್ರೀತಿಸುವುದು, ಉದ್ವೇಗ, ಅಧಿಕ ಒತ್ತಡಕ್ಕೆ ಹೋಗುವುದು.ಜೀವನದಲ್ಲಿ ನಿರಾಕರಿಸುವ ಭಯ,, ಸಂದೇಹ ಪಡುವುದರಿಂ ಆಗಾಗ ಧೀರ್ಘವಾದ ನಿಸಿರುಟ್ಟು ಬಿಡುವುದಿರಂದಲೇ ತಿಳಿಯುತ್ತದೆ ಅವರಿಗೆ ಸ್ವಾಶಕೋಶಕ್ಕೆ ಸಾಕಾಗುವಷ್ಟು ಆಮ್ಲಜನಕ ಸೇವನೆಯಿಲ್ಲವೆಂದು ಅದೇ ರೀತಿ ಮುಂದುವರೆದರೆ ಮುಂದೆ ಅಸ್ತಮಾ ವ್ಯಾಧಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಹವಾಮಾನ : ಮೊದಲೇ ಅವರ ದೇಹ ಪ್ರಕೃತಿ ಶೀತವಾಗಿ, ಅಲ್ಪಶೀತ ಆಹಾರ ಸೇವಿಸಿದರೆ ಸಾಕು,ತಕ್ಷಣ ಶೀತ, ಅಥವಾ ಸೀನು ವ್ಯಾದಿ ಬರುವವರೆಗೆ ಹವಾಮಾನವು ಸ್ವಲ್ಪ ವ್ಯತ್ಯಾಸವಾದರೆ ಅಂದರೆ ಚಳಿಗಾಲ, ಮಳೆಗಾಲ, ಶೀತ ಗಾಳಿ ಬೀಸಿದಾಗ, ವಾತಾವರಣದ ಗಾಳಿಯು ಶೀತವಾಗಿ ನಾವು ಅದರ ಸೇವನೆಯಿಂದ ತಕ್ಷಣ ನಮ್ಮ ಶ್ವನಾಳ ಮತ್ತು ಶ್ವಾಸಕೋಶಗಳು ಸಂಕುಚಿತವಾಗಿ ಉಸಿರಾಟದ ಕ್ರಿಯೆಯು ನಿಧಾನಗತಿಯಾಗಿ, ಕೆಲವು ಸಲ ಶ್ವಾಸಕೋಶ ನಾಳಗಳಲಿ ಊತವಾಗಿ ಗಾಳಿಯ ಸೇವನೆಯ ಒತ್ತಡ ಕಡಿಮೆಯಾಗಿ ಉಸಿರಾಟ ತೊಂದರೆ ಉಂಟಾಗಿ, ನಾವು ದೀರ್ಘ ಮತ್ತು ಒತ್ತಡದಿಂದ ಗಾಳಿ ಸೇವನೆಗೆ ಪ್ರಯತ್ನಿಸುತ್ತೇವೆ. ಆಗಾಗ ಕೀರಲು ಶಬ್ದ ಬರುವುದು ಇದು ಅಸ್ತಮವಾಗಿ ಪರಿವರ್ತನೆಯಾಗುತ್ತದೆ.