ಮನೆ ಆರೋಗ್ಯ ಉಬ್ಬಸ: ಎಲ್ಲವೂ ಎಲ್ಲರಿಗೂ ಅಲ್ಲ

ಉಬ್ಬಸ: ಎಲ್ಲವೂ ಎಲ್ಲರಿಗೂ ಅಲ್ಲ

0

ಮೇಲಿನ ಅಂಶಗಳು ಒಬ್ಬಸಕ್ಕೆ ಸಹಕಾರಿಯಾಗಲು ಎಲ್ಲವೂ, ಎಲ್ಲರಿಗೂ ಅಲ್ಲ, ಅಸ್ತಮ ಇರುವವರಿಗೆ ಇವುಗಳಲ್ಲಿ ಯಾವುದಾದರೂ ಉಬ್ಬಸವನ್ನುಂಟು ಮಾಡಬಹುದು. ಅಸ್ತಮ ಇರುವವರು ಮೇಲೆ ಪ್ರಸ್ತಾಪಿಸಿದವುಗಳಲ್ಲಿ ಯಾವುದೇ ಕಾರಣಕ್ಕೂ ವಿವರವಾಗಿ ಪರಿಶೀಲಿಸಿ ಅವುಗಳಿಂದ ದೂರವಿದ್ದರೆ ಬಹುಮಟ್ಟಿಗೆ ಉಬ್ಬಸದಿಂದ ರಕ್ಷಣೆ ಸಿಗುತ್ತದೆ.

ಉಬ್ಬಸವೆಂದು ನಿರ್ಧರಿಸುವುದು ಹೇಗೆ? :-

ಉಬ್ಬಸವೆಂದು ನಿರ್ಧರಿಸಲು ಪರೀಕ್ಷೆಗಳು ಇದ್ಯಾಗೂ, ಮಗುವಿನ ಲಕ್ಷಣಗಳನ್ನು ನೋಡಿ ಸುಲಭವಾಗಿ ಗುರುತಿಸಬಹುದು. ಯಾವುದೇ ಮಗು ಉಸಿರಾಡುತ್ತಿದ್ದಾಗ ಬೆಕ್ಕಿನ ಶಬ್ದವಿದ್ದರೆ, ಉಸಿರಾಡಲು ಒದ್ದಾಡುತ್ತಿದ್ದರೆ, ಅದನ್ನು ಉಬ್ಬಸವೆಂದು ತಿಳಿಯಬಹುದು. ಉಬ್ಬಸವನ್ನು ಬಂದವರಿಗೆ, ರಾತ್ರಿ ವೇಳೆಯಲ್ಲಿ ಹೆಚ್ಚು ಕೆಮ್ಮು, ಆಯಾಸ, ಬೆಕ್ಕಿನಸದ್ದು ಇರುತ್ತದೆ. ಮಧ್ಯರಾತ್ರಿಯಲ್ಲಿ ನಿದ್ರೆಗೆ ಭಂಗ ಬರುತ್ತದೆ. ಕುಟುಂಬದಲ್ಲಿ ಯಾರಿಗಾದರೊ ಉಬ್ಬಸವಿದ್ದರೆ, ಮಗುವಿಗೆ ಅದೇ ಇರಬಹುದೆಂದು ಭಾವಿಸಬಹುದು.

ಪ್ರಯೋಗಾಲಯದ ಪರೀಕ್ಷೆಗಳು :-

1.ರಕ್ತ ಪರೀಕ್ಷೆ 2.ಎದೆಯ ಎಕ್ಸರೇ 3. ಪಲ್ಸ್ ಆಕ್ಸಿಮೆಟ್ರಿ 4. ಆರ್ಟಿರಿಯಲ್ ಬ್ಲಡ್ ಗ್ಲ್ಯಾಸಸ್ (ಎ.ಬಿ.ಜಿ) 5. ಪಲ್ಮನರಿ ಫಂಕ್ಷನ್ ಟೆಸ್ಟ್

ಉಬ್ಬಸವಿದ್ದಾಗ ರಕ್ತ ಪರೀಕ್ಷೆಯಲ್ಲಿ ಈಸ್ನೋಫೀಲಿಯಾ ಕಣಗಳು ಹೆಚ್ಚಾಗಿರುತ್ತದೆ. ಎಕ್ಸೆರೆಯಲ್ಲಿ, ಶ್ವಾಸನಾಳಗಳಲ್ಲಿ ಅಂಗಾಂಶವಿರುತ್ತದೆ.. ಪಲ್ಮನರಿ ಫಂಕ್ಷನ್ ಟೆಸ್ಟ್ ನಲ್ಲಿ ಪಿಕ್ಎಕ್ಸಿರೇಟರಿ ಫ್ಲೋರೇಟ್ (ಪಿ.ಇ.ಎಫ್.ಆರ್) ಕಡಿಮೆಯಿರುತ್ತದೆ. ಪಿ.ಇ.ಎಫ್.ಆರ್ 50% ಗಿಂತ ಕಡಿಮೆ ಇದ್ದರೆ ಉಬ್ಬಸತೀವ್ರವಾಗಿದೆಯೆಂದು ಅರ್ಥ.

ಮಕ್ಕಳ ರಕ್ಷಣೆ :-

1.ಯಾವುದೇ ರೀತಿಯ ಹೊಗೆಯಾದರೂ ಉಬ್ಬಸಾವನ್ನುಂಟು ಮಾಡುತ್ತದೆ. ಆದ್ದರಿಂದ ಹೊಗೆ ಇರುವಕಡೆ ಮಕ್ಕಳನ್ನು ಇರಿಸಬಾರದು. ಮನೆಯಲ್ಲಿ ದೊಡ್ಡವರು ಧೂಮಪಾನ ಮಾಡಿದರೆ, ಮಕ್ಕಳಿಗೆ ಉಬ್ಬಸಬರಬಹುದು, ಹಾಗಾಗಿ ಧೂಮಪಾನ ಮಾಡುವವರು ಮಕ್ಕಳಿಂದ ದೂರವಿರಬೇಕು.

2. ಸಾಕುಪ್ರಾಣಿಗಳು ಉಬ್ಬಸವನ್ನುಂಟುಮಾಡುತ್ತದೆ. ಮಕ್ಕಳಿಗೆ ಅಸ್ತಮ ಇದ್ದಾಗ ನಾಯಿ, ಬೇಕ್ಕು ಮುಂತಾದ ಸಾಕುಪ್ರಾಣಿಗಳನ್ನು ಮನೆಯಲ್ಲಿ ಇರಿಸಬಾರದು..

3. ಮನೆಯಲ್ಲಿ ಧೂಳಿರದಂತೆ ನೋಡಿಕೊಳ್ಳಬೇಕು. ಬಣ್ಣ ಮತ್ತು ವಾರ್ನಿಷ್ ವಾಸನೆ ಬರದಂತೆ ನೋಡಿಕೊಳ್ಳಬೇಕು. ಸೋಫಾ ಹಾಸಿಗೆ ಹೊದಿಕೆ ಮುಂತಾದವುಗಳಲ್ಲಿ ನೋಡಿಕೊಳ್ಳಬೇಕು.

ಉಬ್ಬಸಕ್ಕೆ ಚಿಕಿತ್ಸೆ :-

ಈ ದಿನಗಳಲ್ಲಿ ಉಬ್ಬಸಕ್ಕೆ ಸೂಕ್ತವಾದ ಔಷಧಿಗಳು ಚಿಕಿತ್ಸಾ ವಿಧಾನಗಳು ಇವೆ. ಎಷ್ಟೇ ಔಷಧಿಗಳಿದ್ದರೂ ಕೂಡ ಗಮನಿಸಿ. ಅವುಗಳಿಂದ ದೂರವಿರುವುದು ರೂಡಿಸಿಕೊಳ್ಳಬೇಕು.

ಉಬ್ಬಸದ ತೀವ್ರತೆಗನುಗುಣವಾಗಿ ಚಿಕಿತ್ಸೆಯಿರುತ್ತದೆ. ಇದುವರೆವಿಗೂ ಉಬ್ಬಸಕ್ಕೆ ಗುಳಿಗೆ, ಚುಚ್ಚುಮದ್ದು, ಸಿರಪ್ಸ್, ಬಳಕೆಯಲ್ಲಿತ್ತು. ಆಧುನಿಕ ವೈದ್ಯಕೀಯ ಪದ್ದತಿಯ ಆವಿಷ್ಕಾರದಿಂದಾಗಿ ಚಿಕಿತ್ಸಾ ವಿಧಾನ ಗಣನೀಯವಾಗಿ ಬದಲಾವಣೆಗೊಳಪಟ್ಟಿದೆ. ಈಗ ಚುಚ್ಚುಮದ್ದು, ಗುಳಿಗೆಗಳ ಬದಲಾಗಿ ಇನ್ ಹೇಲರ್, ನೆಬ್ಯುಲೈಸರ್, ಸ್ಪೇಸರ್ ಬಳಸುತ್ತಿದ್ದಾರೆ.

ಚುಚ್ಚುಮದ್ದು, ಗುಳಿಗೆ, ಸಿರಪ್ ಗಳಿಗಿಂತಲೂ ಈ ಆಧುನಿಕ ಚಿಕಿತ್ಸೆ ಸರಳವಾಗಿದೆ. ಬಹಳ ಶೀಘ್ರವಾಗಿ ಉಬ್ಬಸದಿಂದ ಉಪಶಮನ ನೀಡುತ್ತದೆ. ಉಬ್ಬಸವಿರುವವರು ಇನ್ಹೇಲ್ಲರ್, ನೆಬ್ಯುಲೈಸರ್, ಸ್ಪೇಸರ್ ಹೇಗೆ ಬಳಸಬೇಕೆಂಬುದನ್ನು ತಿಳಿದುಕೊಳ್ಳಬೇಕು. ಅವುಗಳನ್ನು ಬಳಸುತ್ತಿದ್ದರು ಉಬ್ಬಸ ಕಡಿಮೆಯಾಗಿಲ್ಲವೆಂದರೆ, ಬಹುಮಟ್ಟಿಗೆ ಅವನ್ನು ಕ್ರಮವಾಗಿ ಬಳಸುತ್ತಿಲ್ಲವೆಂದಾಗುತ್ತದೆ.

ಇನ್ಹಾಲೇಶನ್ ಥೆರಪಿ :-

ಉಬ್ಬಸದಾ ಚಿಕಿತ್ಸೆಯಲ್ಲಿ ಇನ್ಹಲೇಷನ್ ತೆರಪಿ ಕ್ರಾಂತಿಕಾರಕ ಬದಲಾವಣೆಯನ್ನುತಂದಿದೆ. ಉಬ್ಬಸದ ರೋಗಿಗಳಿಗೆ ಔಷಧಿಗಳಿಂದಾಗುತ್ತಿದ್ದ ಅಡ್ಡ ಪರಿಣಾಮಗಳಿಂದ ಮುಕ್ತಿ ದೊರಕಿರುವುದರ ಜೊತೆಗೆ, ಶೀಘ್ರವಾಗಿ ಉಪಶಮನ ದೊರೆಯುತ್ತದೆ. ತೀವ್ರವಾದ ಉಬ್ಬಸ ಕೂಡ ಸುಲಭವಾಗಿ ಕಡಿಮೆಯಾಗುತ್ತದೆ.

ಇನ್ಹಲೇಷನ್ ತೆರಪಿ ಎಂದರೆ ಉಬ್ಬಸದ ಔಷಧಿಯನ್ನು ಮೂಗಿನ ಮೂಲಕ ಶ್ವಾಸಕೋಶಗಳಕ್ಕೆ ಹೀರುವುದು. ಈ ಔಷಧಿ ಉಸಿರಿನ ಮೂಲಕ ಬೆರೆತು ಶ್ವಾಸಕೋಶಗಳಕ್ಕೆ ಸೇರುತ್ತದೆ. ಆಗ ಉಸಿರಾಡುವುದು ಸುಲಭವಾಗುತ್ತದೆ. ಉಬ್ಬಸದಿಂದಾಗುತ್ತಿದ್ದ ಬಾಧೆ ತೊಲಗುತ್ತದೆ…..

ಇನ್ಹಲೇಷನ್ ತೆರಪಿ ಮಾಡಲು 3 ಸಾಧನಗಳು ಬೇಕಾಗುತ್ತದೆ.

1.ಇನ್ ಹೇಲರ್ (ಇದನ್ನು ಎಂ ಡಿ ಐ ಇಲ್ಲವೇ ಮೀಟರ್ ಡೋಸ್ ಇನ್ ಹೇಲರ್ ಎನ್ನುತ್ತಾರೆ) 2. ರೋಟಾ ಹೇಲರ್ 2. ನೆಬ್ಯುಲೈಸರ್.

ಹಿಂದಿನ ಲೇಖನಕಲಿಕೆ ಮತ್ತು ಜ್ಞಾನಗಳ ನಡುವಿನ ವ್ಯತ್ಯಾಸ
ಮುಂದಿನ ಲೇಖನಇಡೀ ದೇಶ ಸದೃಢವಾಗಲು ಮಹಿಳೆಯರು ಕಾರಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ