ಮನೆ ಅಪರಾಧ ಗ್ಯಾಸ್‌ ಕಟ್ಟರ್‌ ಬಳಸಿ ಎಟಿಎಂಗೆ ಕನ್ನ: ಲಕ್ಷಾಂತರ ರೂ. ನೋಟುಗಳು ಭಸ್ಮ

ಗ್ಯಾಸ್‌ ಕಟ್ಟರ್‌ ಬಳಸಿ ಎಟಿಎಂಗೆ ಕನ್ನ: ಲಕ್ಷಾಂತರ ರೂ. ನೋಟುಗಳು ಭಸ್ಮ

0

ಬೆಂಗಳೂರು: ಎಟಿಎಂಗೆ ಕನ್ನ ಹಾಕಲು ಬಂದ ಕಳ್ಳರು ಗ್ಯಾಸ್‌ ಕಟ್ಟರ್‌ ಬಳಸಿದ ಪರಿಣಾಮ ಲಕ್ಷಾಂತರ ರೂಪಾಯಿ ಸುಟ್ಟು ಭಸ್ಮವಾಗಿರುವ ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಫೂಟೇಜ್‌ ಪರಿಶೀಲಿಸಿದ ಮುಂಬೈನ ಬ್ಯಾಂಕ್‌ ಅಧಿಕಾರಿಗಳು ಎಟಿಎಂ ಇದ್ದ ಕಟ್ಟಡದ ಮಾಲೀಕರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ಕಟ್ಟಡದ ಮಾಲೀಕ ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಗ್ಯಾಸ್‌ ಕಟ್ಟರ್‌, ಕಬ್ಬಿಣದ ರಾಡ್‌ ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದು ಗಮನಕ್ಕೆ ಬಂದಿತ್ತು.

ಈ ಘಟನೆಯಲ್ಲಿ ಇಬ್ಬರು ಕಳ್ಳರು ಶಾಮೀಲಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡಿರುವ ನೆಲಮಂಗಲ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.