ಬೆಂಗಳೂರು: ಕಳವು ಮಾಡುತ್ತಿದ್ದ ಮೊಬೈಲ್ ಫ್ಲ್ಯಾಶ್ ಮಾಡಿಕೊಡಲು ಹಿಂದೇಟು ಹಾಕಿದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಮೂವರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇಮ್ರಾನ್ ಉಲ್ಲಾ ಖಾನ್(27) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೃತ್ಯ ಎಸಗಿದ ಮೊಬೈಲ್ ಕಳ್ಳಿ ಸಾದೀಯಾ, ಉಮರ್, ಫಾರೂಕ್ ಎಂಬುವರನ್ನು ಪೊಲೀಸರು ಬಂಧಿಸಲಾಗಿದೆ.
ಘಟನೆಯಲ್ಲಿ ಇಮ್ರಾನ್ ಕುತ್ತಿಗೆ, ಕಾಲಿನ ನರಕ್ಕೆ ಗಂಭೀರ ಪೆಟ್ಟು ಬಿದ್ದಿದ್ದೆ. ಇಮ್ರಾನ್ ಮೊಬೈಲ್ ಫ್ಲ್ಯಾಶ್ ಮಾಡಿ ರೀಸೆಟ್ ಮಾಡುವುದನ್ನು ತಿಳಿದಿದ್ದ. ಹೀಗಿದ್ದಾಗ ಶಾಹಿದ್ ಅಲಿಯಾಸ್ ಕಾಲು ಎಂಬಾತನಿಂದ ಆರೋಪಿ ಸಾದೀಯಾ ಪರಿಚಯವಾಗಿದ್ದಳು. ಒಮ್ಮೆ ಸಾದೀಯಾ, ಇಮ್ರಾನ್ ಬಳಿ ಪಿನ್ ಅನ್ ಲಾಕ್ ಮಾಡಿ ರಿಸೆಟ್ ಮಾಡಿಸಿಕೊಂಡಿದ್ದಳು. ಆ ಬಳಿಕ ಆಗಾಗ್ಗೆ ಮೊಬೈಲ್ ಗಳನ್ನು ತಂದು ಫ್ಲ್ಯಾಶ್ ಮಾಡಿಸಿಕೊಳ್ಳುತ್ತಿದ್ದಳು. ಆದರೆ, ಇತ್ತೀಚೆಗೆ ಆಕೆ ಹೆಚ್ಚಿನ ಮೊಬೈಲ್ ಗಳನ್ನು ತಂದು ಫ್ಲ್ಯಾಶ್ ಮಾಡಿಕೊಡುವಂತೆ ಹೇಳುತ್ತಿದ್ದಳು. ಅದರಿಂದ ಅನುಮಾನಗೊಂಡ ಇಮ್ರಾನ್, ಇನ್ಮುಂದೆ ಮೊಬೈಲ್ ಫ್ಲ್ಯಾಶ್ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾನೆ.
ಅದಕ್ಕೆ ಕೋಪಗೊಂಡ ಸಾದೀಯಾ, ಕೆಲ ದಿನಗಳ ಹಿಂದೆ ತನ್ನ ಇಬ್ಬರು ಸಹಚರರನ್ನು ಹೆಗಡೆ ನಗರಕ್ಕೆ ಕಳುಹಿಸಿ ಇಮ್ರಾನ್ ಮೇಲೆ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ.