ಬೆಂಗಳೂರು(Bengaluru): ಕಬ್ಬು ಬೆಲೆ ನಿಗದಿ ಮತ್ತು ಹಳೇ ಬಾಕಿ ಪಾವತಿಗೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ರೈತರನ್ನು ಪೊಲೀಸರು ರೈಲ್ವೆ ನಿಲ್ದಾಣ ಬಳಿ ಬಂಧಿಸಿ ಆಡುಗೋಡಿ ಮೈದಾನಕ್ಕೆ ಕರೆದೊಯ್ಯಲಾಯಿತು.
ನ್ನು ಕಬ್ಬು ಬೆಲೆ ನಿಗದಿಗಾಗಿ ಹಳೇ ಬಾಕಿ ಪಾವತಿಗಾಗಿ ಒತ್ತಾಯಿಸಿ ಮತ್ತು ಕರ ನಿರಾಕರಣೆ ಚಳುವಳಿಯಲ್ಲಿ ಕಟ್ಟದ ಗೃಹ ವಿದ್ಯತ್ ಬಿಲ್ ಬಲವಂತದ ವಸೂಲಿ ಕ್ರಮದ ವಿರುದ್ಧ ಇಂದು ರಾಜ್ಯ ರೈತ ಸಂಘ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹಾಕಲು ಕರೆ ನೀಡಿತ್ತು.
ಪ್ರತಿಭಟನೆಗಾಗಿ ವಿವಿಧ ಭಾಗಗಳಿಂದ ಬಂದಿದ್ದ ರೈತರು ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ್ದರು. ಪೊಲೀಸರು ನಾಲ್ಕು ಬಸ್‌ಗಳ ಸಮೇತ ಅಲ್ಲಿಗೆ ಬಂದು ರೈತರನ್ನು ಬಸ್‌ನೊಳಗೆ ಎಳೆದೊಯ್ದರು. ಅಲ್ಲಿಂದ ಅವರನ್ನು ಹೊಸೂರು ರಸ್ತೆಯ ಆಡುಗೋಡಿ ಮೈದಾನಕ್ಕೆ ಕರೆದುಕೊಂಡು ಹೋದರು. ಪೊಲೀಸರ ಈ ಕ್ರಮವನ್ನು ಖಂಡಿಸಿ ರೈತರು ಆಡುಗೋಡಿ ಮೈದಾನದಲ್ಲಿಯೇ ಪ್ರತಿಭಟನೆ ನಡೆಸಿದರು.