ಬೆಂಗಳೂರು(Bengaluru): ಪ್ರೀತಿ ಹೆಸರಲ್ಲಿ ಯುವತಿ ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದು, ಮತಾಂತರ ನಿಷೇಧ ಕಾಯ್ದೆ 5ರಡಿ ಪ್ರಕರಣ ದಾಖಲಾಗಿದೆ.
ಸೈಯದ್ ಮೋಹಿನ್ ಬಂಧಿತ ಆರೋಪಿ.
ಪ್ರೀತಿ ಹೆಸರಲ್ಲಿ ಯುವತಿಯನ್ನ ಮತಾಂತರ ಮಾಡಿದ್ಧ ಆರೋಪ ಸೈಯದ್ ಮೋಹಿನ್ ವಿರುದ್ಧ ಕೇಳಿಬಂದಿದ್ದು, ಮತಾಂತರ ಆದರೆ ಮದುವೆಯಾಗುವುದಾಗಿ ಸೈಯದ್ ಮೋಹಿನ್ ಯುವತಿಗೆ ಹೇಳಿದ್ದ ಎನ್ನಲಾಗಿದೆ.
ಈ ನಡುವೆ ಆಕ್ಟೋಬರ್ 5 ರಂದು ಯುವತಿ ಮನೆಯಿಂದ ನಾಪತ್ತೆಯಾಗಿದ್ದು, ಯುವತಿ ಕಾಣೆಯಾದ ಬಗ್ಗೆ ಆಕೆಯ ಪೋಷಕರು ದೂರು ನೀಡಿದ್ದರು. ಯಶವಂತಪುರ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ನಿನ್ನೆ ಯುವತಿ ಪೋಷಕರು ಮತಾಂತರ ಎಂದು ದೂರು ನೀಡಿದ್ದರು.