ಕಲಬುರಗಿ(Kalburgi): ಕಾಂಗ್ರೆಸ್ನವರು ಆರೋಪ ಮಾಡ್ತಾರೆ, ದಾಖಲಾತಿ ಕೇಳಿದ್ರೆ ಓಡಿ ಹೋಗ್ತಾರೆ. ತನಿಖೆ ಸರಿಯಾಗಿ ನಡೆದರೆ ಎಲ್ಲಿ ತಮ್ಮ ಬುಡಕ್ಕೆ ಬರುತ್ತೋ ಎಂದು ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ನವರು ಮಾಡ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 300 ಕೋಟಿ ರೂ ಅಕ್ರಮ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ಕೊಟ್ಟರು. ಸಿದ್ದರಾಮಯ್ಯ 300 ಕೋಟಿ ಅಲ್ಲ 3,000 ಕೋಟಿ ಆರೋಪ ಮಾಡ್ಲಿ, ಮಾತಾಡೋಕೆ ಅವರಿಗೆ ವಾಕ್ ಸ್ವಾತಂತ್ರ್ಯ ಇದೆ. ನಿರಾಧಾರವಾಗಿ ಆರೋಪ ಮಾಡೋದು, ದಾಖಲಾತಿ ಕೇಳಿದ್ರೆ ಓಡಿಹೋಗೋದು ಕಾಂಗ್ರೆಸ್ ಕೆಲಸ. ಪ್ರಕರಣದಲ್ಲಿ ಸಿಲುಕಿದವರು ಬಹುತೇಕ ಕಾಂಗ್ರೆಸ್ನವರೇ ಎಂದರು.
ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಅಕ್ರಮದಲ್ಲಿ ಕೈ ಹಾಕಿದವರು ಇನ್ನೊಮ್ಮೆ ಹೀಗೆ ಮಾಡಬಾರದು. ಮುಟ್ಟಿ ನೋಡ್ಕೋಬೇಕು, ಹಾಗೆ ಮಾಡ್ತೀವಿ ಎಂದು ಅವರು ಎಚ್ಚರಿಕೆ ಕೊಟ್ಟರು.














