Saval TV on YouTube
ಬೆಂಗಳೂರು(Bengaluru): ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಕಬಳಿಕೆಗೆ ಯತ್ನಿಸಿದ ಆರೋಪದಡಿ ಬಿಬಿಎಂಪಿಯ ಪ್ರಥಮ ದರ್ಜೆ ಸಹಾಯಕ ಸೇರಿದಂತೆ ಐವರು ಆರೋಪಿಗಳನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರ್. ಆರ್ ನಗರ ಬಿಬಿಎಂಪಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ನವೀನ್, ಜನಾರ್ದನ್, ನಾರಾಯಣಸ್ವಾಮಿ, ಎಂ. ಎಸ್ ಪ್ರಸಾದ್ ಹಾಗೂ ಎಂ. ಎಸ್ ದಿವ್ಯ ಬಂಧಿತರು.
ಪಟ್ಟಣಗೆರೆ ಗ್ರಾಮದ ರಾಮಕೃಷ್ಣಯ್ಯ ಎಂಬುವವರು 40 ಕೋಟಿ ಮೌಲ್ಯದ 3 ಎಕರೆ ಜಮೀನು ಹೊಂದಿದ್ದು, ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ಆರೋಪಿಗಳು ನಕಲಿ ಭೂ ದಾಖಲೆ, ಜಮೀನು ಮಾಲೀಕನ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ ವಂಚಿಸಲಾಗಿದೆ ಎಂದು ರಾಮಕೃಷ್ಣಯ್ಯ ದೂರು ನೀಡಿದ್ದರು.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.