ಮನೆ ತಂತ್ರಜ್ಞಾನ ಭಾರತದಲ್ಲಿ ಹೊಸ ಇ-ಕಾರ್ ಬಿಡುಗಡೆ ಮಾಡಿದ ಆಡಿ

ಭಾರತದಲ್ಲಿ ಹೊಸ ಇ-ಕಾರ್ ಬಿಡುಗಡೆ ಮಾಡಿದ ಆಡಿ

0

ಹೊಸದಿಲ್ಲಿ(New delhi): ಆಡಿ ತನ್ನ ಹೊಸ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೇಸಿಕ್ ಕ್ವಾಟ್ರೋ ಮಾದರಿಯ ಕಾರಿನ ದರ  1.80 ಕೋಟಿ ಇದ್ದು, ಟಾಪ್ ಆಫ್ ದಿ ಲೈನ್ ಆರ್ ಎಸ್ ಮಾದರಿಯ ಕಾರಿಗೆ  2.05 ಕೋಟಿ ನಿಗದಿ ಪಡಿಸಲಾಗಿದೆ. ಇವೆರಡೂ ಎಕ್ಸ್- ಶೋರೂಂ ದರಗಳು.

ಜರ್ಮನಿ ಮೂಲದ ಕಾರು ತಯಾರಿಕ ಕಂಪನಿ ಆಡಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೂರನೇ ಎಲೆಕ್ಟ್ರಿಕ್ ಕಾರ್ ಇದಾಗಿದ್ದು, ಕೆಲ ತಿಂಗಳ ಹಿಂದೆ ಇ-ಟ್ರಾನ್ ಎಸ್ಯುವಿ ಹಾಗೂ ಇ-ಟ್ರಾನ್ ಸ್ಪೋರ್ಟ್ ಬ್ಯಾಕ್ ಎಸ್ಯೂವಿ ಕಾರನ್ನು ಆಡಿ ಭಾರತದಲ್ಲಿ ಬಿಡುಗಡೆ ಮಾಡಿತ್ತು.

ಜರ್ಮನಿಯಲ್ಲೇ ಈ ಕಾರು ಸಂಪೂರ್ಣವಾಗಿ ತಯಾರಾಗಿ ಭಾರತಕ್ಕೆ ಬರಲಿದೆ. ಜರ್ಮನಿಯ ಆಡಿ ಬೊಲಿಂಗರ್ ಹೋಫ್ ಫೆಸಿಲಿಟಿಯಲ್ಲಿ ಕಾರು ಪೂರ್ಣವಾಗಿ ತಯಾರಾಗಿ ಭಾರತಕ್ಕೆ ಆಮದು ಆಗಲಿದೆ.

ಇ ಕಾರು ಎರಡು ಮಾದರಿಯಲ್ಲಿ ಇದ್ದು, ಇ-ಟ್ರಾನ್ ಜಿಟಿ ಹಾಗೂ ಆರ್’ಎಸ್ ಇ-ಟ್ರಾನ್ ಜಿಟಿ ಎಂಬ ಎರಡು ಮಾದಿಯಲ್ಲಿ ಲಭ್ಯವಿದೆ.

ಕಾರು ಡಿಸೈನಿಂಗ್ ಉತ್ತಮವಾಗಿದ್ದು, ಆಧುನಿಕ ತಂತ್ರಜ್ಞಾನಗಳನ್ನು ಕಾರಿನಲ್ಲಿ ಅಳವಡಿಸಲಾಗಿದೆ. ಒಮ್ಮೆ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಿದರೆ 500 ಕಿಲೋ ಮೀಟರ್ ಕ್ರಮಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಭಾರತದ ರಸ್ತೆಗಳಿಗೆ ಇದು ಎಷ್ಟು ಸೂಕ್ತ ಎನ್ನುವುದು ಕಾದು ನೋಡಬೇಕಿದೆ.

ಪ್ಯಾನೆಲ್.ನಲ್ಲಿ ಕಂಪನಿಯ ಸಿಗ್ನೇಚರ್, ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್’ಲೈಟ್’ಗಳು, ಓಆರ್’ವಿಎಂ ಇಂಡಿಕೇಟರ್’ಗಳು, 19 ಇಂಚ್ನ ಚಕ್ರ ಈ ಕಾರಿನ ವಿಶೇಷ. ಎಲ್ಇಡಿ ಟಿಲ್ಲಾಂಪ್, ರ್ಯಾಕ್ ಮಾದರಿಯ ಕಿಟಕಿ ಬಾಗಿಲು ವಿಶೇಷವಾಗಿ ಗಮನ ಸೆಳೆಯುತ್ತದೆ. ಒಟ್ಟು ಒಂಬತ್ತು ಬಣ್ಣಗಳಲ್ಲಿ ಈ ಕಾರು ಲಭ್ಯ ಇದೆ.

ಐದು ಸೀಟರ್’ಗಳ ಲಕ್ಸುರಿ ಕಾರ್ ಇದಾಗಿದ್ದು, ಅಕೌಸ್ಟಿಕ್ ಎಚ್ಚರಿಕೆ ವ್ಯವಸ್ಥೆ, ಸ್ಪೋರ್ಟ್ಸ್ ಮಾದರಿಯ ಮುಂಭಾಗ ಸೀಟುಗಳು, ಫ್ಲ್ಯಾಟ್ ಬಾಟಮ್ ಸ್ಟ್ರೀರಿಂಗ್ ಆಕರ್ಷಣೀಯವಾಗಿದೆ. ಇದರ ಜತೆಗೆ 12.3 ಇಂಚಿನ ವರ್ಚ್ಯುವಲ್ ಕಾಕ್ಪೀಟ್, 10.1 ಇಂಚ್ನ ಟಚ್ ಸ್ಕ್ರೀನ್ ಟಿ.ವಿ,ವೈ-ಫೈ ಹಾಟ್ ಸ್ಪಾಟ್, ವಾಯ್ಸ್ ಕಮಾಂಡ್ ಇದರ ವಿಶೇಷ. ಪ್ರಯಾಣಿಕರ ಸುರಕ್ಷತೆಗೆ ಏರ್ಬ್ಯಾಗ್ಸ್ ಹಾಗೂ ಪಾರ್ಕಿಂಗ್ ಕ್ಯಾಮೆರಾ ಕೂಡ ಇದೆ.

ಈ ಕಾರು ಎರಡು ಎಲೆಕ್ಟ್ರಿಕ್ ಮೋಟಾರ್’ಗಳನ್ನು ಹೊಂದಿದ್ದು, 85kWh ಲೀಥಿಯಂ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಬ್ಯಾಟರಿಗಳು ಫಾಸ್ಟ್ ಚಾರ್ಜಿಂಗ್ ಆಗಿದ್ದು, ಎರಡು ಸ್ಪೀಡ್ ಟ್ರಾನ್ಸ್ಮಿಷನ್ ಇರುವುದು ಗಮನ ಸೆಳೆಯುತ್ತದೆ. ಗರಿಷ್ಠ ಗಂಟೆಗೆ 250 ಕಿ.ಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಕೇವಲ 3.3 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಲೋ ಮೀಟರ್ ವೇಗವನ್ನು ತೆಗೆದಕೊಳ್ಳಲು ಈ ಕಾರಿಗೆ ಸಾಧ್ಯವಿದೆ. ಸಂಪೂರ್ಣವಾಗಿ ಜರ್ಮನಿಯಲ್ಲೇ ಈ ಕಾರು ನಿರ್ಮಾಣವಾಗಿ ಭಾರತಕ್ಕೆ ಬಲಿದ್ದು, ಜಿಟಿ ಕ್ವಾಟ್ರೋ ಮಾದರಿಗೆ 1.80 ಕೋಟಿ ಇದ್ದು, ಟಾಪ್ ಆಫ್ ದಿ ಲೈನ್ ಆರ್ ಎಸ್ ಮಾದರಿಯ ಕಾರಿಗೆ 2.05 ನಿಗದಿ ಮಾಡಲಾಗಿದೆ. ಆಯಾ ರಾಜ್ಯದ ತೆರಿಗೆ ಹಾಗೂ ಸಬ್ಸಿಡಿಗೆ ಅನುಗುಣವಾಗಿ ದರ ಬದಲಾಗಲಿದೆ.