ದೀಕ್ಷಿತ್ ಶೆಟ್ಟಿ ನಟನೆಯ “ಬ್ಲಿಂಕ್’ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಶಿವರಾತ್ರಿ ಹಬ್ಬದಂದು ಸ್ಟಾರ್ಗಳ ಸಿನಿಮಾ ಮಧ್ಯೆ ತೆರೆಗೆ ಬಂದ ಬ್ಲಿಂಕ್ ಸಿನಿಮಾಗೆ ಪ್ರಾರಂಭದಲ್ಲಿ ಅಷ್ಟಾಗಿ ಹೆಚ್ಚಿನ ಶೋ ಸಿಕ್ಕಿರಲಿಲ್ಲ. ಆದರೆ, ಸಿನಿಮಾ ನೋಡಿದವರ ಮೆಚ್ಚುಗೆಯ ಮಾತುಗಳ ಮೂಲಕ ಬ್ಲಿಂಕ್ ಶೋಗಳು ಏರಿಕೆಯಾಯಿತು. ಈಗ 8 ಶೋಗಳಿಂದ 82 ಶೋ ಬ್ಲಿಂಕ್ ಪಾಲಾಗಿದೆ. ಇದಕ್ಕೆ ಕನ್ನಡ ಪ್ರೇಕ್ಷಕನ ಬೆಂಬಲ ಕಾರಣ ಎನ್ನುವುದು ತಂಡದ ಮಾತು.
ಶಿವಣ್ಣ ಬ್ಲಿಂಕ್ ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಸಿಂಪಲ್ ಸುನಿ, ನವೀನ್ ಶಂಕರ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ಬ್ಲಿಂಕ್ ಗೆ ಬಹುಪರಾಕ್ ಎಂದಿದ್ದರು.
ಶ್ರೀನಿಧಿ ಬೆಂಗಳೂರು ನಿರ್ದೇಶನದ “ಬ್ಲಿಂಕ್’ ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.