ನಟ ವಿನಯ್ ರಾಜಕುಮಾರ್ ಅಭಿನಯದ “ಅದೊಂದಿತ್ತು ಕಾಲ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ “ಅದೊಂದಿತ್ತು ಕಾಲ’ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಚಿತ್ರದ ಆಡಿಯೋ ಹಕ್ಕನ್ನು ಎ2 ಆಡಿಯೋ ಸಂಸ್ಥೆ ಭರ್ಜರಿ ಬೆಲೆಗೆ ಖರೀದಿಸಿದೆ. ಈ ಮೂಲಕ ಚಿತ್ರತಂಡ ಖುಷಿಯಾಗಿದೆ.
ವಿ.ರಾಘವೇಂದ್ರ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳಿಗೆ ಡಾ. ವಿ.ನಾಗೇಂದ್ರ ಪ್ರಸಾದ್ ಹಾಗೂ ಧನಂಜಯ್ ರಂಜನ್ ಸಾಹಿತ್ಯವಿದೆ. ಸಿದ್ ಶ್ರೀರಾಮ್, ವಿಜಯಪ್ರಕಾಶ್ ಸೇರಿದಂತೆ ಅನೇಕ ಖ್ಯಾತ ಗಾಯಕರು ಚಿತ್ರದ ಹಾಡುಗಳಿಗೆ ದನಿಗೂಡಿಸಿದ್ದಾರೆ. ಇದರ ಜೊತೆಗೆ ಚಿತ್ರತಂಡ ಬಿಟ್ಟಿರುವ ಹಾಡಿನ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
90 ರ ದಶಕದ ಕಥೆಯಿಂದ ಚಿತ್ರ ಆರಂಭವಾಗಲಿದ್ದು, ನಾಯಕನ ವಿವಿಧ ಮಜಲುಗಳನ್ನು ತೋರಿಸುತ್ತಾ ಸಾಗುತ್ತದೆಯಂತೆ. ಚಿತ್ರದಲ್ಲಿ ನಟ ರವಿಚಂದ್ರನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. “ಭುವನ್ ಸಿನಿಮಾಸ್’ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ಹಾಗೂ ಎನ್. ಲೋಕೇಶ್ ನಿರ್ಮಿಸುತ್ತಿರುವ “ಅಂದೊಂದಿತ್ತು ಕಾಲ’ ಸಿನಿಮಾಕ್ಕೆ ಕೀರ್ತಿ ನಿರ್ದೇಶನವಿದೆ.
ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಅವರಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನಿಶಾ ಮಿಲನ, ಅರುಣಾ ಬಾಲರಾಜ್ ಮೋಹನ್ ಜುನೇಜಾ, ಕಡ್ಡಿಪುಡಿ ಚಂದ್ರು, ಮಜಾ ಭಾರತ್ ಜಗ್ಗಪ್ಪ, ಧರ್ಮೆಂದ್ರ ಅರಸ್, ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಗೋವಿಂದೇಗೌಡ ಮುಂತಾದವರು “ಅಂದೊಂದಿತ್ತು ಕಾಲ’ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.