ರಾಜಯೋಗವಿದ್ದ ತಿಂಗಳಲ್ಲಿ ವೈಶಾಖ, ಶ್ರಾವಣ, ಕಾರ್ತಿಕ,ಮಾಘ ಮಾಸಗಳಲ್ಲಿ ಉತ್ತಮ. ಮಾರ್ಗಶಿರ,ಪಾಲ್ಗುಣ ಮತ್ತು ಜೇಷ್ಠ ಮಾಸಗಳ ಕೃಷ್ಣ ಪಕ್ಷದಲ್ಲಿ ಮಧ್ಯಮವು ರಾಜಯೋಗವಿರುವ ಮಾಸಗಳಲ್ಲಿ ರೋಹಿಣಿ,ಉತ್ತರ. ಉತ್ತರಾಷಾಢ, ಉತ್ತರ ಭಾದ್ರಪದ ಮೃಗಶಿರ, ಪುಷ್ಯ ಅನುರಾಧ,ಶ್ರಾವಣಾ, ಸ್ವಾತಿ, ರೇವತಿ, ಮೂಲ ನಕ್ಷತ್ರಗಳಲ್ಲಿ ಶುಭವಾರ, ಶುಭ ತಿಥಿಗಳಲ್ಲಿಯೂ ಸ್ಥಿರ ಲಗ್ನದ ಶುಭದ ಗ್ರಹಗಳ ಬಲವಿದ್ದಾಗ್ಗೆ ಉತ್ತಮವು.
ಭೂಮಿಯನ್ನು ಶೋಧಿಸುವುದು :
ಶ್ಲೋಕ :
ಕಟ್ಟಿ ಪ್ರಮಾಣಂ ಶುದ್ರಾಣಾಂ ವೈಶಾಣಾಂ ನಾಭಿ ಮಾತ್ರತಃ|
ಗ್ರೀವಾ ಪ್ರಮಾಣಂ ವಿಪ್ರಾಣಾಂ ನೃಪಾಣಾಂ ಮೂರ್ಧಮಾತ್ರತಃ ||
ಹೊಸ ಮನೆ ಕಟ್ಟಿಸುವ ಬೈಲು ಜಾಗೆಯನ್ನು ಚೆನ್ನಾಗಿ ಶೋಧಿಸುವುದು ಅತ್ಯವಶ್ಯವು. ಹೇಗೆಂದರೆ ಶೂದ್ರರು ಸೊಂಟದವರೆಗೂ, ವೈಶ್ಯರು ಹೊಕ್ಕಳದವರೆಗೂ ಕ್ಷತ್ರಿಯರು ತಲೆಯವರೆಗೂ ಮತ್ತು ಬ್ರಾಹ್ಮಣರು,ವೀರಶೈವರು ಕುತ್ತಿಗೆಯವರೆಗೂ ಭೂಮಿಯನ್ನು ಅಗೆದು ಶೋಧಿಸತಕ್ಕದ್ದು ಎಂದು ಶಾಸ್ತ್ರವು ಹೇಳುವದು. ಆದರೆ ಕೆಲವು ಶಾಸ್ತ್ರಜ್ಞರು ಹೇಳುವದೇನಂದ್ರೆ ಬ್ರಾಹ್ಮಣ, ವೀರಶೈವರು ಮತ್ತು ಕ್ಷತ್ರಿಯರು ಆರುಗೇಣು ಪ್ರಮಾಣವನ್ನೂ ವೈಶ್ಯ ಶೂದ್ರರು 5 ಗೆ ಏನು ಪ್ರಮಾಣವನ್ನು ದೇವಸ್ಥಾನ ಮಠ ಮಾನ್ಯರಿಗೆ 9 ಗೇಣು ಪ್ರಮಾಣದ ಒಂದು ತೆಗ್ಗನ್ನು ತೆಗೆದು ಭೂ ಶೋಧನೆ ಮಾಡತಕ್ಕದ್ದೆಂದೂ ಸಹ ಹೇಳುತ್ತಾರೆ.
ಹೀಗೆ ಭೂಮಿಯನ್ನು ಶೋಧಿಸುವಾಗ ಕಲ್ಲು,ಕಟ್ಟಿಗೆ,ಲೋಹ, ಹಣ, ಗಿಡದ ಬೊಡ್ಡೆ, ಆಮೆ, ಕಪ್ಪೆ ಹೂಗಳು ದೊರೆತರೆ ಶುಭಕರವು. ಕಟ್ಟಿಗೆಯ ತುಂಡುಗಳು ಆ ಸ್ಥಳದಲ್ಲಿ ಇದ್ದರೆ ಅಗ್ನಿ ಭಯವುಂಟು ಹಂಚು ಬೋಕಿಗಳು ಸಾಕಷ್ಟು ಕಂಡರೆ ಜಗಳವು ಬೂದಿ ಕಂಡರೆ ವ್ಯಾಧಿ ಪೀಡೆಯು ಇದ್ದಲ್ಲಿ ಕಂಡರೆ ಮರಣ ಪ್ರದವು ಎಲುಬುಗಳು ಕಂಡರೆ ವಂಶ ನಾಶವಾಗುವುದೆಂದು ಹೇಳಿಕೆ ಇದೆ.ಚೇಳು ಹಾಗೂ ಕಂಡರೆ ಮಾತ್ರ ಭಯದ ಜಾಗೆ ಎಂದು ತಿಳಿಯಬೇಕು.
ಆದರೆ ಭೂಶೊಧಾನ ಕಾಲದಲ್ಲಿ ಎಲಬು ಬೂದಿ, ಇದ್ದಿಲು ಮುಂತಾದವುಗಳು ಹೊರಟರೆ ಅವುಗಳನ್ನೆಲ್ಲ ಚೆನ್ನಾಗಿ ಆರಿಸಿ ತೆಗೆದೊಗೆದು ಬೇರೆ ಸ್ವಲ್ಪ ಶುದ್ಧ ಮಣ್ಣನ್ನು ಆ ಜಾಗದಲ್ಲಿ ಹಾಕಿ ಎರಡು ಮೂರು ದಿನಗಳವರೆಗೆ ಆ ಜಾಗೆಯಲ್ಲಿ ನೀರನ್ನು ಹಾಕುತ್ತ ಘಟ್ಟಿಗೊಳಿಸಬೇಕು. ಈ ರೀತಿ ಭೂ ಸೋಧನೆಯನ್ನು ಮಾಡಿದ ನಂತರವೇ ವಾಸ್ತು ಪೂಜೆ, ಶಂಕುಸ್ಥಾಪನಾ ಕಾರ್ಯ ಥರ ತೆಗೆಯುವುದು ಇತ್ಯಾದಿ ಕಾರ್ಯಗಳನ್ನು ಮಾಡತಕ್ಕದ್ದು.