Saval
ಮಂಡ್ಯ: ದೇಣಿಗೆ ಕೊಡುವ ಆಮಿಷವೊಡ್ಡಿ ನಕಲಿ ನೋಟು ಕೊಟ್ಟು 1.10 ಕೋಟಿ ದೋಚಿ ಆರೋಪಿ...
ಮಂಡ್ಯ: ಶಿಕ್ಷಣ ಸಂಸ್ಥೆಗೆ 25 ಕೋಟಿ ದೇಣಿಗೆ ಕೊಡುವ ಆಮಿಷವೊಡ್ಡಿ ನಕಲಿ ನೋಟು ಕೊಟ್ಟು 1.10 ಕೋಟಿ ದೋಚಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾಪುರ ಗ್ರಾಮದಲ್ಲಿ ನಡೆದಿದೆ.
ಶಿಂಷಾಪುರದ ಮೇರಿ...
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯಕ್ರಮ
ಮೈಸೂರು: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಪ್ರದೇಶಗಳಲ್ಲಿ ಮಂಗಲ ಗ್ರಾಮ ಪಂಚಾಯಿತಿ ವತಿಯಿಂದ ನಮ್ಮ ಗುಂಡ್ಲುಪೇಟೆ ಮತ್ತು ಪಗ್ ಪೆಟ್ರೋಲ್ಸ್ ಸಹಯೋಗದಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯಕ್ರಮದ ಎರಡನೇ ಹಂತವನ್ನು ಯಶಸ್ವಿಯಾಗಿ...
NIRT: 32 ಪ್ರಾಜೆಕ್ಟ್ ಟೆಕ್ನಿಕಲ್ ಸಪೋರ್ಟ್ II (ಎಕ್ಸ್ ರೇ ಟೆಕ್ನಿಷಿಯನ್) ಖಾಲಿ ಹುದ್ದೆಗಳಿಗೆ...
ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಕ್ಷಯರೋಗವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಪ್ರಾಜೆಕ್ಟ್ ಟೆಕ್ನಿಕಲ್ ಸಪೋರ್ಟ್ II (ಎಕ್ಸ್ ರೇ ಟೆಕ್ನಿಷಿಯನ್) ಪೋಸ್ಟ್‌ಗಳನ್ನು ಭರ್ತಿ ಮಾಡಲು ಎನ್ ಐಆರ್ ಟಿ...
ಕಾಂಗ್ರೆಸ್ ನವರಿಗೆ ಶ್ರೀರಾಮನ ಶಾಪ ತಟ್ಟುತ್ತೆ: ಪ್ರಮೋದ್ ಮುತಾಲಿಕ್ ವಾಗ್ದಾಳಿ
ಬೆಳಗಾವಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಇಂದು ರಜೆ ಕೊಟ್ಟಿದ್ದರೆ ಅವರಪ್ಪನ ಮನೆ ಗಂಟು ಏನು ಹೋಗುತಿತ್ತು. ಕೇಂದ್ರ ಸರ್ಕಾರ ಅರ್ಧ ದಿನ ರಜೆ ನೀಡಿ ಹಬ್ಬಕ್ಕೆ ಅವಕಾಶ ಕೊಟ್ಟಿದೆ....
ಮೂರು ದಿನಗಳ ಕಾಲ ಆದ್ದೂರಿ ಮೈಸೂರು ಫೆಸ್ಟ್
ಮೈಸೂರು: ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಜನವರಿ 26 ರಿಂದ 28 ರವರೆಗೆ ಮೈಸೂರು ವಿಶ್ವವಿದ್ಯಾಲಯ ಬಯಲು ರಂಗ ಮಂದಿರದಲ್ಲಿ ಮೈಸೂರು ಫೆಸ್ಟ್ 2024 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
26 ರಂದು ಬೆಳಿಗ್ಗೆ 11.30 ಕ್ಕೆ ಚಿತ್ರಸಂತೆ, ಫ್ಲೀ ಮಾರ್ಕೆಟ್ ಹಾಗೂ ಮೈಸೂರು ಫುಡ್ ಫೆಸ್ಟ್ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ ರವರು ಉದ್ಘಾಟಿಸುವರು.
ಜನವರಿ 27 ರಂದು ಸಂಜೆ 7 ಗಂಟೆಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಕೆ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಚಾಮರಾಜ ಕ್ಷೇತ್ರ ವಿಧಾನಸಭಾ ಸದಸ್ಯರು ಕೆ.ಹರೀಶ್ ಗೌಡ ರವರು ಅಧ್ಯಕ್ಷತೆ ವಹಿಸುವರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಉಪಸ್ಥಿತರಿರುವರು. ಮೈಸೂರು ಕೊಡಗು ಕ್ಷೇತ್ರ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಚಾಮರಾಜನಗರ ಕ್ಷೇತ್ರ ಲೋಕಸಭಾ ಸದಸ್ಯರಾದ ವಿ ಶ್ರೀನಿವಾಸ್ ಪ್ರಸಾದ್, ಮಂಡ್ಯ ಕ್ಷೇತ್ರ ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ಮುಖ್ಯ ಅತಿಥಿಗಳಾಗಲಿದ್ದಾರೆ.
ಸಮಾರಂಭದ ಅತಿಥಿಗಳಾಗಿ ವಿಧಾನಸಭೆಯ ಶಾಸಕರುಗಳಾದ ತನ್ವೀರ್ ಸೇಠ್, ಜಿ ಟಿ ದೇವೇಗೌಡ, ಅನಿಲ್ ಕುಮಾರ್ ಸಿ, ರವಿಶಂಕರ್ ಡಿ, ಜಿ.ಡಿ ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಟಿ.ಎಸ್ ಶ್ರೀವತ್ಸ ಹಾಗೂ ವಿಧಾನಪರಿಷತ್ತಿನ ಶಾಸಕರುಗಳಾದ ಮರಿ ತಿಬ್ಬೆಗೌಡ, ಎಚ್ ವಿಶ್ವನಾಥ್, ಡಾ.ಡಿ ತಿಮ್ಮಯ್ಯ, ಸಿ.ಎನ್ ಮಂಜೇಗೌಡ, ಮಧು ಜಿ. ಮಾದೇಗೌಡ, ಆಗಮಿಸಲಿದ್ದಾರೆ.
ಸಾಂಸ್ಕೃತಿಕ ವೈಭವ ಕಾರ್ಯಕ್ರಮವು 27 ಶನಿವಾರ ಸಂಜೆ 5 ರಿಂದ 7 ರವರೆಗೆ ವಾಯಿಲಿನ್‌ಫ್ಯೂಷನ್, ಚೆಂಡೆ ಮತ್ತು ನೃತ್ಯ ತಂಡದವರಿOದ ಉಯಿರೆ ಉಯಿರೆ ಬಿಜಿಎಂ ಚೆಮ್ಮನ್ ಬ್ಯಾಂಡ್ ಹಾಗೂ 8 ರಿಂದ 10ರವರೆಗೆ ಅಂತರಾಷ್ಟ್ರೀಯ ಗಾಯಕ ಪೃಥ್ವಿ, ಸವಾರಿ ಹಾಗೂ ನೂರು ಸಿನಿಮಾಗಳ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಹಾಗೂ ಬಾಂಬೆ ಸಿಂಗರ್ ಅಂಶಿಕ ಅಯ್ಯರ್ ತಂಡದಿOದ ಗಾನ ಮಾಧುರ್ಯ ಮಣಿಕಾಂತ್ ಕದ್ರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
28 ರಂದು ಸಂಜೆ 6 ರಿಂದ 8 ರವರೆಗೆ ಸಿರಿಗನ್ನಡ ಟಿವಿ ಚಾನಲ್ ರವರಿಂದ ಹಾಸ್ಯ ದರ್ಬಾರ್ ಮತ್ತು ರಾತ್ರಿ 8 ರಿಂದ 10 ರವರೆಗೆ ಖ್ಯಾತ ಚಲನಚಿತ್ರ ಗಾಯಕ ಸಂತೋಷ್ ವೆಂಕಿ ಲೈವ್ ಇನ್ ಕಾನ್ಸರ್ಟ್ ಮತ್ತು ನೃತ್ಯ ತಂಡದಿOದ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳ ಕುಟುಂಬ
ಅಯೋಧ್ಯೆ: ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಅವರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ...
ಕಾಂಗ್ರೆಸ್ ನವರು ಶ್ರೀರಾಮನ ವಿರುದ್ಧ ಎಂಬ ಅಪಪ್ರಚಾರವನ್ನು ಖಂಡಿಸುತ್ತೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ನವರು ಶ್ರೀರಾಮನ ವಿರುದ್ಧ ಇದ್ದಾರೆ ಎಂದು ಅಪಪ್ರಚಾರ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಶ್ರೀ ರಾಮ ಟೆಂಪಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀ ಸೀತಾ,...
ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ
ಮುಂಬೈ: ಅಫ್ಘಾನಿಸ್ತಾನ ವಿರುದ್ದದ ಟಿ20 ಸರಣಿ ಗೆದ್ದ ಭಾರತ ತಂಡ ಇದೀಗ ಮತ್ತೆ ಟೆಸ್ಟ್ ಮೂಡ್ ಗೆ ಮರಳಿದೆ. ಈ ವರ್ಷದ ಅತ್ಯಂತ ಯಶಸ್ವಿ ಸರಣಿಯಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಇನ್ನು...
ಜನವರಿ ೨೫ ರಂದು ಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ
ಮೈಸೂರು : ಸುತ್ತೂರು ಮಠದಲ್ಲಿ ಇದೇ ಜನವರಿ ೨೫ ರಂದು ಗುರುವಾರ ಸಂಜೆ ೬.೦೦ ಗಂಟೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳದಿಂಗಳ ಸಂಗೀತ-೨೬೩ರ ಅಂಗವಾಗಿ ವಿದುಷಿ ಸಂಗೀತಾ ಕಟ್ಟಿ...
‘ರವಿಕೆ ಪ್ರಸಂಗ’ ಫೆ.16ರಂದು ಚಿತ್ರ ತೆರೆಗೆ
ರವಿಕೆ ಪ್ರಸಂಗ ಎಂಬ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಫೆ.16ರಂದು ಚಿತ್ರ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ನಟ ಧನಂಜಯ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಸಂತೋಷ್ ಕೊಡೆಂಕೇರಿ ಈ...





















