ಡೆವಲಪ್ ಮೆಂಟಲ್ ಡಿಸಾರ್ಡರ್ಸ್ ನಲ್ಲಿ ಆಟಿಸಂ ಕೂಡ ಒಂದು. ಇದರ ಲಕ್ಷಣಗಳು ಮಗುವಿಗೆ 2-3 ವರ್ಷ ತುಂಬಿದ ಮೇಲೆ ಕಂಡುಬರುತ್ತದೆ. ಆರ್ಟಿಸಂ ಮಗು ಬಹಳ ಕಡಿಮೆ ಮಾತನಾಡುತ್ತದೆ. ಇತರರ ಬಗ್ಗೆ ಗಮನ ಹರಿಸುವುದಿಲ್ಲ. ಬೆಳವಣಿಗೆಗೆ ಎಲ್ಲ ಮಕ್ಕಳಂತೆ ಸೂಕ್ತವಾಗಿರುತ್ತದೆ. ತಲೆಯನ್ನು ಸರಿಯಾಗಿ ನಿಲ್ಲಿಸುವುದು, ಕುಳಿತುಕೊಳ್ಳುವುದು, ನಿಂತುಕೊಳ್ಳುವುದು, ನಡೆಯುವುದು, ಕ್ರಮಬದ್ಧವಾಗಿಯೇ ಇರುತ್ತದೆ. 1-2 ವರ್ಷಗಳವರೆಗೆ ಮಾತು ಕೂಡ ಚೆನ್ನಾಗಿ ಕಲಿಯುತ್ತದೆ ಆದರೆ ಆನಂತರ ಬಹಳ ಕಡಿಮೆ ಮಾತನಾಡುತ್ತದೆ. ಯಾರನ್ನು ಹಚ್ಚಿಕೊಳ್ಳುವುದಿಲ್ಲ. ಒಬ್ಬಂಟಿಯಾಗಿರುತ್ತದೆ. ಏನಾದರೂ ಬೇಕಾದರೆ ಕೇಳುವುದಾಗಲಿ, ಕೊಡದಿದ್ದರೆ ಅಳುವುದಾಗಲಿ, ಇರುವುದಿಲ್ಲ. ಸಾಮಾನ್ಯವಾಗಿ ಇಂತಹ ಮಕ್ಕಳನ್ನು ತಾಯಂದಿರು ಒಳ್ಳೆಯ ಮಗುವೆಂದು ಮುದ್ರೆ ಒತ್ತಿ ಮಗುವಿನ ಆಗುಹೋಗುಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಮಗುವಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದ
ಆಟಿಸಂ ಮಗುವಿನ ಗುಣಲಕ್ಷಣಗಳು :-
ಮಕ್ಕಳಲ್ಲಿ ಸಾಮಾನ್ಯವಾಗಿ ತಾಯಿ ತಂದೆಯರ ಮುಖವನ್ನು ನೋಡಿ ಮಾತನಾಡುತ್ತಾರೆ. ಆಟಿಸಂ ಮಕ್ಕಳು ಹಾಗೆ ಕಣ್ಣನ್ನು ನೋಡಿ ಮಾತನಾಡಲಾರರು. ತನಗೆ ಅನಾರೋಗ್ಯವಾದರೇ, ಜ್ವರ ಬಂದರೆ, ತನ್ನನ್ನು ಎತ್ತಿಕೊಳ್ಳುವಂತೆ ಮಡಿಲಿನಲ್ಲಿಟ್ಟುಕೊಳ್ಳುವಂತೆ ಕೇಳುವುದಿಲ್ಲ. ತಾಯಿಯಾಗಲಿ, ತಂದೆಯಾಗಲಿ, ಹೊರ ಹೋಗುತ್ತಿದ್ದರೆ ಬೈ ಎಂದು ಹೇಳುವುದಾಗಲಿ, ಹೇಳಿಸಿಕೊಳ್ಳುವುದಾಗಲಿ ಮಾಡುವುದಿಲ್ಲ. ಇತರ ಆಡುತ್ತಿದ್ದರೆ ಅವರೊಂದಿಗೆ ಬೆರತು ಆಡುವುದಿಲ್ಲ. ಒಂದು ಸಮಯ ಆಡೋದಾದರೆ ಒಬ್ಬಂಟಿಯಾಗಿ ಆಡಿಕೊಳ್ಳುತ್ತದೆ. ಇವರಿಗೆ ಸ್ನೇಹಿತರಿರುವುದಿಲ್ಲ, ಸ್ನೇಹ ಬೆಳೆಸುವುದಿಲ್ಲ. ತನ್ನ ಮನಸ್ಸಿನಲ್ಲಿರುವುದನ್ನು ಇತರರಿಗೆ ವಿವರಿಸಲು ಸನ್ನೆ ಆಗಲಿ ಮುಖದಲ್ಲಿ ಭಾವನೆಗಳನ್ನಾಗಲಿ ತೋರಿಸುವುದಿಲ್ಲ. ಯಾರಾದರೂ ನಕ್ಕರೆ ಪ್ರತಿಯಾಗಿ ನಗುವುದು ಇಲ್ಲ. ಯಾರೊಂದಿಗೂ ತಾನಾಗಿಯೂ ಮಾತನ್ನು ಆರಂಭಿಸುವುದಿಲ್ಲ. ವಿಚಿತ್ರವಾದ ನಡವಳಿಕೆ ಇರುತ್ತದೆ. ತಲೆ ಒಡೆದುಕೊಳ್ಳುವುದು, ಸದಾ ನಟ್ಟಿಗೆ ಮುರಿಯುವುದು, ತಲೆಯನ್ನು ತೂಗಾಡಿಸುವುದು, ವಾಸನೆ ಇಲ್ಲದರಲ್ಲಿಯೂ ವಾಸನೆ ನೋಡುವುದು ಮಾಡುತ್ತಿರುತ್ತಾರೆ.
ಆಮೇಲೆ ವಿವರಿಸಿದ ಲಕ್ಷಣಗಳಲ್ಲಿ ಅರ್ಧದಷ್ಟದರೂ ಇದ್ದರೆ ಆ ಮಗುವಿನಲ್ಲಿ ಆಟಿಸಂ ಇದೆ ಎಂದು ತಿಳಿಯಬೇಕು. ಆಟಿಸಂ ಉಂಟಾಗಲು ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಕೆಲವು ಕುಟುಂಬಗಳಲ್ಲಿ ಸಂಬಂಧಿಕರಿಂದ ಮಕ್ಕಳಿಗೆ ಆಟಿಸಂ ಸoಕ್ರಮಣ ವಾಗುತ್ತದೆ. ಆಟಿಸಂ ಮೆದುಳಿನ ರೋಗವಲ್ಲ. ಒಂದು ರೀತಿಯ ಮಾನಸಿಕ ಪರಿಸ್ಥಿತಿ.
ಚಿಕಿತ್ಸೆ :-
ಕೌನ್ಸಲಿಂಗ್ ಮತ್ತು ಮಾರ್ಗದರ್ಶನದ ಮೂಲಕ ಬಹುಮಟ್ಟಿಗೆ ಆಟಿಸಂ ಮಗುವಿನಲ್ಲಿ ಬದಲಾವಣೆ ತರಬಹುದು. ಮಗು ಏನು ಮಾತನಾಡದೆ ತನ್ನ ಕೆಲಸ ತಾನು ನೋಡಿಕೊಂಡು ಕುಳಿತಿರುತ್ತದೆ. ಎಂದು ಸುಮ್ಮನಿದ್ದರೆ ಮಗುವಿಗೆ ಅಭಿವೃದ್ಧಿ ಕುಂಠಿತವಾಗುತ್ತದೆ. ಸೂಕ್ತ ಮಾರ್ಗದರ್ಶನ ಮಾಡುವುದರ ಮೂಲಕ ನಾಲ್ವರಲ್ಲಿ ಬೆಳೆಯುವಂತೆ ಮಾಡಬಹುದು.