ಮನೆ ರಾಷ್ಟ್ರೀಯ ಬಸ್’ಗೆ ಆಟೋ ರಿಕ್ಷಾ ಡಿಕ್ಕಿ: 8 ಮಕ್ಕಳಿಗೆ ಗಂಭೀರ ಗಾಯ

ಬಸ್’ಗೆ ಆಟೋ ರಿಕ್ಷಾ ಡಿಕ್ಕಿ: 8 ಮಕ್ಕಳಿಗೆ ಗಂಭೀರ ಗಾಯ

0

ಪುದುಚೇರಿ: ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಆಟೋ ರಿಕ್ಷಾ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಪುದುಚೇರಿಯಲ್ಲಿ ಇಂದು (ಜೂ.20) ನಡೆದಿದೆ.

Join Our Whatsapp Group

ಆಟೋರಿಕ್ಷಾ ಮತ್ತು ಬಸ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎಂಟು ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪುದುಚೇರಿಯಲ್ಲಿ 1 ರಿಂದ 5 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಶಾಲೆಗೆ ಬಿಟ್ಟು ಆಟೋರಿಕ್ಷಾದಲ್ಲಿ ಬರಬೇಕಾದರೆ, ರಿಕ್ಷಾ ಎದುರಿನಲ್ಲಿ ಬರುತ್ತಿದ್ದ ಸಿಟಿ ಬಸ್‌ ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ತಕ್ಷಣ ಅಲ್ಲಿದ್ದ ಜನರು ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿದ್ದಾರೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.

ಆಟೋರಿಕ್ಷಾ ಚಾಲಕ ಸೇರಿ ಎಂಟು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಮುಖ್ಯಮಂತ್ರಿ ರಂಗಸ್ವಾಮಿ ಮತ್ತು ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಮಕ್ಕಳ ಪೋಷಕರಿಗೆ ನಾನು ಧೈರ್ಯ ಹೇಳಿದ್ದೇನೆ. ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು ಅಪಾಯದಲ್ಲಿದೆ. ಇಬ್ಬರು ಮಕ್ಕಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಆಸ್ಪತ್ರೆಗಳಿಗೆ ಕರೆದೊಯ್ಯಲು ಬಯಸಿದ್ದರು, ಆದರೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಈಗಾಗಲೇ ನರಶಸ್ತ್ರಚಿಕಿತ್ಸಕರು ಬಂದಿದ್ದು ಮತ್ತು ಅರಿವಳಿಕೆ ತಜ್ಞರಿಂದ ಇಂಟ್ಯೂಬೇಶನ್ ಮಾಡಲಾಗಿದೆ. ಮಕ್ಕಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದು ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಹೇಳಿದ್ದಾರೆ.

ಹಿಂದಿನ ಲೇಖನಏಷ್ಯಾ ಕಪ್​ ಟೂರ್ನಿ: ಫೈನಲ್​ ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ..!
ಮುಂದಿನ ಲೇಖನಪ. ಬಂಗಾಳ ಪಂಚಾಯತ್ ಚುನಾವಣೆ: ಸೇನಾಪಡೆ ನಿಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ