ಮನೆ ಅಪರಾಧ ಬೆಂಗಳೂರಲ್ಲಿ ಲಾರಿಗೆ ಆಟೋ ಡಿಕ್ಕಿ: ಮಹಿಳೆ ಸಾವು

ಬೆಂಗಳೂರಲ್ಲಿ ಲಾರಿಗೆ ಆಟೋ ಡಿಕ್ಕಿ: ಮಹಿಳೆ ಸಾವು

0

ಬೆಂಗಳೂರು: ಲಾರಿ – ಆಟೋ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಆಟೋ ಚಾಲಕ ಗಾಯಗೊಂಡಿರುವ ಘಟನೆ ಕಬ್ಬನ್ ಪಾರ್ಕ್ ಸಮೀಪದ ಕಾಫಿ ಬೋರ್ಡ್ ಸಿಗ್ನಲ್ ಬಳಿ ಇಂದು ಬೆಳಗ್ಗೆ ನಡೆದಿದೆ.

Join Our Whatsapp Group

ಆಟೋದಲ್ಲಿ ಪ್ರಯಾಣಿಸುತ್ತಿದ್ದ ಶಾಲಿನಿ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಸುಕಿನ ಜಾವ 4 ಗಂಟೆ ಸುಮಾರಿಗೆ ಬೆನ್ಸನ್ ಟೌನ್‌ ನ ಚಿನ್ನಪ್ಪ ಗಾರ್ಡನ್‌ ನಿಂದ ಮೆಜೆಸ್ಟಿಕ್ ಕಡೆಗೆ ಆಟೋ ಸಾಗುತ್ತಿತ್ತು. ಈ ವೇಳೆ ಕಾಫಿ ಬೋರ್ಡ್ ಬಳಿ ಲಾರಿ ಚಾಲಕ ಸಿಗ್ನಲ್ ಜಂಪ್ ಮಾಡಿ ಮುಂದೆ ಬಂದ ಪರಿಣಾಮ ಆಟೋಗೆ ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ.

ಪರಿಣಾಮ ಆಟೋದಲ್ಲಿದ್ದ ಶಾಲಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ಲಾರಿಯನ್ನ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಲಾರಿ ಡಿಕ್ಕಿಯಿಂದ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.