ಮನೆ ರಾಜ್ಯ ಕಣ್ಣೀರು ಹಾಕಿದ ಆಟೋ ಚಾಲಕ: ಶಕ್ತಿ ಯೋಜನೆ ಫ್ರೀ ಬಸ್ ನಿಂದಾಗಿ ದಿನದಲ್ಲಿ 5 ಗಂಟೆ...

ಕಣ್ಣೀರು ಹಾಕಿದ ಆಟೋ ಚಾಲಕ: ಶಕ್ತಿ ಯೋಜನೆ ಫ್ರೀ ಬಸ್ ನಿಂದಾಗಿ ದಿನದಲ್ಲಿ 5 ಗಂಟೆ ದುಡಿದರು ಕೇವಲ 40 ರೂ ಸಂಪಾದನೆ

0

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಆರಂಭವಾದ ಬಳಿಕ ಆಟೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕುಸಿತಕಂಡಿದೆ ಎಂದು ಆರೋಪಿಸಿ ಆಟೋ ಚಾಲಕರೊಬ್ಬರು ಕಣ್ಣೀರು ಹಾಕಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Join Our Whatsapp Group

ರಾಜಧಾನಿ ಬೆಂಗಳೂರಿನಲ್ಲಿ ಶಕ್ತಿಯೋಜನೆ ಜಾರಿ ಬಳಿಕ ಆಟೋ ಚಾಲಕರು ಪ್ರಯಾಣಿಕರಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಯೋಜನೆಯಿಂದಾಗಿ ಆಟೋ ಚಾಲಕರ ಹೊಟ್ಟೆಗೆ ತಣ್ಣೀರು ಬಿದ್ದಂತಾಗಿದೆ. ಇಂದು 5 ಘಂಟೆ ದುಡಿದರು 40 ರೂಪಾಯಿಗಳ ನೋಡುವುದೇ ಇಂದು ಅಸಾಧ್ಯವಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ

 ಇದಕ್ಕೆ ಇಂಬು ನೀಡುವಂತೆ ಇದೀಗ ಆಟೋ ಚಾಲಕರು ಕಣ್ಣೀರು ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಶಕ್ತಿ ಯೋಜನೆಯಿಂದಾಗಿ ಆಟೋ ಚಾಲಕರ ಹೊಟ್ಟೆಗೆ ತಣ್ಣೀರು ಬಿದ್ದಂತಾಗಿದೆ. ದಿನವಿಡಿ ದುಡಿದರು 40 ರೂಪಾಯಿಗಳ ನೋಡುವುದೇ ಇಂದು ಅಸಾಧ್ಯವಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ