ನೋಯ್ಡಾ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಹಾಗೂ ಪರಿಸರಕ್ಕೆ ಪೂರಕವಾದ ಇಂಧನದ ದೃಷ್ಟಿಯಿಂದ ಅನೇಕರು ಇವಿ ಕಾರುಗಳತ್ತ ಮುಖ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾರು ಕಂಪೆನಿಗಳು ಕೂಡ ಭವಿಷ್ಯದ ಮಾರುಕಟ್ಟೆಯ ದೃಷ್ಟಿಯಿಂದ ಇವಿ ಕಾರುಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇವಿ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲು ಕಂಪೆನಿಗಳು ಯೋಜಿಸಿವೆ.
ನೋಯ್ಡಾದಲ್ಲಿ ನಡೆಯುತ್ತಿರುವ ಆಟೊ ಎಕ್ಸ್’ಪೊ 2023ರಲ್ಲಿ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್’ಯುವಿ, ಟಾಟಾ ಪಂಚ್ ಇವಿ, ಹ್ಯುಂಡೈ ಐಯಾನಿಕ್ 5 ಇವಿ, ಎಂಜಿ ಹೆಕ್ಟರ್ ಪೆವಿಲಿಯನ್, ಸಿಯಾರ ಇವಿ, ಟಾಟಾ ಅವಿನ್ಯಾ ಇವಿ, ಮಾರುತಿ ಸುಜುಕಿ ಎಲೆಕ್ಟ್ರಿಕ್ ಎಸ್’ಯುವಿ ಇವಿಎಕ್ಸ್, ಕಿಯಾ ಎಸ್‌ಯುವಿ ಇವಿ9, ಕಿಯಾ ಕೆಎ4, ವೋಲ್ವೊ ಸಿ40 ರಿಚಾರ್ಜ್, ಬಿವೈಡಿ ಇ-ಎಸ್’ಯುವಿ ಅಟ್ಟೊ 3, ಸ್ಕೋಡಾ ಎನ್ಯಾಕ್ ಇವಿ, ಮಹೀಂದ್ರಾ ಇ-ಎಕ್ಸ್‌ಯುವಿ 400, ವೋಲ್ಸ್’ವ್ಯಾಗನ್ ಐಡಿ.4, ಸಿಟ್ರೊಯೆನ್ ಇಸಿ3 ಇವಿ ಕಾರುಗಳು ಪ್ರದರ್ಶನಗೊಂಡಿತು.
ಮಾರುತಿ ಸುಜುಕಿ ಎಸ್’ಯುವಿ ಇವಿಎಕ್ಸ್:
ಬ್ಯಾಟರಿ ಸಾಮರ್ಥ್ಯ:
60 ಕೆಡಬ್ಲ್ಯುಎಚ್
ರೇಂಜ್: 550 ಕಿ.ಮೀ.
ಮಹೀಂದ್ರಾ ಇ– ಎಕ್ಸ್ಯುವಿ 400 :
ಬ್ಯಾಟರಿ ಸಾಮರ್ಥ್ಯ: 39.5 ಕೆಡಬ್ಲ್ಯುಎಚ್
ರೇಂಜ್: 456 ಕಿ.ಮೀ.
ಹ್ಯುಂಡೈ ಐಯಾನಿಕ್ 5 ಇವಿ :
ಬ್ಯಾಟರಿ ಸಾಮರ್ಥ್ಯ: 58 ಮತ್ತು 72.6 ಕೆಡಬ್ಲ್ಯುಎಚ್
ರೇಂಜ್: 480 ಕಿ.ಮೀ.
ಎಂಜಿ ಏರ್ ಇವಿ :
ಬ್ಯಾಟರಿ ಸಾಮರ್ಥ್ಯ: 17.3 ಮತ್ತು 26.7 ಕೆಡಬ್ಲ್ಯುಎಚ್
ರೇಂಜ್: 200 ಮತ್ತು 300 ಕಿ.ಮೀ.
ಸಿಟ್ರೊಯೆನ್ ಇಸಿ3 ಇವಿ:
ಬ್ಯಾಟರಿ ಸಾಮರ್ಥ್ಯ: 50 ಕೆಡಬ್ಲ್ಯುಎಚ್
ರೇಂಜ್: 350 ಕಿ.ಮೀ.
ಸ್ಕೋಡಾ ಎನ್ಯಾಕ್ ಇವಿ:
ಬ್ಯಾಟರಿ ಸಾಮರ್ಥ್ಯ: 82 ಕೆಡಬ್ಲ್ಯುಎಚ್
ರೇಂಜ್: 513 ಕಿ.ಮೀ.
ವೋಲ್ವೊ : ಸಿ40 ರಿಚಾರ್ಜ್
ಬ್ಯಾಟರಿ ಸಾಮರ್ಥ್ಯ:
78 ಕೆಡಬ್ಲ್ಯುಎಚ್
ರೇಂಜ್: 420 ಕಿ.ಮೀ.
ವೋಲ್ಸ್’ವ್ಯಾಗನ್ ಐಡಿ.4 :
ಬ್ಯಾಟರಿ ಸಾಮರ್ಥ್ಯ:
77 ಕೆಡಬ್ಲ್ಯುಎಚ್
ರೇಂಜ್: 496 ಕಿ.ಮೀ.
ಬಿಎಂಡ್ಲ್ಯೂ ಐ7:
ಬ್ಯಾಟರಿ ಸಾಮರ್ಥ್ಯ: 101.7 ಕೆಡಬ್ಲ್ಯುಎಚ್
ರೇಂಜ್:
625 ಕಿ.ಮೀ.