ಮನೆ ಅಪರಾಧ ಚರಂಡಿ ತೋಡಿಗೆ ಬಿದ್ದ ಆಟೋ ರಿಕ್ಷಾ:  ಚಾಲಕ ಸಾವು

ಚರಂಡಿ ತೋಡಿಗೆ ಬಿದ್ದ ಆಟೋ ರಿಕ್ಷಾ:  ಚಾಲಕ ಸಾವು

0

ಪಣಂಬೂರು: ಮಂಗಳೂರಿನ ಕೋಡಿಕಲ್ ವಾರ್ಡ್ ಸಂಖ್ಯೆ 16ರಲ್ಲಿ ಒಳಚರಂಡಿ ತೋಡಿಗೆ ರಿಕ್ಷಾ ಬಿದ್ದು ಚಾಲಕ ಮೃತಪಟ್ಟ ಘಟನೆ ನಡೆದಿದೆ.

Join Our Whatsapp Group

ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ. ಕೊಟ್ಟಾರಚೌಕಿ ನಿವಾಸಿ ದೀಪಕ್ ಮೃತ ದುರ್ದೈವಿ.

ರಾತ್ರಿ ಮಳೆ ಬಂದ ಕಾರಣ ತೋಡಿನಲ್ಲಿ ನೀರು ಹರಿಯುತ್ತಿತ್ತು. ಈ ವೇಳೆ ರಿಕ್ಷಾ ತೋಡಿಗೆ ಬಿದ್ದಿದೆ. ಜನರು ನೋಡಿದಾಗ ನೀರೊಳಗೆ ರಿಕ್ಷಾ ಹೆಡ್ ಲೈಟ್ ಉರಿಯುತ್ತಿದ್ದುದನ್ನು ಕಂಡು ಅಗ್ನಿಶಾಮಕಕ್ಕೆ ಕರೆ ಮಾಡಿದ್ದಾರೆ. ತೋಡಿನ ಆಳದಲ್ಲಿ ರಿಕ್ಷಾ ಪತ್ತೆಯಾಗಿದ್ದು, ಚಾಲಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಹಿಂದಿನ ಲೇಖನಮೇ.31 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ
ಮುಂದಿನ ಲೇಖನರಾಮನಗರ: ಐಸ್‌ ಕ್ರೀಂ ಸವಿದ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ