ಮನೆ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹುದ್ದೆಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಜಾಗೃತಿ ಅಭಿಯಾನ

ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹುದ್ದೆಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಜಾಗೃತಿ ಅಭಿಯಾನ

0

ಮೈಸೂರು(Mysuru): ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹುದ್ದೆಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಟಾಪನ ಸಮಿತಿ ವತಿಯಿಂದ ನಗರದ ಅರಮನೆಯ ಮುಂಭಾಗದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನದ ಎದುರು ಇಂದು ಜಾಗೃತಿ ಅಭಿಯಾನ ನಡೆಸಲಾಯಿತು.

ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್‌ ಅಭಿಯಾನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಶ್ರಮಪಟ್ಟು ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಈ ವಿಷಯವಾಗಿ ಮಂಗಳವಾರ ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸುತ್ತೇನೆಂದು ತಿಳಿಸಿದರು.

ಪ್ರಸ್ತುತ ಸಂದರ್ಭದಲ್ಲಿ ಪದವಿ ಕಾಲೇಜುಗಳಲ್ಲಿ ಹಲವಾರು ವಿಷಯಗಳಲ್ಲಿ, ಸಹಾಯಕ ಪ್ರಾಧ್ಯಾಪಕರನ್ನು ನೇಮಕಮಾಡಲು ಹೆಚ್ಚಿನ ಕಾರ್ಯಭಾರವು ಲಭ್ಯವಿದ್ದು, ಈ ಕಾರ್ಯಭಾರವನ್ನು ತಗ್ಗಿಸಲು ಸದರಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕನಿಷ್ಠ 700 ರಿಂದ 800 ಹುದ್ದೆಗಳನ್ನು ಮೀಸಲಾತಿ ಹಾಗೂ ನಿಯಮಾನುಸಾರ ಪ್ರವರ್ಗ (Ju, 2ಎ, 2ಬಿ, ಮಹಿಳಾ ಮೀಸಲಾತಿ) ಇನ್ನಿತರ ನಿಯಮಾವಳಿಗಳನ್ನು ಅನುಸರಿಸಿ ಹುದ್ದೆಗಳನ್ನು ಒಂದೊಂದು ವಿಷಯದಲ್ಲಿಯೂ ಕನಿಷ್ಠ 35 ರಿಂದ 40 ಹೆಚ್ಚುವರಿ ಮಾಡಬೇಕಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸದರಿ ನೇಮಕಾತಿಗಳ ಪ್ರಕ್ರಿಯೆ ಸಂಖ್ಯೆ ಕೇವಲ 1242 ಆದರೆ ಕೆಲವು ಅಂಕಿಅಂಶಗಳ ಪ್ರಕಾರ ಸಾವಿರಾರು ಹುದ್ದೆಗಳು ಖಾಲಿ ಇವೆ.

2015ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ 1298 ಹುದ್ದೆಗಳಿಗೆ ಮತ್ತೆ ಹೆಚ್ಚುವರಿಯಾಗಿ 862 ಹುದ್ದೆಗಳನ್ನು ಸೇರಿಸಲಾಗಿದೆ. ಅದರಂತೆ ಈ ಬಾರಿಯು ಕನಿಷ್ಠ 700 ರಿಂದ 800 ಹುದ್ದೆಗಳನ್ನು ಹೆಚ್ಚುವರಿಯಾಗಿ ಸೇರಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಶೀಘ್ರದಲ್ಲೆ ಒಂದು ತೀರ್ಮಾನಕ್ಕೆ ಬರದಿದ್ದರೆ ದೊಡ್ಡ ಪ್ರತಿಭಟನೆ ನಡೆಸುತ್ತೆವೆಂದು ಉದ್ಯೋಗ ಆಕಾಂಕ್ಷಿಗಳು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಎಂ.ಚಂದ್ರಶೇಖರ್, ಅಧ್ಯಕ್ಷ ಜಾಕೀರ್ ಹುಸೇನ್, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಆರ್ಯ, ದಲಿತ ಪ್ರಗತಿಪರ ಒಕ್ಕೂಟಗಳ ಸಂಚಾಲಕ ಪಿ.ರಾಜು, ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಪ್ರಗತಿಪರ ಚಿಂತಕ ಎಸ್.ಶಿವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದಿನ ಲೇಖನದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌: ವೆಂಕಟೇಶ್ ಅಯ್ಯರ್ ತಲೆಗೆ ಬಡಿದ ಚೆಂಡು
ಮುಂದಿನ ಲೇಖನಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ಮೂಲಕ ಸಮಾಜದ ಸುಧಾರಣೆ ಸಾದ್ಯ: ಎಲ್ ನಾಗೇಂದ್ರ