ಮನೆ ರಾಜ್ಯ ‘ಸೈಬರ್ ಕಾನೂನು ಮತ್ತು ಸೈಬರ್ ಭದ್ರತೆ’ ಬಗ್ಗೆ ಜಾಗೃತಿ ಕಾರ್ಯಕ್ರಮ

‘ಸೈಬರ್ ಕಾನೂನು ಮತ್ತು ಸೈಬರ್ ಭದ್ರತೆ’ ಬಗ್ಗೆ ಜಾಗೃತಿ ಕಾರ್ಯಕ್ರಮ

0

ಮೈಸೂರು: ನಗರದ ವಿಜಯವಿಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳಿಗೆ ಸೈಬರ್ ಜಾಗೃತಿಯ ಅರಿವನ್ನು ಮೂಡಿಸಲಾಯಿತು.

Join Our Whatsapp Group

ಸಿಪಿ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸಂದೇಶ್ ಕುಮಾರ್ ಅವರು, ಇವರು ೯ ಮತ್ತು ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ “ಸೈಬರ್ ಕಾನೂನು ಮತ್ತು ಸೈಬರ್ ಭದ್ರತೆ” ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಸಾಮಾಜಿಕ ಮಾಧ್ಯಮ ಮತ್ತು ಇತರ ಸೈಬರ್ ಸಂಬಂಧಿತ ಚಟುವಟಿಕೆಗಳ ಸರಿಯಾದ ಬಳಕೆಯನ್ನು ಅರ್ಥೈಸಿದರು.

ಇಂದಿನ ಈ ಜಾಗೃತಿ ಕಾರ್ಯಕ್ರಮಗಳಲ್ಲಿ ಅಂತರ್ಜಾಲದ ಹಗರಣಗಳು, ಹಾಗೂ ಅಂತರ್ಜಾಲದ ಮೂಲಕ ನಡೆಯುತ್ತಿರುವ ಅವ್ಯವಹಾರ, ಮೋಸ ವಂಚನೆ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಿದರು ಹಾಗೂ ಗ್ರಾಹಕರು ಆನ್ ಲೈನ್ ಮೂಲಕ ವ್ಯಾಪಾರ ಮಾಡುವಾಗ ಭದ್ರಪಡಿಸಿಕೊಳ್ಳುವ ರೀತಿಯನ್ನು ಇಲ್ಲಿ ವಿವರಿಸಿ, ಸೈಬರ್ ಅಪರಾಧದ ಬಗ್ಗೆ ಪರಿಚಯ ಮಾಡಿಕೊಟ್ಟರು.

ವಿದ್ಯಾರ್ಥಿಗಳು ಮೊಬೈಲ್‌ನ ಬಳಕೆಯನ್ನು ವರ್ಜಿಸಬೇಕು ಹಾಗೂ ಬಳಸಬೇಕಾದ ಸಂದರ್ಭದಲ್ಲಿ ಭದ್ರತೆಯಿಂದ ವಿವೇಕಿಗಳಾಗಿ ಬಳಸಬೇಕೆಂದು  ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ವಿಜಯ ವಿಠಲ ಕಾಲೇಜ್‌ ನ ಪ್ರಾಂಶುಪಾಲರಾದ ಹೆಚ್. ಸತ್ಯಪ್ರಸಾದ್,  ವಿಜಯ ವಿಠಲ ವಿದ್ಯಾಶಾಲೆಯ ಪ್ರಾಚಾರ್ಯರಾದ  ಏಸ್.ಎ.ವೀಣಾ ಉಪಸ್ಥಿತರಿದ್ದರು.

ವಿವಿಧ ವಿಭಾಗದ ಮುಖ್ಯಸ್ಥರು, ಭೋದಕ ವರ್ಗದವರು, ಬೋಧಕೇತರವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.