ಮಂಡ್ಯ:-ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಪ್ರಜಾಪ್ರಭುತ್ವದ ಹಬ್ಬ – ಮೇ 10 ಮತದಾನ ಧ್ವಜಾರೋಹಣ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಪೋಲೀಸ್ ಕಾಲೋನಿ, ಮಂಡ್ಯ ಇಲ್ಲಿ ಏಪ್ರಿಲ್ 30ರ ಬೆಳಿಗ್ಗೆ 9.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9.00 ಗಂಟೆಗೆ ಚುನಾವಣಾ ಧ್ವಜಾರೋಹಣ ಕಾರ್ಯಕ್ರಮ, 9.02ಕ್ಕೆ ಚುನಾವಣಾ ಗೀತೆಗಳ ಗಾಯನ, 9.15ಕ್ಕೆ ಚುನಾವಣಾ ಪ್ರತಿ ಜ್ಞಾ ವಿಧಿ ಸ್ವೀಕಾರ, 9.17ಕ್ಕೆ ಮತದಾರರಿಗೆ ಮತ ಚೀಟಿ ವಿತರಣೆ ಹಾಗೂ ಕರಪತ್ರ ವಿತರಣೆ, 9:25ಕ್ಕೆ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಗುವುದು.
ಸೈಕಲ್ ಜಾಥಾ ಪೋಲೀಸ್ ಕಾಲೋನಿ ಮತಗಟ್ಟೆ-ಬನ್ನೂರು ರಸ್ತೆ- ಕನ್ನಿಕಾ ಪರಮೇಶ್ವರಿ ದೇವಸ್ಥಾನ- 100 ಅಡಿ ರಸ್ತೆ-ಕರ್ನಾಟಕ ಬಾರ್ ಸರ್ಕಲ್-ಆರ್.ಪಿ ರಸ್ತೆ- ಸಂಜಯ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿದ ನಂತರ ಐ.ಬಿ ಸರ್ಕಲ್- ಪಿ.ಇ.ಟಿ ಕ್ರೀಡಾಂಗಣ ತಲುಪಲಿದೆ.
10.00 ಗಂಟೆಗೆ ಪಿ.ಇ.ಟಿ ಕ್ರೀಡಾಂಗಣದಲ್ಲಿ ಪ್ರಮಾಣ ಪತ್ರ ವಿತರಣೆ, 10.05ಕ್ಕೆ ಪ್ಯಾರಾ ಗ್ಲೈಡಿಂಗ್ ಮುಖಾಂತರ ಮತದಾನ ಜಾಗೃತಿ ಪ್ರಚಾರಕ್ಕೆ ಚಾಲನೆ ನೀಡಲಾಗುವುದು.