ಮನೆ ಮನೆ ಮದ್ದು ಆಯುರ್ವೇದ ವೈದ್ಯ ಪದ್ಧತಿ

ಆಯುರ್ವೇದ ವೈದ್ಯ ಪದ್ಧತಿ

0

    ಆಯುರ್ವೇದ ವೈದ್ಯ ಪದ್ಧತಿ ಬಹಳ ಪುರಾತನವಾದದು. ಭಾರತ ದೇಶ ಆದರ ಜನ್ಮಸ್ಥಾನ. ಔಷಧೀಯ ಸಸ್ಯಗಳು ನಾರು ಬೇರುಗಳು ಗಿಡಮೂಲಿಕೆಗಳು. ದೇಶದಲ್ಲಿ ಎಲ್ಲೆಲ್ಲೋ ಹೇರಳವಾಗಿ ದೊರೆಯುತ್ತಿತ್ತು ಕೀ ಪೂ. 600ರಲ್ಲಿ 2000 ವರ್ಷಗಳ ಹಿಂದೆಯೇ    ನಮ್ಮ ದೇಶದಲ್ಲಿ ಮಹಾನ್ ಮಹಾನ್ ಆಯುರ್ವೇದ ವೈದ್ಯರುಗಳು ಇದ್ದರು. ಅವರಲ್ಲಿ ಪ್ರಮುಖ ವೈದ್ಯ ಸುಶ್ರುತ. ಆತ ಆಯುರ್ವೇದ ವಿದ್ಯೆಯ ಆದ್ಯ ಪರ್ವತಕ ಧನ್ಟಂತರಿಯ ಹೆಸರಿನಲ್ಲಿ ಕಾಶಿಯಲ್ಲಿದ್ದ ವಿದ್ಯಾಪೀಠದಲ್ಲಿ ಕಲಿತವನು.  ಆ ಕಾಲದಲ್ಲಿ  ನಮ್ಮ ದೇಶದ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಕೂಡಾ ಮಾಡುತ್ತಿದ್ದರು. ಅದರಿಂದ ಮಾಡುತ್ತಿದ್ದರು ಆದ್ದರಿಂದ ಉತ್ತೇಜತರಾದ ಪ್ರಪಂಚದ ಮೇಲೆ ಬೇರೆ ಬೇರೆ ಭಾಗದ ಜನ ನಮ್ಮವೈದ್ಯ ಪದ್ಧತಿಯನ್ನು ನಕಲು ಮಾಡಿ ತಾವು ಮಹಾ ಬುದ್ಧಿವಂತರೆಂದು ಹೇಳಿಕೊಂಡರು.

Join Our Whatsapp Group

      ಮುಂದೆ ಚರಕರು ನಮ್ಮ ಈ ಆಯುರ್ವೇದ ವೈದ್ಯ ಪದ್ಧತಿಯನ್ನು ಮತ್ತಷ್ಟು ಸುಧಾರಿಸಿದರು. ಅವರು ಕ್ರಿಸ್ತಶಕ 320ರಲ್ಲಿ ಜೀವಿಸಿದ್ದರೆಂದು ತಿಳಿದು ಬರುತ್ತದೆ ಅವರು ಆಯುರ್ವೇದ ವೈದ್ಯ ಪದ್ಧತಿಯನ್ನು ಮುಂದಿನ ಪೀಳಿಗೆಗಾಗಿ ತಾಳೆಗರಿ ಗ್ರಂಥದಲ್ಲಿ ಬರೆದಿದ್ದರು. ಭಾರತದ ಆಯುರ್ವೇದ ವೈದ್ಯ ಪದ್ಧತಿಯ ಮಹಾನ್ ಗ್ರಂಥಗಳೆಂದರೆ ಸುಶ್ರುತ ಸಂಹಿತೆ. ಮತ್ತು ಚರಕ ಸಂಹಿತೆ.

    ಆಯುರ್ವೇದ ಔಷಧಿಗಳ ಸೇವನೆಯಿಂದ ಯಾವ ಅಡ್ಡ ಪರಿಣಾಮಗಳೂ ಉಂಟಾಗುವುದಿಲ್ಲ ಸರಿಯಾದ ಆಹಾರ ನಿಯಮಗಳನ್ನು ಅನುಸರಿಸಿ ಪದ್ಯವನ್ನು ಮಾಡುತ್ತ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ರೋಗ ನಿಧಾನವಾಗಿಯಾದರೂ ಸಂಪೂರ್ಣವಾಗಿ ವಾಸಿಯಾಗುತ್ತದೆ. ಇಂಗ್ಲಿಷ್ ಔಷಧಿಗಳ ಅಡ್ಡ ಪರಿಣಾಮಗಳಿಂದ ಬೇಸತ್ತ ವಿದೇಶಿಯರು ಇಂದು ಈ ಭಾರತೀಯ ವೈದ್ಯ ಪದ್ಧತಿಯಿಂದ ತಮ್ಮ ರೋಗವನ್ನು ಗುಣಪಡಿಸಿಕೊಳ್ಳಲು ಭಾರತಕ್ಕೆ ಬರುತ್ತಾರೆ.

ಆಯುರ್ಹಿತಾಹಿತಂ ವಾರ್ಧೆ ರ್ನಿದಾನಂ ತಥಾ

ತಸ್ಯಾ ಯಷಃ ಪಃಣ್ಯ ತಮೋ ವೇದಾ    ವಿದಾಂ ಮತಃ

ವಕ್ಷ್ಯತೇ ಯನ್ಮನುಷ್ಯಾಣಾಂ ಲೋಕಯೋರು ಭಯೋರ್ಹಿತಃ

    ಎಂದು ಚರಕ ಸಂಹಿತೆಯ ಅಧ್ಯಾಯ ಒಂದರಲ್ಲಿ ಆಯುರ್ವೇದವನ್ನು ಕುರಿತು ಹೇಳಲಾಗಿದೆ. ಅಂದರೆ ಆಯುರ್ವೇದವು ಮನುಷ್ಯರಿಗೆ ಎಂದೂ ಕೆಡುಕನ್ನು ಉಂಟು ಮಾಡುವುದಿಲ್ಲ. ಅದರಿಂದ ಅವರ ಆರೋಗ್ಯ ಸದಾ ಉತ್ತಮವಾಗಿರುತ್ತದೆ ಎಂಬುದು ಈ ಶ್ಲೋಕದ ಅರ್ಥವಾಗಿರುತ್ತದೆ.