ಮನೆ ಜ್ಯೋತಿಷ್ಯ  ಹೆಣ್ಣು ಕೂಸಿನ ಜನನ ವಾರ ಫಲ

 ಹೆಣ್ಣು ಕೂಸಿನ ಜನನ ವಾರ ಫಲ

0

1. ರವಿವಾರ : ದಲ್ಲಿ ಹುಟ್ಟಿದ ಕನ್ಯೆಯು ತೀಕ್ಷ್ಣ ಹರಿತ ಚುರುಕಿನ 300 ಸ್ವಭಾವದವಳಾಗಿದ್ದು, ಸುಶೀಲ ಸಂತಾನ ಹೊಂದಿದವಳೂ, ಭಾಗ್ಯವಂತಿಯೂ, ತೇಜಸ್ವಿಯೂ, ಮೃಷ್ಟಾನ್ನ ಭೋಜನ ಪ್ರಿಯಳೂ ಆಗುವಳು. ಪತಿಭಕ್ತಿಯಲ್ಲಿ ಅಭಿರುಚಿ ಯುಳ್ಳ ಈಕೆ ವಂಶಕ್ಕೆ ಕೀರ್ತಿಯನ್ನು ತರುವ ಸಂತಾನ ಭಾಗ್ಯವುಳ್ಳವಳು. ಬಂಧು ಬಾಂಧವ ರಿಂದ ತುಂಬಿದ ಮನೆಯಒಡತಿಯಾಗಿ ಸುಖ ಸೌಭಾಗ್ಯಗಳನ್ನು ಅನುಭವಿಸುವಳು.

Join Our Whatsapp Group

೨) ಸೋಮವಾರ : ಜನಿಸಿದ ಕನೈಯು ನಯ ನಾಜೂಕಿನ ಸೌಂದರ್ಯವುಳ್ಳ ರೂಪವತಿಯು, ಸದಾ ಮುಗುಳು ನಗೆಯ ಮುಖದ ಈಕೆ ತನ್ನ ಪತಿಯನ್ನು, ಬಂಧು ಬಳಗದವರನ್ನೂ ಆರಾಧಿಸುವಳು. ಒಳ್ಳೆ ಸುಂದರ ವಸ್ತ್ರಾಭರಣಗಳನ್ನು ಧರಿಸುವ ಈಕೆ ಸೌಭಾಗ್ಯವತಿಯೂ, ಸಮಾಧಾನ ಮನಸ್ಸಿನವಳೂ ಆಗಿರುವಳು. ಗೌರವ ಸ್ವಭಾವದ ಮಕ್ಕಳುಳ್ಳಾಕೆಯೂ ಹೌದು.

೩ ) ಮಂಗಳವಾರ : ಜನಿಸಿದ ಕನೈಯು ವಿಶೇಷವಾಗಿ ಕೆಂಪುವರ್ಣದ ಉಡುಗೆ ತೊಡುಗೆಯನ್ನು, ವಸ್ತ್ರಾಭರಣಗಳನ್ನು ಧರಿಸಲು ಇಚ್ಛೆಯುಳ್ಳಾಕೆಯು, ಈಕೆ ವಿಶೇಷ ತೇಜಸ್ವಿ ರೂಪದಿಂದ ಶೋಭಿಸುತ್ತಿದ್ದರೂ ಉಪಕಾರವನ್ನು ಸ್ಮರಿಸದವಳೂ, ಶೀಘ್ರ ಕೋಪವುಳ್ಳವಳೂ ಆಗಿರುತ್ತಾಳೆ.

 ೪) ಬುಧವಾರ : ಜನಿಸಿದ ಜಾತಕಳು ಸಕಲ ಸದ್ಗುಣ ಸಂಪನ್ನಳೂ,ಸತ್ಯನಡತೆಯಿಂದಿದ್ದು, ಸತ್ಯ ನುಡಿವಾಕೆಯೂ, ತನ್ನ ಸವಿಯಾದ ಮಧುರ ಮಾತುಗಳಿಂದ ಬಂಧು ಬಳಗದವರ ಮನಸ್ಸನ್ನು ರಂಜಿಸುವವಳೂ, ದಾನಧರ್ಮ ಮಾಡುವದರಲ್ಲಿ ಆನಂದ ಹೊಂದುವವಳೂ, ತನ್ನ ಮನೆತನದ ಕೀರ್ತಿಯನ್ನು ಬೆಳಗಿಸಿಕೊಳ್ಳುವಾಕೆಯೂ, ಶ್ರೀಮಂತ ಹೃದಯದ ಪತಿಯನ್ನು ಹೊಂದುವಾಕೆಯೂ ಆಗುವಳು.

 ೫) ಗುರುವಾರ : ಜನಿಸಿದ ಕನೈಯು ಗುರುದೇವತಾ ಕಾರ್ಯ ಮಾಡುವದರಲ್ಲಿ ವಿಶೇಷ ಅಭಿಮಾನ ಪಡುವವಳೂ, ಕೆಟ್ಟ ಕಾರ್ಯಗಳನ್ನು ಕನಸಿನಲ್ಲಿಯೂ, ಮನಸ್ಸಿನಲ್ಲಿಯೂ ಮಾಡದಾಕೆಯೂ, ಸದಾಚಾರ ಸಂಪನ್ನಳೂ ಆಗುವಳು. ಆಕೆಯು ತನ್ನ ಪತಿಯ ಅಭಿವೃದ್ಧಿಯಲ್ಲಿ ಕೈಗೂಡುವಾಕೆ. ಪತಿವ್ರತೆಯಾದ ಈಕೆ ರೂಪವಂತಳಾದ ವಿದ್ಯಾವಂತ ಮಕ್ಕಳನ್ನೇ ಹೊಂದಿ ಗೃಹ ದೇವತೆಯಂತೆ ಕಂಡು ಬರುವಳು.

೬ ) ಶುಕ್ರವಾರ: ಜನಿಸಿದ ಕನೈಯು ಶ್ರೀಮಂತ ಮನಸ್ಸಿನ ಮಹಿಳೆ, ಆಕೆ ತನ್ನ ಪತಿಗೆ ತಕ್ಕ ಸತಿಯಾಗಿದ್ದು, ಹುಟ್ಟಿದ ಮನೆಯನ್ನೂ, ಕೊಟ್ಟ ಮನೆಯನ್ನೂ ಬೆಳಗುವಳು. ವಿಶೇಷ ವಸ್ತ್ರಾಭರಣ, ವಿಶೇಷ ವಿದ್ಯಾವಂತ ಸುಲಕ್ಷಣವುಳ್ಳ ಮಕ್ಕಳ ತಾಯಿಯೂ ಆಗುತ್ತಾಳೆ.

 ೭) ಶನಿವಾರ : ಜನಿಸಿದ ಈ ಜಾತಕಳು ಗುಣಹೀನರಾದ ಅಲ್ಪ ಮಕ್ಕಳನ್ನು ಹಡೆಯುವಳು. ಈಕೆಗೆ ನಾಚಿಗೆ, ವಿನಯ ಗುಣ ಇರುವದೇ ಇಲ್ಲ. ಚಾಡಿಖೋರ ಸ್ವಭಾವದ ಈಕೆ ಎಲ್ಲರೊಂದಿಗೂ ವೈರ ಭಾವದಿಂದ ಇರುವಳು. ನಿರ್ದಯ ಮನಸ್ಸಿನ ಈಕೆ ಕುರೂಪಿಯೂ, ಸ್ಕೂಲದೇಹಿಯೂ, ಸ್ವಚ್ಛತೆಯನ್ನೇ ಅರಿಯದವಳೂ ಆಗಿರುವಳು.