ಮನೆ ಜ್ಯೋತಿಷ್ಯ ಹೆಣ್ಣು ಕೂಸಿನ ನಕ್ಷತ್ರ ಫಲ ವಿಚಾರ

ಹೆಣ್ಣು ಕೂಸಿನ ನಕ್ಷತ್ರ ಫಲ ವಿಚಾರ

0

೧೬) ವಿಶಾಖಾ : ನಕ್ಷತ್ರದಲ್ಲಿ ಹುಟ್ಟಿದ ಕನೈಯು ವ್ರತ-ನೇಮ-ನಿತ್ಯಾದಿಗಳಲ್ಲಿ ಧಾರ್ಮಿಕ ಶ್ರದ್ಧೆಯುಳ್ಳಾಕೆಯು. ಆಪ್ತ ಬಂಧು ಬಾಂಧವರಲ್ಲಿ ಅಭಿಮಾನ ಪ್ರೇಮ ವುಳ್ಳಾಕೆಯು, ಪತಿಯಲ್ಲಿ ಪ್ರೇಮ ಭಕ್ತಿ-ಅನುರಾಗವುಳ್ಳಾಕೆಯು, ಧನವಂತಳೂ, ಪ್ರಜ್ಞಾವಂತಳೂ, ಧರ್ಮವತಿಯೂ ಆದ ಈಕೆ ತೀರ್ಥಕ್ಷೇತ್ರಯಾತ್ರಾದಿಗಳಲ್ಲಿ ಮನಾನುರಾಗ ವುಳ್ಳವಳು. ಈಕೆಗೆ ಬುದ್ದಿವಂತರಾದ ಮಕ್ಕಳು.

Join Our Whatsapp Group

೧೭) ಅನುರಾಧ : ನಕ್ಷತ್ರದಲ್ಲಿ ಜನಿಸಿದ ಕನೈಯು ನಿರಭಿಮಾನದಿಂದ ತನ್ನ ಕುಟುಂಬವನ್ನು ನಡೆಸುವಳು. ಸದಾ ಪ್ರಸನ್ನ ಚಿತ್ತ-ಸ್ವಭಾವಗಳಿಂದ ಪತಿಯ, ಬಂಧು ಬಾಂಧವರ, ಅಷ್ಟೇ ಏಕೆ ವಿರೋಧಿಗಳ ಮನ್ನಣೆಗೂ ಪಾತ್ರಳಾಗುವಳು. ನಯ ವಿನಯ ಗುಣಗಳುಳ್ಳ ಈಕೆ ಶ್ರೇಷ್ಠ ವಸ್ತ್ರಾಭರಣಗಳನ್ನು ಧರಿಸುವ ಶ್ರೀಮಂತಳೂ ಆಗುವಳು. ಗುರುಹಿರಿಯರ ಮನ್ನಣೆಗೆ ಪಾತ್ರಳಾದ ಈಕೆ ಪತಿಗೆ ತಕ್ಕ ಸತಿಯಾಗಿ ಶೋಭಿಸುವ ಸುಮಂಗಲೆಯೂ ಹೌದು.

 ೧೮) ಜೇಷ್ಠ : ನಕ್ಷತ್ರದಲ್ಲಿ ಜನಿಸಿದ ಕನೈಯು ಸುಂದರಳಾಗಿದ್ದು ಒಳ್ಳೇ ಮಾತುಗಾರಿಕೆ ಯುಳ್ಳವಳೂ, ಭಾಗ್ಯವಂತಳೂ, ಸತ್ಪುತ್ರ- ಪುತ್ರಿಯರನ್ನು ಹೊಂದಿರುವಾಕೆಯು, ತನ್ನ ಆಪ್ತ ಬಂಧು-ಬಾಂಧವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವಾಕೆಯು, ಸತ್ಯತನದಿಂದ ನಡೆಯುವವಳೂ ವಿನಯ ಗುಣವುಳ್ಳವಳೂ ಆಗುತ್ತಾಳಲ್ಲದೆ ಆಗಾಗ್ಗೆ ಕೋಪವನ್ನು ಪ್ರದರ್ಶಿಸುವಳು. ಆದರೆ ಕೆಲವು ಗ್ರಂಥಗಳಲ್ಲಿ ಈಕೆಯು ವಿರೋಧ ಭಾವನೆಯುಳ್ಳ ಜಗಳಗಂಟೆಯೂ, ರೀತಿ-ನೀತಿಯ ವಿರುದ್ಧ ವರ್ತಿಸುವವಳೂ, ತೀರ ತೀಕ್ಷ್ಯ ಗುಣವುಳ್ಳಾಕೆ. ಯೆಂದು ಅಭಿಪ್ರಾಯವಿದೆ.

೧೯ ) ಮೂಲಾ : ನಕ್ಷತ್ರದಲ್ಲಿ ಜನಿಸಿದ ಕನೈಯು ಬಂಧು ಬಾಂಧವರೊಂದಿಗೆ ವಿರೋಧ ತಾಳುವವಳೂ, ಅಲ್ಪ ಸುಖದಿಂದಲೇ ಜೀವಿಸುವವಳೂ, ಸದಾ ರೋಗದಿಂದ ನರಳುವವಳೂ, ವೈಧವ್ಯ ದೋಷದಿಂದ ಕೂಡಿರುವವಳೂ, ಪರರ ಆಶ್ರಯದಲ್ಲಿ ಬಾಳತಕ್ಕವಳೂ, ದುಷ್ಟ ಸ್ವಭಾವದವಳೂ, ಕೆಟ್ಟ ಬುದ್ದಿಯ ಅಭಿಮಾನವುಳ್ಳವಳೂ, ಪಾಪ ಕಾರ್ಯಗಳಲ್ಲಿ ವಿಶೇಷನುರಿತವಳೂ, ವಿಚಿತ್ರ ಸ್ವಭಾವದವಳೂ, ವಂಶ ವೃದ್ಧಿಗೆ. ಕೆಡಕನ್ನು ಬಯಸುವವಳೂ ಆಗುತ್ತಾಳೆ. ಆದರೆ, ಈ ಜಾತಕಳು ಅನೇಕ ಶಾಸ್ತ್ರಗಳನ್ನು ಬಲ್ಲಿದವಳಾಗಿದ್ದು ಜನಾನುರಾಗಿಯಾಗುತ್ತಾಳೆಂದು ಕೆಲವು ಗ್ರಂಥಕಾರರು ಅಭಿಪ್ರಾಯಪಟ್ಟಿದ್ದಾರೆ.

೨೦) ಪೂರ್ವಾಷಾಢ: ನಕ್ಷತ್ರದಲ್ಲಿ ಜನಿಸಿದ ಕನೈಯು ತನ್ನ ವಂಶದಲ್ಲಿಯೇ ಶ್ರೇಷ್ಠ

ಸಂಪನ್ನೆಯೆನ್ನಿಸುವಳು. ತನ್ನ ಒಳ್ಳೇ ಗುಣ ಸ್ವಭಾವಗಳಿಂದ ತನ್ನ ಸಂಸಾರವನ್ನು ಸುಖ-ಸೌಖ್ಯದಿಂದ ಸಾಗಿಸುವಳು, ಬಂಧು-ಬಳಗದವರಲ್ಲಿಯೇ ಈ ಕನೈ ಶ್ರೇಷ್ಠಳೆಂದೆನ್ನಿಸಿ ಕೊಳ್ಳುವಳು. ಧರ್ಮಕಾರ್ಯ, ಮಂಗಳ ಕಾರ್ಯಗಳನ್ನು ಮಾಡುವದರಲ್ಲಿ ವಿಶೇಷ ಮನಸ್ಸುಳ್ಳವಳು. ಪತಿವ್ರತೆಯಾದ ಈಕೆ ಯಬಲವಂತಳೂ, ಧೈರ್ಯದವಳೂ, ವಿನಯ ವುಳ್ಳಾಕೆಯೂ ಆಗುವಳು. ತನ್ನ ಮುತ್ಸದ್ದಿತನದ ಗುಣಗಳಿಂದ ಸಂಸಾರವನ್ನು ನಿಭಾಯಿಸಿ ಕೊಂಡು ಹೋಗುವಳು. ವಿಶಾಲ, ಮಂದಹಾಸದ ಕಣ್ಣುಗಳುಳ್ಳ ಈಕೆ ಮಂಗಳ ದೇವತೆಯೇ ಹೌದು.

೨೧) ಉತ್ತರಾಷಾಢ: ನಕ್ಷತ್ರದಲ್ಲಿ ಜನಿಸಿದ ಕನೈಯು ಸ್ತ್ರೀಯರಲ್ಲಿಯೇ ಶ್ರೇಷ್ಠ ಗುಣ-ಸ್ವಭಾವದವಳು, ತನ್ನ ಪತಿಯ ಕುಟುಂಬದ ಜನರ ಮನದ ಇಂಗಿತವನ್ನು ಅರಿತು ನಡೆಯುವ ಈಕೆ ಎಲ್ಲರೊಂದಿಗೆ ಪ್ರೇಮಾದರವನ್ನು ಹೊಂದಿರುವಳು. ಸದಾ ಸಂತೋಷ ಚಿತ್ತಳಾದ ಈಕೆ ಧನ-ಕನಕ-ಭೂಮಿ ಸಂಪತ್ತುಗಳನ್ನು ಹೊಂದಿ ಸುಖಿಸುವವಳು. ಪತಿವ್ರತೆಯಾದ ಈಕೆ ಗುರು ಹಿರಿಯರಲ್ಲಿಯೂ ಭಯ ಭಕ್ತಿಯನ್ನು ಹೊಂದಿರುವಳು. ಅತಿಥಿ ಸತ್ಕಾರವನ್ನು ಮಾಡುವವಳೂ ಆಗಿರುತ್ತಾಳೆ.

 ೨೨) ಶ್ರವಣಾ : ನಕ್ಷತ್ರದಲ್ಲಿ ಜನಿಸಿದ ಜಾತಕಳು ಪತಿವ್ರತೆಯೂ, ಗುಣವತಿಯೂ ಅತಿಥಿ ಸತ್ಕಾರ ಮಾಡುವವಳೂ, ಧರ್ಮ-ನೀತಿಗಳನ್ನು ಅರಿತು ನಡೆಯುವ ಸ್ವಭಾವದವಳೂ, ಪರೋಪಕಾರೀ ಗುಣಗಳನ್ನು ಕಾರ್ಯಕಾರಿ ರೂಪದಲ್ಲಿ ತರುವವಳೂ, ವಿನಯವತಿಯೂ ಆಗಿರುವಳು. ಈಕೆ ರೂಪವತಿಯು-ಬುದ್ದಿವಂತೆ. ಪ್ರತಿಭಾವಂತೆಯಾದ ಈಕೆ ಅನೇಕ ಶಾಸ್ತ್ರಗಳನ್ನು ಬಲ್ಲವಳೂ ಆಗುತ್ತಾಳೆ.

೨೩) ಧನಿಷ್ಟ : ನಕ್ಷತ್ರದಲ್ಲಿ ಜನಿಸಿದ ಕನೈಯು ದಯಾಗುಣಗಳುಳ್ಳವಳೂ, ತನ್ನ ಹುಟ್ಟಿದ ಮನೆಗೂ, ಕೊಟ್ಟ ಮನೆಗೂ ಕೀರ್ತಿಯನ್ನು ತರುವಾಕೆಯೂ, ಯಾವಾಗಲೂ ಬೆಲೆಯುಳ್ಳ ವಸ್ತ್ರಾಭರಣಗಳನ್ನು ಧರಿಸುವವಳೂ, ಧನ-ಧಾನ್ಯ-ಸಂಪತ್ತುಗಳನ್ನು ಹೊಂದಿ ಭೋಗಿಸುವವಳೂ, ಸತ್ಪುತ್ರ ಪುತ್ರಿಯನ್ನು ಹೊಂದಿ ಸಂತೃಪ್ತ ಗೃಹಸ್ಥ ಜೀವನವನ್ನು ಸಾಗಿಸುವವಳೂ ಆಗುತ್ತಾಳೆ.

 ೨೪) ಶತತಾರಾ : ನಕ್ಷತ್ರದಲ್ಲಿ ಜನಿಸಿದ ಕನೈಯು ತನ್ನ ಬಂಧು ಬಳಗ ಸ್ನೇಹಿತರನ್ನೂ ಸಂತೋಷಗೊಳಿಸುವ ದೊಡ್ಡ ಗುಣದವಳು. ತನ್ನ ಕುಟುಂಬಕ್ಕೆ ಧರ್ಮ ದೇವತೆಯಂತಿರುವ ಈಕೆ ಸುಖ-ಸಮೃದ್ಧಿ ಸುಖೀ ಜೀವನ ನಡೆಸುವಾಕೆ. ಕನಸಿನಲ್ಲೂ ವಿರೋಧ ಭಾವನೆ ಇಲ್ಲದವಳು. ದೇವತಾ ಪೂಜಾದಿಗಳನ್ನು – ವ್ರತ ನೇಮಗಳನ್ನು ಶ್ರದ್ಧೆಯಿಂದ ಆಚರಿಸುವ ಈಕೆ ದಾನಶಿರೋಮಣಿಯೂ ಹೌದು.

 ೨೫) ಪೂರ್ವಾಭಾದ್ರ : ನಕ್ಷತ್ರದ ಮೊದಲನೇ ಚರಣದಲ್ಲಿ ಮಾತ್ರ ಜನಿಸಿದ ಈ ಕನೈಯು ವಿಶೇಷ ಶ್ರೀಮಂತಳಾಗುವಳು. ದಾನ ಧರ್ಮ ಮಾಡುವದರಲ್ಲಿ ಸದಾ ಸಿದ್ದಳು. ಪುರಾಣ ಪುಣ್ಯ ಕಥೆಗಳನ್ನು ಕೇಳುವುದರಲ್ಲಿ ವಿಶೇಷ ಆಸಕ್ತಳು. ಗುರುಹಿರಿಯರು, ಸಾಧು ಸತ್ಪುರುಷರ ಸೇವೆ ಮಾಡುವದರಲ್ಲಿ ಉತ್ಸುಕಳು. ಸ್ತ್ರೀಯರಲ್ಲಿ ಶ್ರೇಷ್ಠಳೂ ಆಗಿರುತ್ತಾಳೆ. ಆದರೆ ಈ ಕನೈಯು ೨-೩-೪ ನೇ ಚರಣದಲ್ಲಿ ಹುಟ್ಟಿದರೆ ಮಾತ್ರ ಈಕೆ ಅರಿಷ್ಟಳು. ಈಕೆ ಸದಾ ಪಾಪಕಾರ್ಯದಲ್ಲಿ ಆಸಕ್ತಳು ಸಜ್ಜನರನ್ನು ದೂರೀಕರಿಸುವಳು. ಅಭಕ್ಷ ಅಪೇಯ ಭೋಜನಾದಿಗಳನ್ನು ಮಾಡುವಲ್ಲಿ ಪ್ರೇಮವುಳ್ಳಾಕೆಯು.

 ೨೬) ಉತ್ತರಾಭಾದ್ರ : ನಕ್ಷತ್ರದಲ್ಲಿ ಜನಿಸಿದ ಕನೈಯು ಗುರುಹಿರಿಯರಲ್ಲಿ ಶ್ರದ್ಧಾಭಕ್ತಿಯನ್ನುಳ್ಳಾಕೆಯು, ಗುರುಹಿರಿಯರ ಆಶೀರ್ವಾದವನ್ನು ಪಡೆದು ಸುಖೀಜೀವನ ನಡೆಸುವವಳು. ತನ್ನ ಪತಿಗೆ ಉತ್ಕರ್ಷವನ್ನು ಬಯಸುವವಳೂ, ಅದಕ್ಕೆ ಕಾರಣಳೂ ಆಗುವಳು. ವಿವೇಕಿಯೂ, ಕ್ಷಮಾಗುಣ ಸ್ವಭಾವದವಳೂ, ಶಾಂತ ಮನಸ್ಕಳೂ, ಸಜ್ಜನ ಸಾತ್ವಿಕ ಸಂತಾನವನ್ನು ಹೊಂದಿ ವಂಶದ ಕೀರ್ತಿಯನ್ನು ಹೆಚ್ಚಿಸುವಾಕೆಯೂ ಆಗುವಳು. ಸತ್ಯ ಸನ್ಮಾರ್ಗದಲ್ಲಿ ನಡೆಯುವಲ್ಲಿ ಮುಂದುವರೆದವಳೂ ಆಗುವಳು.

 ೨೭) ರೇವತಿ : ನಕ್ಷತ್ರದಲ್ಲಿ ಜನಿಸಿದ ಕನೈಯು ತನ್ನ ತಂದೆ ತಾಯಿಗಳ ಹಾಗೂ ಅತ್ತೆ ಮಾವಂದಿರರ ಗುರು ಹಿರಿಯರ ಸೇವೆಯನ್ನು ಮಾಡುವವಳೂ ಅವರ ಶುಭಾಶೀರ್ವಾದವನ್ನು ಪಡೆದು ತನ್ನ ಮತ್ತು ಪತಿಯ ಉತ್ಕರ್ಷವನ್ನು ಹೊಂದಿದಾಕೆಯೂ ಆಗುವಳು. ಈಕೆ ಆರೋಗ್ಯ ಭಾಗ್ಯ ಸಂಪನ್ನೆಯಾಗಿ, ಎಲ್ಲರಿಗೂ ಬೇಕಾದವಳಾಗಿ, ವ್ರತ ನೇಮಾದಿಗಳನ್ನು ಆಚರಿಸುವ ಸಂಪನ್ನೆಯಾಗಿ ಪರಿಶುದ್ಧ ಹೃದಯದವಳಾಗಿ ಬಾಳುತ್ತಾಳೆ. ಈಕೆ ವಿರೋಧಿಗಳನ್ನು ಗೆಲ್ಲುವ ಶಾರಿತ ಸಹನಗುಣವುಳ್ಳಾಕೆಯು. ಈಕೆ ಪತಿಭಕ್ತಿ ಪಾರಾಯಣಳೂ ಆಗಿರುತ್ತಾಳೆ.