ಮನೆ ಆರೋಗ್ಯ ಬ್ಯಾಕ್ಟೀರಿಯಾಲ್ ಡಯೇರಿಯಾ ಮತ್ತು ವೈರಲ್ ಡಯೇರಿಯಾ

ಬ್ಯಾಕ್ಟೀರಿಯಾಲ್ ಡಯೇರಿಯಾ ಮತ್ತು ವೈರಲ್ ಡಯೇರಿಯಾ

0

ಬ್ಯಾಕ್ಟೀರಿಯ ಡತೇರಿಯಾರಿದಲ್ಲಿ100-101 ಡಿಗ್ರಿಗಳ ಜ್ವರ ವಿರುತ್ತದೆ. ಹೊಟ್ಟೆ ನೋಯುತ್ತದೆ, ವಾಂತಿ ಆಗಬಹುದು, ಅಪರೂಪ ಭೇದಿ 3-5 ದಿನ ಆಗುತ್ತದೆ ಮಲ ಪರೀಕ್ಷೆಯಲ್ಲಿ ಅಂಟು ರಕ್ತ ಬಳಿಕಣಗಳು ಕಂಡುಬರುತ್ತದೆ.

ವೈರಲ್ ಡಯೇರಿಯಾದಲ್ಲಿ ಅಪರೂಪಕ್ಕೆ ಜ್ವರ ಬರುತ್ತದೆ. ಹೊಟ್ಟೆ ನೋವು ಕೂಡ ಅಪರೂಪವೇ ಹೊಟ್ಟೆ ತೊಳೀಸುವುದು ವಾಂತಿಯಾಗುವುದು. ಸಾಮಾನ್ಯವಾಗಿರುತ್ತದೆ ಮಲ ಪರೀಕ್ಷೆಯಲ್ಲಿ ಅಂಟು ರಕ್ತ, ಬಿಳಿ ರಕ್ತ ಕಣಗಳು ಕಾಣಿಸುವುದಿಲ್ಲ

ಅತಿಸಾರದ ನಿವಾರಣೆ :-

ಅತಿಸಾರದಿಂದ ನೆರಳುವ ಮಗುವಿಗೆ ಕುಡಿಯಲು ಹೆಚ್ಚು ನೀರು ಕೊಡಬೇಕು. ತಾಯಿಯ ಹಾಲನ್ನು ನಿಲ್ಲಿಸಕೂಡದು ಎಂದಿನಂತೆ ಆಹಾರ ಕೊಡಬೇಕು ಅತಿಸಾರ ಪೀಡಿತ ಮಗುವಿಗೆ ನೀರು ತಾಯಿಯ ಹಾಲು ಆಹಾರದ ಅತಿ ಮುಖ್ಯವಾದಂತಹವು ಇವನು ಕೊಡುತ್ತಲೇ ಇರಬೇಕು.

ಡಿಹೈಡ್ರೇಶನ್ ಲಕ್ಷಣಗಳು ಕಂಡು ಬಂದರೆ ನರದ ಮೂಲಕ ಸಲೈನು ಪೂರೈಸಬೇಕು.

ಅತಿಸಾರಕ್ಕೀಡಾದ ಮಗುವಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು, ಸಕ್ಕರೆ ಬೆರೆಸಿದ ನೀರನ್ನು ಅಧಿಕವಾಗಿ ಕೊಡಬೇಕೆಹೊರತು ರೋಗನಿರೋಧಕ ಔಷಧಿಗಳ ಅಗತ್ಯವಿಲ್ಲ. ಬೇಧಿ ಕಡಿಮೆಯಾಗಲು ಕೋಡಿಂಗ್ ಲೋಪರ್ ಮೈಡ್ ಮುಂತಾದ ಔಷಧಿಗಳನ್ನು ಬಳಸಬಾರದು.

ORT ( ಒರಲ್ ರೀ ಹೈಡ್ರೇಶನ್ ಥೆರಪಿ ):

ಇದನ್ನು ಜೀವ ಜಲ ಚಿಕಿತ್ಸೆ ಎನ್ನುತ್ತಾರೆ. ಚಿಕ್ಕ ಮಕ್ಕಳಲ್ಲಿ ಅತಿಸಾರದಿಂದಾಗಿ ಶರೀರದ ನೀರು ಕಡಿಮೆಯಾಗುವುದು ಡಿ ಹೈಡ್ರೇಶನ್ ಸಾಮಾನ್ಯ ವಿಷಯ ಡಿ ಹೈಡ್ರೇಶನ್ ಇಂದಾಗಿ ಮಕ್ಕಳಿಗೆ ಮರಣ ಸಂಭವಿಸಬಹುದು ದಿನಕ್ಕೆ 8,000 ಮಕ್ಕಳು ಇದರಿಂದಾಗಿ ಸಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಜೀವ ಜಲ ಚಿಕಿತ್ಸೆ ಬಗ್ಗೆ ಸಾಮಾನ್ಯ ಜನರಿಗೆ ಚಳುವಳಿಕೆ ಇದ್ದರೆ ಎಷ್ಟು ಸಾವು ನೋವುಗಳು ಸುಲಭವಾಗಿ ತಡೆಯಬಹುದು ಅತಿಸಾರದಿಂದ ಮಗು ತನ್ನ ಶರೀರದಿಂದ ಅತ್ಯಧಿಕ ಪ್ರಮಾಣದಲ್ಲಿ ನೀರು ಮತ್ತು ಲವಣಗಳು ಕಳೆದುಕೊಳ್ಳುತ್ತದೆ ನೀರು ಮತ್ತು ಲವಣಗಳನ್ನು ಕಳೆದುಕೊಂಡು ಮಗು ಸುಸ್ತಾಗುತ್ತದೆ ಹಸಿವಿಲ್ಲವಾಗುತ್ತದೆ, ವಾಂತಿಯೂ ಆಗುತ್ತದೆ. ಅದರಿಂದಾಗಿ ಮಗುವಿನ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸುತ್ತದೆ ಮರಣ ಸಂಭವಿಸುತ್ತದೆ, ಅಧಿಕಾರದ ಮಗುವಿಗೆ ಆರಂಭದಲ್ಲೇ ಓವರಲ್ ರಿಹೈಡ್ರೇಶನ್ ತೆರಪಿ ಜೀವ ಜಲ ಚಿಕಿತ್ಸೆ ಆರಂಭಿಸಿದರೆ ಡಿ ಹೈಡ್ರೇಶನ್ ಆಗುವುದಿಲ್ಲ. ಜೀವಜಲ ಚಿಕಿತ್ಸೆ ಬಹು ಸುಲಭ ನೀರಿಗೆ ಉಪ್ಪನ್ನು ಸೇರಿಸಿ ಕುಡಿಸುವುದರಿಂದ ಕರುಳುಗಳ ಮೂಲಕ ಕಳೆದು ಹೋದ ಉಪ್ಪು ಮತ್ತು ನೀರನ್ನು ಮತ್ತೆ ಪೂರೈಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ಮಗು ಸುಸ್ತಾಗುವುದಿಲ್ಲ ಅಲ್ಲದೆ ಮತ್ತಷ್ಟು ಶಕ್ತಿ ಆಗುತ್ತದೆ ಆಹಾರವನ್ನು ಸೇವಿಸುತ್ತದೆ.

ಅತಿಸಾರದಿಂದ ಜಟಿಲತೆಗಳು :

ಅತಿಸಾರಕ್ಕೆ ಯಾವುದೇ ಕಾರಣವಾಗಿದ್ದರೂ ಕರುಳು ಘಾಸಿಒಳಗಾಗುಳ್ಳುತ್ತದೆ. ಘಾಸಿಗೊಳಗಾದ ಕರುಳಿನಿಂದ ಆಹಾರ ಹೀರಲ್ಪಡುವುದಿಲ್ಲ. ಅತಿಸಾರ ರೋಗ ಹಲವಾರು ದಿನ ಇದ್ದರೆ ಆ ಮಗುವಿಗೆ ಆಹಾರದ ಕೊರತೆಯಾಗುತ್ತದೆ. ಕೆಲವು ಮಕ್ಕಳಿಗೆ ಅಧಿಕಾರ ಪದೇ ಪದೇ ಬರುತ್ತಿರುತ್ತದೆ ಇಂತಹ ಮಕ್ಕಳಿಗೆ ಪೋಷಕಾಂಶಗಳ ಕೊರತೆ ಸ್ಪಷ್ಟವಾಗಿ ಕಂಡು ಬರುತ್ತದೆ. ಅಲ್ಲದೆ ಆಹಾರ ಕೊರತೆಯಿಂದ ಕ್ಷಮಿಸುತ್ತವೆ. ಇದರೊಂದಿಗೆ ಇತರೆ ಕಾಯಿಲೆಗಳು ತಲೆ ಹಾಕುತ್ತವೆ ನ್ಯೂಮೋನಿಯ ಕೂಡ ಬರುತ್ತದೆ,..

ಅತಿಸಾರದ ಮಗುವಿಗೆ ನೀರು, ಉಪ್ಪು ಎಷ್ಟು ಅಗತ್ಯ ಆಹಾರ ಅಷ್ಟೇಅಗತ್ಯ. ಸುಲಭ ಜೀವ ಕೊಡಬೇಕು ತಾಯಿಯ ಹಾಲನ್ನು ನಿಲ್ಲಿಸಬಾರದು ಬಾಳೆಹಣ್ಣು, ಮೊಸರುಕೊಡಬೇಕು. ಆಹಾರದ ಜೊತೆಗೆ ಸಕ್ಕರೆ, ಉಪ್ಪು ಬೆರೆಸಿದ ನೀರು ಹೆಚ್ಚಾಗಿ ಕೊಡಬೇಕು. ಜೀವ ಜಲ ಚಿಕಿತ್ಸೆಯಲ್ಲಿ ಬರೀ ಉಪ್ಪು, ಸಕ್ಕರೆ ಬೆರೆಸಿದ ನೀರೇ ಅಲ್ಲದೆ ಗಂಜಿ ಮಜ್ಜಿಗೆ ಹಣ್ಣಿನ ರಸಗಳನ್ನು ಕೊಡಬೇಕು. ಕೋಲಾಗಳನ್ನು ಕುಡಿಸಬಾರದು.

ಜೀವಜಲ ಚಿಕಿತ್ಸೆ ನೆರವಿಗೆ ಬಾರದ ಪರಿಸ್ಥಿತಿ : ಮಲದಲ್ಲಿ ವಿಪರೀತ ರಕ್ತ ಹೋಗುತ್ತಿದ್ದಾಗ ಜೀವ ಜಲ ಚಿಕಿತ್ಸೆ ಒಂದೇ ಸಾಕಾಗುವುದಿಲ್ಲ. ನರದ ಮೂಲಕ ಸಲೈನ್, ಎಲೆಕ್ಟೋಲೈಟ್ ಪೂರೈಸಲಾಗುತ್ತದೆ. ತೀವ್ರವಾದ ಡಿ ಹೈಡ್ರೇಶನ್ ಇದ್ದಾಗ ಕರುಳುಗಳ ಚಲನೆ ನಿಂತು ಹೋದಾಗ ವಿಪರೀತ ವಾಂತಿ ಆಗುತ್ತಿದ್ದರೆ ನಿಯಂತ್ರಣವಿಲ್ಲದೆ ಆಗುತ್ತಿದ್ದಾಗ ಜೀವಜಲ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ.

ಜೀವ ಜಲ ಚಿಕಿತ್ಸೆಯ ಪಕೀಟುಗಳು :

ಓರಲ್ ರೀ- ಹೈಡ್ರೇಶನ್ ಥೆರಪಿ ಪುಡಿಯ ಪಾಕಿಟ್ಟುಗಳು ಸಿದ್ಧ ಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಈ ಮಿಶ್ರಣದಲ್ಲಿ ಹೈಡ್ರೇಶನ್ ತೆರಪಿಗೆ ಬೇಕಾದ ಲವಣಗಳೆಲ್ಲ ಸೂಕ್ತ ಪ್ರಮಾಣದಲ್ಲಿ ಇರುತ್ತದೆ. ಒಂದುಲೀಟರ್ ನೀರಿಗೆ ಇಡೀ ಒಂದು ಪ್ಯಾಕೆಟ್ ಅನ್ನು ಬೇರಿಸಬೇಕು. ಹಾಗೆ ಸಿದ್ಧಪಡಿಸಿದ ದ್ರವಣವನ್ನು 24 ಗಂಟೆಗಳಲ್ಲಿ ಮುಗಿಸಬೇಕು. ಅತಿಸಾರದಿಂದ ನೆರಳುವ ಎರಡು ವರ್ಷದೊಳಗಿನ ಮಗುವಿಗೆ ಪ್ರತಿ ಬಾರಿ ಭೇದಿಯಾದಾಗಲೂ 50-100 ಎಂಎಲ್ ದ್ರಾವಣವನ್ನು ಕುಡಿಸಬೇಕು. 2-10 ವರ್ಷಗಳ ಮಕ್ಕಳಿಗೆ ಪ್ರತಿ ಸಾರಿ ಭೇದಿ ಆದಾಗಲೂ 100-200 ಎಂ.ಎಲ್ ದ್ರಾವಣವನ್ನು ಕುಡಿಸಬೇಕು. ಬೇಧಿ ನಿಂತ ಮೇಲು ಕೂಡ 1-2 ದಿನ ಜೀವನ ಚಿಕಿತ್ಸೆ ಮಾಡಬೇಕು.

ಗೃಹೋಪಚಾರ :-

ಜೀವಜಲ ಚಿಕಿತ್ಸೆಗಾಗಿ ಮಾರುಕಟ್ಟೆಯಲ್ಲಿ ಸಿಗುವ ಪಾಕೀಟುಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದ ಪ್ರಮಾಣದಂತೆ ಎಲ್ಲವೂ ಸೂಕ್ತ ಪ್ರಮಾಣದಲ್ಲಿ ಇರುತ್ತದೆ. ಈ ಪಾಕೆಟುಗಳು ಲಭ್ಯವಿಲ್ಲದಿದ್ದಾಗ ಅತಿಸಾರದ ಮಗುವಿಗೆ ತಕ್ಷಣ ಗ್ರಹೋಪಚಾರ ಆರಂಭಿಸಬೇಕು.

ಹೀಗೆ ತಯಾರಿಸಿದ ದ್ರಾವಣವನ್ನು ಅತಿಸಾರ ಪೀಡಿತ ಮಗುವಿನ ಮೇಲೆ ವಿವರಿಸಿದ ಪ್ರಮಾಣದಲ್ಲಿ ಕುಡಿಸಬೇಕು. ಮನೆಯಲ್ಲಿ ತಯಾರಿಸಿರುವ ದ್ರಾವಣದಲ್ಲಿ ಪೊಟ್ಯಾಶಿಯಂ ಇರುವುದಿಲ್ಲ. ಹಾಗಾಗಿ ಮಗುವಿಗೆ ಸುಸ್ತು, ಸ್ನಾಯು ದೌರ್ಬಲ್ಯ ಹೊಟ್ಟೆ ಉಬ್ಬರವಾಗುತ್ತದೆ. ಹೀಗಾಗದಂತೆ ಎಳನೀರು, ಹಣ್ಣಿನ ರಸ, ಕುಡಿಬೇಕು ಜೀವ ಜಲ ಚಿಕಿತ್ಸೆ ಜೀವ ಉಳಿಸುತ್ತದೆ ಪ್ರತಿಯೊಬ್ಬ ತಾಯಿಗೂ ಇದರ ಉಪಯುಕ್ತತೆ ತಿಳಿದಿರಬೇಕು.

ಹಿಂದಿನ ಲೇಖನದೇಶವನ್ನು, ನಾಡನ್ನು ಮುನ್ನಡೆಸಲು ವೈಜ್ಞಾನಿಕ ಮನೋಭಾವದ, ವೈಚಾರಿಕ ತಿಳಿವಳಿಕೆಯ ಪದವೀಧರರ ಅಗತ್ಯವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಹೆಚ್.ಸಿ.ಮಹದೇವಪ್ಪ