ಶಿರ್ವ: ಬೆಳ್ಳಂಬೆಳಗ್ಗೆ ಪಂಜಿಮಾರು ಬಳಿ ರಾಜ್ಯ ಹೆದ್ದಾರಿ ಹದಗೆಟ್ಟ ಪರಿಣಾಮ ಬೈಕ್ ಅಪಘಾತ ಸಂಭವಿಸಿ ಸವಾರ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಗಾಯಗೊಂಡ ಯುವಕ ಉಡುಪಿ ಮೂಲದವನೆಂದು ತಿಳಿದುಬಂದಿದ್ದು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಂಬುಲೆನ್ಸ್ ನಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲುಮಾಡಲಾಗಿದೆ.
ಭಾರಿ ಮಳೆಗೆ ಕೋಡು ಪಂಜಿಮಾರು ರಾಜ್ಯ ಹೆದ್ದಾರಿ ಸಂಫೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಚಲಿಸುವಂತಾಗಿದೆ.














