Saval TV on YouTube
ಬಾಗಲಕೋಟೆ(Bagalakote): ಜಿಲ್ಲೆಯ ಮುಧೋಳದಲ್ಲಿ ಮಗನೇ ತಂದೆಯನ್ನು ಕೊಂದು ದೇಹವನ್ನು ತುಂಡರಿಸಿ ಕೊಳವೆಬಾವಿಯಲ್ಲಿ ತುರುಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪರಶುರಾಮ ಕುಳಲಿ (54) ಕೊಲೆಯಾದ ವ್ಯಕ್ತಿ.
ಕುಡಿದು ಬಂದು ಹೊಡೆಯುತ್ತಿದ್ದ ಎಂಬ ಕಾರಣಕ್ಕೆ ಕುಳಲಿ ಅವರನ್ನು ಅವರ ಪುತ್ರ ವಿಠ್ಠಲ ಕುಳಲಿ ಡಿ.6 ರಂದು ಮಧ್ಯರಾತ್ರಿ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಪರಶುರಾಮ ಮೃತರಾಗಿದ್ದಾರೆ. ಶವವನ್ನು ಹೊಲಕ್ಕೆ ತೆಗೆದುಕೊಂಡು ಹೋಗಿ ಹೂಳಲು ನೋಡಿದ್ದಾನೆ. ಹೊಳಿದರೆ ಸಿಕ್ಕಿ ಬೀಳಬಹುದು ಎಂದು ಪಾರ್ಥಿವ ಶರೀರವನ್ನು ತುಂಡು, ತುಂಡಾಗಿಸಿ ಕೊಳವೆ ಬಾವಿಯಲ್ಲಿ ತುರುಕಿದ್ದಾನೆ.
ಪರುಶರಾಮ ಪತ್ನಿ, ಪತಿ ಕಾಣೆಯಾದ ಬಗ್ಗೆ ದೂರು ನೀಡಿ, ಮಗನ ಮೇಲೆ ಅನುಮಾನವಿರುವುದಾಗಿ ತಿಳಿಸಿದ್ದಾರೆ. ನಂತರ ಪೊಲೀಸರು ಮಗನನ್ನು ಪೊಲೀಸರು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಸಿಪಿಐ ಅಯ್ಯನಗೌಡ ಪಾಟೀಲ ತಿಳಿಸಿದ್ದಾರೆ.