Saval TV on YouTube
ಬಾಗಲಕೋಟೆ: ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಮುಧೋಳ ತಾಲೂಕಿನ ಕುಳಲಿ ಬಳಿ ನಡೆದಿದೆ.
ಮೃತರನ್ನು ಸದಾಶಿವ ಬೆಳಗಲಿ(18), ಗೋವಿಂದ(20) ಹಾಗೂ ಹನುಮಂತ(22) ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಸದಾಶಿವ ಬೆಳಗಲಿ ಗಂಭೀರ ಗಾಯಗೊಂಡಿದ್ದರು. ಆತನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕರಿಯಾಗದೆ ಸಾವನ್ನಪ್ಪಿದ್ದಾರೆ.
ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.














