ಮನೆ ಸುದ್ದಿ ಜಾಲ ಎಆರ್‌ಕೆಗೆ ಸಚಿವ ಸ್ಥಾನ: ಬಳೇಪೇಟೆ ಲಿಂಗರಾಜಮೂರ್ತಿ ಒತ್ತಾಯ

ಎಆರ್‌ಕೆಗೆ ಸಚಿವ ಸ್ಥಾನ: ಬಳೇಪೇಟೆ ಲಿಂಗರಾಜಮೂರ್ತಿ ಒತ್ತಾಯ

0

ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿರವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಳೇಪೇಟೆ ಲಿಂಗರಾಜಮೂರ್ತಿ ಒತ್ತಾಯಿಸಿದ್ದಾರೆ.

ಎ.ಆರ್. ಕೃಷ್ಣಮೂರ್ತಿರವರು ಮೂರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ರಾಜಕಾರಣೆ ಎಲ್ಲಾ ಪಟ್ಟುಗಳಲ್ಲೂ ಅಪಾರ ಅನುಭವವಿದೆ. ಇವರ ತಂದೆ ಬಿ. ರಾಚಯ್ಯರವರ ಮಾರ್ಗದರ್ಶನ ಹಾಗೂ ಅವರು ಅನೇಕ ಇಲಾಖೆಗಳ ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಅವರೊಂದಿಗೆ ಓಡಾಡಿ ಅಪಾರ ಅನುಭವನ್ನೂ ಕೂಡ ಹೊಂದಿದ್ದಾರೆ. ಈ ಭಾಗದ ಒಬ್ಬ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ. ಅಲ್ಲದೆ ಈ ಬಾರಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಪ್ರತಿನಿತ್ಯ ಕ್ಷೇತ್ರದ ಪ್ರಗತಿ, ಕ್ಷೇತ್ರದ ಮತದಾರರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಅಲ್ಲದೆ ಕ್ಷೇತ್ರ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನವನ್ನು ತಂದಿದ್ದಾರೆ. ತಮಗೆ ಮುಖ್ಯಮಂತ್ರಿ ನೀಡಿದ ವಿಶೇಷ ಅನುದಾನವನ್ನು ಎಲ್ಲಾ ಜಾತಿ, ಧರ್ಮಗಳ ಅಪೂರ್ಣಗೊಂಡಿರುವ ಸಮುದಾಯ ಭವನಗಳನ್ನು ಪೂರ್ಣಗೊಳಿಸುವ ಸದುದ್ದೇಶದಿಂದ ಇದಕ್ಕೆ ಸಂಪೂರ್ಣ ಅನುದಾನವನ್ನು ನೀಡಿರುವ ರಾಜ್ಯದ ಏಕೈಕ ದೂರದೃಷ್ಟಿಯುಳ್ಳ ಶಾಸಕರಾಗಿದ್ದಾರೆ.


ಕೊಳ್ಳೇಗಾಲ, ಯಳಂದೂರು ಹಾಗೂ ಚಾಮರಾಜನಗರದ ಸಂತೆಮರಹಳ್ಳಿ ಹೋಬಳಿಯನ್ನು ಒಳಗೊಂಡಿರುವ ಈ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಿ ಜನರ ಕಷ್ಟಗಳಿಗೆ ಸ್ಪಂಧಿಸುವ ಗುಣವನ್ನು ಹೊಂದಿರುವ ಶಾಸಕರಾಗಿದ್ದಾರೆ. ಆಸ್ಪತ್ರೆ, ಶಾಲಾ, ಕಾಲೇಜುಗಳು, ರಸ್ತೆ, ಚರಂಡಿ, ಪಶು ಆಸ್ಪತ್ರೆಗಳು, ಶುದ್ಧ ಕುಡಿಯುವ ನೀರು ಸೇರಿದಂತೆ ಕ್ಷೇತ್ರದ ಜನತೆಗೆ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ತಮಗೆ ಯಾವ ಖಾತೆಯನ್ನು ನೀಡಿದರೂ ಅದನ್ನು ನಿಭಾಯಿಸುವ ಶಕ್ತಿ ಇವರಿಗಿದ್ದು ಈ ಭಾಗದ ಪ್ರಭಾವಿ ನಾಯಕರಾಗಿರುವ ಇವರಿಗೆ ಪಕ್ಷದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಉಸ್ತುವಾರಿಯಾದ ಸುರ್ಜಿವಾಲ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ವರಿಷ್ಠರು ಶಾಸಕ ಎ.ಆರ್. ಕೃಷ್ಣಮೂರ್ತಿ ರವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.