ಮೈಸೂರು: ಆಗಸ್ಟ್ 15 ರಂದು ಮೈಸೂರಿನ ಪಂಜಿನ ಕವಾಯತ್ ಮೈದಾನದಲ್ಲಿ ನಡೆಯಲಿರುವ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಮತ್ತು ಕಾಗದ ಧ್ವಜವನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಳಸಬಾರದೆಂದು ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
ದಿನಾಚರಣೆಯ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಧ್ವಜಗಳನ್ನು ಬಳಸದೆ ಇರುವುದರಿಂದ ರಾಷ್ಟ್ರಧ್ವಜಕ್ಕೆ ಗೌರವ ಮತ್ತು ಅಪಮಾನವಾಗುವುದರಿಂದಾಗಿ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜವನ್ನು ಬಳಸಬಾರದು. ಬದಲಾಗಿ ಬಟ್ಟೆಯ ಧ್ವಜವನ್ನು ಬಳಸಬೇಕು. ವ್ಯಾಪಾರಸ್ಥರು ಸಹ ಪ್ಲಾಸ್ಟಿಕ್ ಮತ್ತು ಕಾಗದ ರಾಷ್ಟ್ರಧ್ವಜವನ್ನು ತಯಾರಿಸಿ ಮಾರಾಟ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Saval TV on YouTube