ಮನೆ ಮನರಂಜನೆ ಪ್ರೇಮಿಗಳ ದಿನಕ್ಕೆ ‘ಬಾನ ದಾರಿಯಲಿ’ ಚಿತ್ರ ಟೀಸರ್

ಪ್ರೇಮಿಗಳ ದಿನಕ್ಕೆ ‘ಬಾನ ದಾರಿಯಲಿ’ ಚಿತ್ರ ಟೀಸರ್

0

ನಟ ಗಣೇಶ್ ನಾಯಕರಾಗಿರುವ “ಬಾನದಾರಿಯಲಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಮಾರ್ಚ್ ನಲ್ಲಿ ತೆರೆಕಾಣುವ ನಿರೀಕ್ಷೆ ಇದೆ. ಈಗ ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

ಪ್ರೇಮಿಗಳ ದಿನವಾದ ಇಂದು ಚಿತ್ರದ ಟೀಸರ್ ನ್ನು ಬಿಡುಗಡೆ ಮಾಡಲಾಗಿದೆ.

ಇನ್ನು, “ಬಾನದಾರಿಯಲಿ’ ಚಿತ್ರಕ್ಕೆ “ನೋಡು ಎಂಥ ಚೆಂದ’ ಎಂಬ ಟ್ಯಾಗ್ಲೈನ್ ಕೂಡಾ ಇದೆ. ಈ ಚಿತ್ರವನ್ನು ಶ್ರೀವಾರಿ ಟಾಕೀಸ್ ನಿರ್ಮಿಸುತ್ತಿದೆ. ಈಗಾಗಲೇ ಪ್ರೀತಂ ಗುಬ್ಬಿ ಹಾಗೂ ಗಣೇಶ್ ಕಾಂಬಿನೇಶನ್ನಲ್ಲಿ “ಮಳೆಯಲಿ ಜೊತೆಯಲಿ’, “ದಿಲ್ ರಂಗೀಲಾ’ ಹಾಗೂ “99′ ಚಿತ್ರಗಳು ಬಂದಿವೆ. ಈಗ ನಾಲ್ಕನೇ ಬಾರಿ ಜೊತೆಯಾಗಿದ್ದಾರೆ.

ಚಿತ್ರದಲ್ಲಿ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸಿದ್ದಾರೆ. “ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ಲೀಲಾ ಎಂಬ ಸ್ವಿಮ್ಮಿಂಗ್ ಕೋಚ್ ಪಾತ್ರದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.

ಹಿಂದಿನ ಲೇಖನಕೊಡಗು: ಇಬ್ಬರನ್ನು ಕೊಂದಿದ್ದ ಹುಲಿ ಸೆರೆ
ಮುಂದಿನ ಲೇಖನಸಂವಿಧಾನದ ವಿರೋಧಿಗಳು ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಿ: ಡಾ.ಯತೀಂದ್ರ ಸಿದ್ದರಾಮಯ್ಯ