ಮನೆ ಸುದ್ದಿ ಜಾಲ ಪ್ರಧಾನಿ ಮೋದಿಗಾಗಿ ಮೈಸೂರಿನಲ್ಲಿ ಸಿದ್ದಗೊಂಡ ಬನಾರಸ್ ಪೇಟ

ಪ್ರಧಾನಿ ಮೋದಿಗಾಗಿ ಮೈಸೂರಿನಲ್ಲಿ ಸಿದ್ದಗೊಂಡ ಬನಾರಸ್ ಪೇಟ

0

ಮೈಸೂರು(Mysuru): ನ.11 ರಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶೇಷವಾದ ಬನಾರಸ್ ಪೇಟ ಸಿದ್ದವಾಗಿದೆ.

ಮೈಸೂರಿನಲ್ಲಿ ಕಲಾವಿದ ನಂದನ್​ ಸಿಂಗ್ ಎಂಬುವವರು ಸುಂದರವಾದ ಬನಾರಸ್ ಪೇಟ ಸಿದ್ಧಪಡಿಸಿದ್ದು, ಕೆಂಪು ಬಣ್ಣದ ಬಟ್ಟೆಯಿಂದ ಈ ಪೇಟವನ್ನು ತಯಾರಿಸಲಾಗಿದೆ.

ಮುಂಭಾಗದಲ್ಲಿ ರಾಷ್ಟ್ರೀಯ ಪಕ್ಷಿ ನವಿಲು ಮಾದರಿಯ ಭಿನ್ನದ ವರ್ಣದ ಪೆಂಡೆಂಟ್ ಆಕರ್ಷಣೆಯಾಗಿದ್ದು, ಎರಡು ಕಡೆಯಲ್ಲೂ ಮುತ್ತಿನ ಮಾದರಿಯ ಹರಳುಗಳನ್ನು ಜೋಡಿಸಲಾಗಿದ್ದು, ಬೆಂಗಳೂರಿನಲ್ಲಿ ಅನಾವರಣಗೊಳ್ಳುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯಲ್ಲಿರುವಂತೆ ಪೇಟದ ಮಾದರಿಯಲ್ಲೇ ಈ ಬನಾರಸ್ ಪೇಟವನ್ನು ಸಿದ್ಧಪಡಿಸಲಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರ ಸಲಹೆಯಂತೆ ಮೈಸೂರಿನ ನಮ್ಮೂರು-ನಮ್ಮೋರು ಸಮಾಜ ಸೇವಾ ಟ್ರಸ್ಟ್​​ನ ಉಸ್ತುವಾರಿಯಲ್ಲಿ ಕಲಾವಿದರು ಈ ಬನಾರಸ್ ಪೇಟವನ್ನು ಸಿದ್ಧಪಡಿಸಿದ್ದಾರೆ.

ಇದನ್ನು ಸಿಎಂ ಅವರಿಗೆ ಹಸ್ತಾಂತರ ಮಾಡಲಾಗಿದ್ದು, ಕಾರ್ಯಕ್ರಮದ ದಿನ ಪ್ರಧಾನಿ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪೇಟ ಹಸ್ತಾಂತರ ಮಾಡಲಿದ್ದಾರೆ.