ಮನೆ ಸ್ಥಳೀಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯಕ್ರಮ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯಕ್ರಮ

0

ಮೈಸೂರು: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡಂಚಿನ ಪ್ರದೇಶಗಳಲ್ಲಿ ಮಂಗಲ ಗ್ರಾಮ ಪಂಚಾಯಿತಿ ವತಿಯಿಂದ ನಮ್ಮ ಗುಂಡ್ಲುಪೇಟೆ ಮತ್ತು ಪಗ್ ಪೆಟ್ರೋಲ್ಸ್ ಸಹಯೋಗದಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯಕ್ರಮದ ಎರಡನೇ ಹಂತವನ್ನು ಯಶಸ್ವಿಯಾಗಿ ನಡೆಸಲಾಯಿತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಲ , ಜಕ್ಕಹಳ್ಳಿ ಮುಖ್ಯ ರಸ್ತೆ, ಆನಂಜಿಹುಂಡಿ , ಬರಕಟ್ಟೆಯಿಂದ ಹುಲಿಯಮ್ಮನ ದೇವಸ್ಥಾನ , ಜಕ್ಕಹಳ್ಳಿ ಗ್ರಾಮ, ಕಣಿಯನಪುರ ಕಾಲೋನಿ, ಬುರದರ ಹುಂಡಿ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬಿದ್ದ ಕಸ, ಪ್ಲಾಸ್ಟಿಕ್ ವಸ್ತು. ನೀರಿನ ಬಾಟಲ್ ಸೇರಿದಂತೆ ಇನ್ನಿತರ ಹಲವು ತ್ಯಾಜ್ಯ ವಸ್ತುಗಳನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಲಾಯಿತು. ಈ ಕಾರ್ಯಕ್ಕೆ ವಿವಿಧ ಜಿಲ್ಲೆ, ತಾಲ್ಲೂಕು, ಗ್ರಾಮಗಳಿಂದ ಆಗಮಿಸಿದ್ದ 150 ಸ್ವಯಂ ಸೇವಕರು, ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ,ಗ್ರಾಮಸ್ಥರು, ಆಶಾ, ಅಂಗನವಾಡಿ ಕಾರ್ಯಕರ್ತೆ ಯರು

ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿ 30ಚೀಲ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಗ್ರಾ.ಪಂ ಗೆ ನೀಡಲಾಯಿತು.

 ಕಾರ್ಯಕ್ರಮ ಆಯೋಜಕರು ಹಾಗೂ ಪಗ್ ಪೆಟ್ರೋಲ್ಸ್ ಮುಖ್ಯಸ್ಥರಾದ ನಿತೀಶ್ ರೆಡ್ಡಿ ಅವರು ಮಾತನಾಡಿ ಬಂಡೀಪುರ ಅಭಯಾರಣ್ಯವು ಹುಲಿ, ಆನೆ ಇತರೆ ವಿಭಾಗದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದೆ. ಇಂತಹ ಪ್ರದೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಗಿಡಮರ, ಪ್ರಾಣಿಪಕ್ಷಿ ಹಾಗು ಪರಿಸರ ಉಳಿವಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸ್ವಚ್ಛತಾ ಕಾರ್ಯದಲ್ಲಿ  ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಮತ್ತು ಸಿಬ್ಬಂದಿ, ಮಂಗಲ ಗ್ರಾಮ ಪಂಚಾಯಿತಿ ಪಿಡಿಓ ಮೋಹನ್, ಪಗ್ ಪೆಟ್ರೋಲ್ಸ್ ಮುಖ್ಯಸ್ಥ ನಿತೀಶ್ ರೆಡ್ಡಿ, ಸಂಚಾಲಕ ರಾದ ಕುಮಾರ್ ಹಾಗೂ ನಮ್ಮ ಗುಂಡ್ಲುಪೇಟೆ ತಂಡದ ಸದಸ್ಯರು, ಸ್ವಯಂ ಸೇವಕರು, ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಮಂಗಲ ಗ್ರಾಮಸ್ಥರು ಭಾಗವಹಿಸಿದ್ದರು.