ಮನೆ ರಾಜ್ಯ ಬೆಂಗಳೂರು–ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ

ಬೆಂಗಳೂರು–ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ

0

ಬೆಂಗಳೂರು: ಟೋಲ್ ಶುಲ್ಕ ವಸೂಲಿ ಮಾಡುತ್ತಿರುವ ಕಾರಣದಿಂದಾಗಿ ಬೆಂಗಳೂರು–ಮೈಸೂರು ಬಸ್ ಪ್ರಯಾಣ ದರವನ್ನು ಕೆಎಸ್‌ ಆರ್‌ ಟಿಸಿ  15ರಿಂದ  20ರವರೆಗೆ ಹೆಚ್ಚಳ ಮಾಡಿದೆ.

ಟೋಲ್ ಶುಲ್ಕ ಸರಿದೂಗಿಸಲು ಕರ್ನಾಟಕ ಸಾರಿಗೆ ಬಸ್‌ ಪ್ರಯಾಣ ದರದಲ್ಲಿ 15, ರಾಜಹಂಸ ಬಸ್‌ ಪ್ರಯಾಣ ದರದಲ್ಲಿ 18, ಐರಾವತ ಸೇರಿ ಮಲ್ಟಿ ಆ್ಯಕ್ಸೆಲ್ ಬಸ್‌ಗಳ ಪ್ರಯಾಣ ದರದಲ್ಲಿ 20 ಹೆಚ್ಚಳ ಮಾಡಲಾಗಿದೆ.

ಎಕ್ಸ್‌ ಪ್ರೆಸ್ ಹೈವೆಯಲ್ಲಿ ಪ್ರಯಾಣಿಸುವ ಬಸ್‌ಗಳಿಗೆ ಮಾತ್ರ ಈ ದರ ಅನ್ವಯವಾಗಲಿದೆ ಎಂದು ಕೆಎಸ್‌ ಆರ್‌ ಟಿಸಿ ತಿಳಿಸಿದೆ. ಎಕ್ಸ್‌ ಪ್ರೆಸ್‌ ವೇನ ಮೊದಲ ಹಂತದ ಬೆಂಗಳೂರು–ನಿಡಘಟ್ಟ ನಡುವಿನ ಕಣಿಮಿಣಿಕೆ ಟೋಲ್ ಮೂಲಕ ಸಂಚರಿಸುವ ಬಸ್‌ ಗಳಿಂದ ಮಾರ್ಚ್ 14ರಿಂದಲೇ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದೆ.  

ಖಾಸಗಿ ಬಸ್ ದರ ಸಹ  15– 20ರವರೆಗೆ ಹೆಚ್ಚಳವಾಗಿದೆ.