ಮನೆ ರಾಜ್ಯ ಬೆಂಗಳೂರು- ಮೈಸೂರು ಎಕ್ಸ್‌ ಪ್ರೆಸ್‌ ವೇ: ವೇಗ ಮಿತಿ ಮೀರಿದರೆ ದಂಡ

ಬೆಂಗಳೂರು- ಮೈಸೂರು ಎಕ್ಸ್‌ ಪ್ರೆಸ್‌ ವೇ: ವೇಗ ಮಿತಿ ಮೀರಿದರೆ ದಂಡ

0

ರಾಮನಗರ: ಕಳೆದ ಕೆಲ ದಿನಗಳಲ್ಲಿ ಬೆಂಗಳೂರು- ಮೈಸೂರು ಎಕ್ಸ್‌ ಪ್ರೆಸ್‌ ವೇ ಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣಕ್ಕಾಗಿ ವಾಹನಗಳ ವೇಗಕ್ಕೆ ಬ್ರೇಕ್​ ಹಾಕಲು ರಾಮನಗರ ಪೊಲೀಸರು ಮುಂದಾಗಿದ್ದಾರೆ.

Join Our Whatsapp Group

ರಾಮನಗರದ ಚನ್ನಪಟ್ಟಣ ಬಳಿ ಇಂಟರ್ ಸೆಪ್ಟರ್ ಅಳವಡಿಸಿ ಟ್ರಾಫಿಕ್ ಪೊಲೀಸರು ಸ್ಪೀಡ್ ಚೆಕ್ ಮಾಡುತ್ತಿದ್ದು, ವೇಗದ ಮಿತಿ ಮೀರಿದ ವಾಹನ ಸವಾರರಿಗೆ 1000 ರೂ. ದಂಡ ಹಾಕುತ್ತಿದ್ದಾರೆ.

ಹೆದ್ದಾರಿ ಮೇಲೆ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು, ಕಾರ್ ವೇಗದ ಮಿತಿ 100, ಬೈಕ್ ವೇಗದ ಮಿತಿ 80 ಹಾಗೂ ಟ್ರಕ್, ಲಾರಿ ಬಸ್ಸಿನ ಮಿತಿ 60 ನಿಗದಿ ಮಾಡಲಾಗಿದೆ. ಕಾರು 101‌ ವೇಗದಲ್ಲಿ ಹೋದರೂ 1000 ರೂ. ದಂಡ ಹಾಕಲಾಗುತ್ತಿದೆ.

ಹಿಂದಿನ ಲೇಖನಇ-ಸ್ವತ್ತು ಮಾಡಿಕೊಡಲು 25ಸಾವಿರ ಲಂಚ: ನಗರಸಭೆ ವಾರ್ಡ್ ಅಧಿಕಾರಿ ಲೋಕಾಯುಕ್ತ ಬಲೆಗೆ
ಮುಂದಿನ ಲೇಖನಹಾಸ್ಟೆಲ್ ಗಳಿಗೆ ಸಿ.ಸಿ. ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು: ರಾಘವೇಂದ್ರ