ಮನೆ ರಾಜ್ಯ ನ.29 ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್: ಸಚಿವ ಪ್ರಿಯಾಂಕ್ ಖರ್ಗೆ

ನ.29 ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್: ಸಚಿವ ಪ್ರಿಯಾಂಕ್ ಖರ್ಗೆ

0

ಬೆಂಗಳೂರು:  ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಐಟಿ ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾತನಾಡಿದ ಮಾಹಿತಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನ ಅರಮನೆ ಮೈದಾದಲ್ಲಿ ನಡೆಯಲಿರುವ 26ನೇ ಟೆಕ್ ಸಮ್ಮಿಟ್ ಅನ್ನು ಸಿಎಂ ಸಿದ್ದರಾಮಯ್ಯ  ಉದ್ಘಾಟಿಸಲಿದ್ದಾರೆ. ಬ್ರೇಕಿಂಗ್ ಬೌಂಡರಿ ಘೋಷವಾಕ್ಯದೊಂದಿಗೆ ಟೆಕ್ ಸಮ್ಮಿಟ್ ನಡೆಯಲಿದ್ದು, 30 ದೇಶಗಳ  250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಏಷ್ಯಾದಲ್ಲೇ  ಅತಿದೊಡ್ಡ ಟೆಕ್ ಸಮ್ಮಿಟ್ ಇದಾಗಲಿದೆ. ಸಣ್ಣಕಂಪನಿಗಳೀಗೂ ಟೆಕ್ ಸಮ್ಮಿಟ್ ನಲ್ಲಿ ಅವಕಾಶ ನೀಡಲಾಗುತ್ತದೆ . ಚಂದ್ರಯಾನ ಪಯಣದ  ಕುರಿತು ವಿಶೇಷ ಪ್ರದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.

ಹಿಂದಿನ ಲೇಖನಸಿವಿಲ್ ವ್ಯಾಜ್ಯಗಳನ್ನು ಸೆಟಲ್‌ ಮೆಂಟ್ ಮಾಡುವ ಪೊಲೀಸರ ಧೋರಣೆಯನ್ನು ಕಟುವಾಗಿ ಟೀಕಿಸಿದ ಹೈಕೋರ್ಟ್
ಮುಂದಿನ ಲೇಖನಕಾವೇರಿ ನೀರಿಗಾಗಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಮಂಡ್ಯ ರೈತರು