ಢಾಕಾ: ದೇಶದ್ರೋಹದ ಆರೋಪದಲ್ಲಿ ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಅವರ ಜಾಮೀನು ಅರ್ಜಿ ಯನ್ನು ನ್ಯಾಯಾಲಯವು ಗುರುವಾರ(ಜ.2) ತಿರಸ್ಕರಿಸಿದೆ.
ಚಿನ್ಮಯ್ ಅವರ ಪರವಾಗಿ ಒಟ್ಟು 11 ವಕೀಲರು ಚಟ್ಟೋಗ್ರಾಮ್ ಕೋರ್ಟ್ ನಲ್ಲಿ ವಾದ ಮಂಡಿಸಿದ್ದು ನ್ಯಾಯಾಧೀಶರಾದ ಎಂಡಿ ಸೈಫುಲ್ ಇಸ್ಲಾಂ ಅವರು ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ಮೆಟ್ರೋಪಾಲಿಟನ್ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಮೊಫಿಜುರ್ ಹಕ್ ಭುಯಾನ್ ಅವರನ್ನು ಉಲ್ಲೇಖಿಸಿ ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ಈ ಹಿಂದೆ ಡಿಸೆಂಬರ್ 12 ರಂದು ಚಿನ್ಮಯಿ ದಾಸ್ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದ ವಕೀಲ ರಬೀಂದ್ರ ಘೋಷ್ ಯಾವುದೇ ಪವರ್ ಆಫ್ ಅಟಾರ್ನಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸದ ಕಾರಣ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ವಿಚಾರಣೆಯನ್ನುಜನವರಿ ೨ಕ್ಕೆ ಮುಂದೂಡಿತ್ತು.














