ಮನೆ ಸುದ್ದಿ ಜಾಲ ಬಂಟ್ವಾಳ: ದೇವಾಲಯದ ಕೆರೆಯಲ್ಲಿ ಸ್ನಾನಕ್ಕೆ ಇಳಿದ ವಿದ್ಯಾರ್ಥಿ ಮುಳುಗಿ ಸಾವು

ಬಂಟ್ವಾಳ: ದೇವಾಲಯದ ಕೆರೆಯಲ್ಲಿ ಸ್ನಾನಕ್ಕೆ ಇಳಿದ ವಿದ್ಯಾರ್ಥಿ ಮುಳುಗಿ ಸಾವು

0

ಬಂಟ್ವಾಳ: ಸ್ನಾನಕ್ಕೆಂದು ಕೆರೆಗೆ ಇಳಿದ ವಿದ್ಯಾರ್ಥಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ಕಾರಿಂಜ ಕಂಗಿಹಿತ್ಲು ನಿವಾಸಿ ಶ್ರೀಧರ್ ಮೂಲ್ಯ ಅವರ ಪುತ್ರ ಚೇತನ್ (19) ಎಂದು ಗುರುತಿಸಲಾಗಿದೆ.

ಚೇತನ್ ಇಂದು ಕಾರಿಂಜ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಕೆರೆಯಲ್ಲಿ ಸ್ನಾನ ಮಾಡಲು ಇಳಿದಾಗ ಈ ದುರ್ಘಟನೆ ನಡೆದಿದೆ. ಚೇತನ ಜೊತೆಯಲ್ಲಿ ಇದ್ದ ಪ್ರಶ್ವಿತ್ ಎಂಬ ಮತ್ತೊಬ್ಬ ಯುವಕನಿಗೆ ಈಜು ಬಾರದ ಕಾರಣ, ಆತ ಸ್ಥಳೀಯರಿಗೆ ಸಹಾಯಕ್ಕಾಗಿ ಕರೆಮಾಡಿದ್ದ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕೆರೆಗೆ ಇಳಿದು ಹುಡುಕಾಟ ನಡೆಸಿ, ಚೇತನನ್ನು ಮೇಲಕ್ಕೆತ್ತಿದರೂ, ಆತ ಅದಾಗಲೇ ಕೊನೆಯುಸಿರೆಳೆದಿದ್ದ.

ಈ ಕುರಿತು ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.