ಮನೆ ರಾಜ್ಯ 2025ರ ಬೂಕರ್ ಪ್ರಶಸ್ತಿ ಬಾನು ಮುಷ್ತಾಕ್‌ಗೆ ಸಿಕ್ಕಿಲ್ಲ…??

2025ರ ಬೂಕರ್ ಪ್ರಶಸ್ತಿ ಬಾನು ಮುಷ್ತಾಕ್‌ಗೆ ಸಿಕ್ಕಿಲ್ಲ…??

0

ಹಾಸನ ಮೂಲದ ಲೇಖಕಿ ಬಾನು ಮುಷ್ತಾಕ್ ರನ್ನು ರಾಜ್ಯ ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದು, ಇದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಯಾಕೆ ಗೊತ್ತಾ..? ಒರಿಜನಲ್ ಬೂಕರ್ ಪ್ರಶಸ್ತಿ ವಿಜೇತರು ಬಾನು ಮುಷ್ತಾಕ್ ಅಲ್ಲ.. ನಿಜವಾದ ಬೂಕರ್ ಪ್ರಶಸ್ತಿ ವಿಜೇತರು ದೀಪಾ ಬಸ್ತಿ.., ವಿಶ್ವ ವಿಖ್ಯಾತ ಮೈಸೂರು ದಸರಾ 2025ರ ಉದ್ಘಾಟನೆಗೆ ಖ್ಯಾತ ಲೇಖಕಿ ಬಾನು ಮುಷ್ತಾಕ್ ರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ವಿಚಾರ ವ್ಯಾಪಕ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

ಲೇಖಕಿ ಭಾನು ಮುಷ್ತಾಕ್ ಮುಸ್ಲಿಂ ಸಮುದಾಯಕ್ಕೆ ಸೇರಿದವಾರಿಗಿದ್ದು, ಅವರನ್ನು ಅವರ ಮಸೀದಿಯೊಳಗೇ ಬಿಡುವುದಿಲ್ಲ. ಹೀಗಿರುವಾಗ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಎಲ್ಲರೂ ಪ್ರಶ್ನಿಸಿದ್ದಾರೆ.

ವಾದ-ವಿವಾದಗಳು ಮುಂದುವರೆದಿರುವಂತೆಯೇ ಇತ್ತ ಲೇಖಕಿ ಬಾನು ಮುಷ್ತಾಕ್ ಅವರದ್ದು, ಒರಿಜಿನಲ್ ಬೂಕರ್ ಪ್ರಶಸ್ತಿ ಅಲ್ಲ.. ಬದಲಿಗೆ ಒರಿಜಿನಲ್ ಬೂಕರ್ ಪ್ರಶಸ್ತಿ ಲಭಿಸಿರುವ ದೀಪಾ ಬಸ್ತಿ ಅವರಿಗೆ ಎಂದು ಹೇಳಲಾಗಿದೆ.

ಏನಿದು ವಿವಾದ? – ಬಾನು ಮುಷ್ತಾಕ್ ಅವರ ‘ಹಸಿನಾ ಮತ್ತು ಇತರ ಕತೆಗಳು’ ಕಥಾಸಂಕಲನಕ್ಕೆ ಬೂಕರ್ ಪ್ರಶಸ್ತಿ ಬಂದಿದೆ ಎಂದು ಹೇಳಲಾಗಿತ್ತು. ಅವರ ಈ ಕಥಾ ಸಂಕಲನದ ಅನುವಾದಿತ “ಹಾರ್ಟ್ ಲ್ಯಾಂಪ್” ಎಂಬ ಕೃತಿಗೆ ಪ್ರಶಸ್ತಿ ಲಭಿಸಿದೆ. ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದವರು ದೀಪಾಬಸ್ತಿ ಆಗಿದ್ದು, ಅವರಿಗೇ ಈ ಪ್ರಶಸ್ತಿ ಬಂದಿದೆ ಎಂಬ ವಾದಗಳೂ ಕೇಳಿಬರುತ್ತಿವೆ.

ಇದೇ ವಿವಾದ ಬಗ್ಗೆ ಇತಿಹಾಸ ತಜ್ಞ ಧರ್ಮೇಂದ್ರ ವಿಡಿಯೋ ವೈರಲ್ – ವಾದ-ವಿವಾದಗಳು ಇರುವಂತೆಯೇ ಇತ್ತ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಮಾಡಿರುವ ವಿಡಿಯೋವೊಂದು ಇದೀಗ ಈ ಚರ್ಚೆಗೆ ಮತ್ತಷ್ಟು ವೇದಿಕೆ ಕಲ್ಪಿಸಿದ್ದು, ಈ ವಿಡಿಯೋದಲ್ಲಿ ಅವರು ಬೂಕರ್ ಪ್ರಶಸ್ತಿಯ ಕುರಿತು ಮಾಹಿತಿ ನೀಡಿದ್ದಾರೆ.

‘ಬೂಕರ್ ಪ್ರಶಸ್ತಿ ಎಂಬುದು ಎರಡು ವಿಧಗಳಲ್ಲಿದ್ದು, ಒರಿಜಿನಲ್ ಬೂಕರ್ ಪ್ರಶಸ್ತಿಯನ್ನು ಆಂಗ್ಲ ಭಾಷೆಯ ಫಿಕ್ಷನ್ (ಕಾದಂಬರಿ)ಗಳಿಗೆ ನೀಡಲಾಗುತ್ತದೆ. ಅಂದರೆ ಮೂಲ ಪುಸ್ತಕವನ್ನು ಇಂಗ್ಲೀಷ್ ನಲ್ಲಿಯೇ ಬರೆದಿದ್ದರೆ, ಅದಕ್ಕೆ ನೀಡುವ ಪ್ರಶಸ್ತಿಯೇ ಒರಿಜಿನಲ್ ಬೂಕರ್ ಪ್ರಶಸ್ತಿಯಾಗಿರುತ್ತದೆ.

ಮತ್ತೊಂದು ‘ದಿ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿಯಾಗಿದ್ದು, ಇದನ್ನು ಅನುವಾದಕರ ಪರಿಣಾಮಕಾರಿಯಾಗಿದ್ದು, ಅನುವಾದವನ್ನು ಪುರಸ್ಕರಿಸುವ ಸಲುವಾಗಿ ನೀಡುವ ಪ್ರಶಸ್ತಿಯಾಗಿದೆ’ ಎಂದು ಧರ್ಮೇಂದ್ರ ಕುಮಾರ್ ಹೇಳಿದ್ದಾರೆ.

ಅದರಂತೆ ಹಾಲಿ ಬೂಕರ್ ಪ್ರಶಸ್ತಿ ಬಂದಿರುವುದು ಲೇಖಕಿ ಬಾನು ಮುಷ್ತಾಕ್ ಅವರ ‘ಹಸಿನಾ ಮತ್ತು ಇತರ ಕತೆಗಳು’ ಕಥಾಸಂಕಲನವನ್ನು ಇಂಗ್ಲೀಷ್‌ಗೆ “ಹಾರ್ಟ್ ಲ್ಯಾಂಪ್” ಎಂಬ ಹೆಸರಿನಲ್ಲಿ ಅನುವಾದ ಮಾಡಿದ ದೀಪಾ ಬಸ್ತಿ ಅವರಿಗೆ, ಅವರ ಶ್ರಮವನ್ನು ನಾವು ಪರಿಗಣಿಸಲೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಮುಕ್ತವಾಗಿ ಹೇಳಬೇಕಾದರೆ ದಸರಾ ಉದ್ಘಾಟನೆಗೆ ಅನುಸರಿಸಿದ ಮಾನದಂಡ ತಪ್ಪು. ಬೂಕರ್ ಪ್ರಶಸ್ತಿ ಪಡೆದವರಿಗೆ ದಸರಾ ಉದ್ಘಾಟನೆಗೆ ಅವಕಾಶ ಕೊಡಬೇಕಾದರೆ ಅದು ದೀಪ ಬಸ್ತಿ ಅವರಿಗೆ. ನಮ್ಮ ಧರ್ಮ ನಮ್ಮ ಸಂಸ್ಕೃತಿ ನಮ್ಮ ಹಕ್ಕು. ಸರ್ಕಾರಈಗಲಾದರೂ ಎಚ್ಚೆತು ಆಗಿರುವ ತಪ್ಪನ್ನು ಸರಿಪಡಿಸಲಿ ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ.