ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ರಾಮಘಟ್ಟ ಗ್ರಾಮದಲ್ಲಿ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ 200 ಕೋಳಿ, 50 ಕುರಿ, 6 ಹಸುಗಳು ಸಜೀವದಹನವಾಗಿವೆ.
ರೈತ ಚೇತನ್ ಕುಮಾರ್ ಎಂಬುವರಿಗೆ ಸೇರಿದ ಹಸು, ಕುರಿ, ಕೋಳಿಗಳು ಮೃತಪಟ್ಟಿವೆ. ಹಸು, ಕುರಿ, ಕೋಳಿ ಕಳೆದುಕೊಂಡ ರೈತ ಚೇತನ್ ಕುಟುಂಬ ಕಂಗಾಲಾಗಿದೆ.
ಸೋಮವಾರ (ಡಿ.11) ರಾತ್ರಿ ಘಟನೆ ನಡೆದಿದ್ದು, ಈವರೆಗೆ ತಹಶೀಲ್ದಾರ್, ಪಿಡಿಒ, ಪಶು ಇಲಾಖೆಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ.
Saval TV on YouTube