ಮನೆ ಮನರಂಜನೆ ನೈಜ ಘಟನೆ ಆಧಾರಿತ ಚಿತ್ರ ‘ಬೇರ’ ತೆರೆಗೆ

ನೈಜ ಘಟನೆ ಆಧಾರಿತ ಚಿತ್ರ ‘ಬೇರ’ ತೆರೆಗೆ

0

ಈಗಾಗಲೇ ಟ್ರೇಲರ್‌ ಮೂಲಕ ಗಮನ ಸೆಳೆದಿರುವ “ಬೇರ’ ಚಿತ್ರ ಇಂದು ತೆರೆಕಾಣುತ್ತಿದೆ. ಕರಾವಳಿ ಭಾಗದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಅಲ್ಲಿನ ಧರ್ಮ ಸಂಘರ್ಷದ ಜೊತೆಗೆ ಹಲವು ಅಂಶಗಳನ್ನು ಹೇಳಲಾಗಿದೆ.

Join Our Whatsapp Group

ಚಿತ್ರದ ಹಾಗೂ ತಮ್ಮ ಜರ್ನಿಯ ಬಗ್ಗೆ ಮಾತನಾಡುವ ನಿರ್ದೇಶಕ ವಿನು ಬಳಂಜ, “ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್‌. ತುಳುವಿನಲ್ಲಿ ಬೇರ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ಯಾವ ತಾಯಂದ್ರ ಮಕ್ಕಳೂ ಇನ್ನೊಬ್ಬರಿಂದಾಗಿ ಸಾಯಬಾರದು ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತವೆ’ ಎನ್ನುವುದು ಅವರ ಮಾತು.

ಚಿತ್ರದಲ್ಲಿ ದತ್ತಣ್ಣ, ಯಶ್‌ ಶೆಟ್ಟಿ, ಹರ್ಷಿಕಾ ಪೂಣತ್ಛ, ಅಶ್ವಿ‌ನ್‌ ಹಾಸನ್‌, ಚಿತ್ಕಲ ಬಿರಾದಾರ್‌, ಮಂಜುನಾಥ್‌ ಹೆಗಡೆ, ಗುರು ಹೆಗಡೆ, ರಾಕೇಶ್‌ ಮಯ್ಯ, ಧವಳ್‌ ದೀಪಕ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಸ್‌.ಎಲ್‌.ವಿ ಕಲರ್ಸ್‌’ ಲಾಂಛನದಲ್ಲಿ ದಿವಾಕರ ದಾಸ್‌ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಐರಾವನ್‌ ಹಾಗೂ ಕೈ ಜಾರಿದ ಪ್ರೀತಿ ತೆರೆಗೆ

ಜೆಕೆ ನಾಯಕರಾಗಿ ನಟಿಸಿರುವ “ಐರಾವನ್‌’ ಚಿತ್ರ ಕೂಡಾ ಇಂದು ತೆರೆಕಾಣುತ್ತಿದೆ. ಡಾ.ನಿರಂತರ ಗಣೇಶ್‌ ನಿರ್ಮಿಸಿರುವ ಈ ಚಿತ್ರವನ್ನು ರಾಮ್ಸ್‌ ಗಂಗ ನಿರ್ದೇಶಿಸಿ ದ್ದಾರೆ. ಚಿತ್ರದಲ್ಲಿ ಅದ್ವಿತಿ ಶೆಟ್ಟಿ ನಾಯಕಿ.

ಇನ್ನು, ಪುಷ್ಪಾ ಭದ್ರಾವತಿ ಅವರು ನಿರ್ಮಿಸಿ, ನಿರ್ದೇಶಿಸಿರುವ “ಕೈ ಜಾರಿದ ಪ್ರೀತಿ’ ಇಂದು ತೆರೆಕಾಣುತ್ತಿದೆ. ಚಿತ್ರದಲ್ಲಿ ಚೈತನ್‌ ಕೃಷ್ಣನ್‌, ಸನತ್‌ ಕುಮಾರ್‌ ನಾಯಕ ನಟರಾಗಿ ಅಭಿನಯಿಸಿದ್ದು, ಮಧು ಶೆಟ್ಟಿ , ಮಂಜುಶ್ರೀ ಶೆಟ್ಟಿ, ನಾಯಕಿಯರಾಗಿ ಅಭಿನಯಿಸಿದ್ದಾರೆ. ಸುಮನ್‌, ನಾಗೇಂದ್ರ ಅರಸ್‌, ಧ್ರುವ ಶೆಟ್ಟಿ, ಭುವನ್‌ ಗೌಡ, ಡ್ಯಾನಿ ಕುಟ್ಟಪ್ಪ , ಕೋಟೆ ಪ್ರಭಾಕರ್‌, ಮುಂತಾದವರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.