ಮನೆ ಯೋಗಾಸನ ಮೂಲ ಬಂಧ

ಮೂಲ ಬಂಧ

0

(ಹೆಸರೇ ಹೇಳುವಂತೆ ಮೂಲ, ಆದಿ ಹುಟ್ಟುವಾಗ ಜಾಗ ಅಥವಾ ಆಧಾರ) ಆಸನ ದ್ವಾರ ವೀಕ್ಷಣೆಗಳ ಮಧ್ಯದ ಜಾಗವನ್ನು ಮೂಲ ಎನ್ನುತ್ತಾರೆ.


ಈ ಜಗದ ಮಾಂಸ ಖಂಡಗಳನ್ನು ಕುಗ್ಗಿಸಿ ಹೊಕ್ಕಳಿನ ಕಡೆಗೆ ಮೇಲಕ್ಕೆ ಎಳೆಯಬೇಕು. ಆದ್ದರಿಂದ ಹೊಕ್ಕಳ ಕೆಳಗಿನ ಹೊಟ್ಟೆಯ ಒಳ-ಕೇಳಬಾಗವು ಹಿಂದಕ್ಕೆ ಮತ್ತು ಮೇಲಕ್ಕೆ ಬೆನ್ನು ಹಿರಿಯ ಕಡೆಗೆ ಒತ್ತಲ್ಪಡುತ್ತದೆ. ಅಪಾನವಾಯುವಿನ ದಿಕ್ಕು ಬದಲಾಗಿ ಮೇಲ್ಭಾಗಕ್ಕೆ ತಿರುಗಿ ಹೃದಯದ ಮದ್ಯ ನಡೆಸಿರುವ ಪ್ರಾಣವಾಯುವಿನ ಪ್ರವಾಹದೊಡನೆ ಮಿಳಿತಗೊಳ್ಳುತ್ತದೆ. ಈ ಬಂಧನವನ್ನು ಅಂತರ ಕುಂಭದ ಸ್ಥಿತಿಯಿಂದ ಮಾತ್ರವೇ ಆರಂಭಿಸಬೇಕು. ರೂಢಿಯಾದ ಬಳಿಕ ಬಾಹ್ಯ ಕುಂಭಕದಲ್ಲಿ ಮುಂದುವರಿಸಬಹುದು.
ವಿಶೇಷ ಸೂಚನೆ :-
ಉಡ್ಡಿಯಾನ ಮತ್ತು ಮೂಲಭಂದ ಇವೆರಡರಲ್ಲಿ ಹೊಟ್ಟೆಯ ಬಿಗಿತದಲ್ಲಿ ತುಂಬಾ ವ್ಯತ್ಯಾಸವಿದೆ. ಉದ್ಯಾನ ಬಂಧದಲ್ಲಿ ಗುದನಾಳದಿಂದ ವಪೇಯವರೆಗಿನ ಪ್ರದೇಶವನ್ನು ಬೆನ್ನುಹುರಿಯ ಕಡೆಗೆ ಹಿಂದಕ್ಕೆಳೆದು ಮೇಲೆತ್ತಲಾಗುತ್ತದೆ. ಮೂಲಬಂದದಲ್ಲಿ ಕೇವಲ ಗುದದ್ವಾರದಿಂದ ಹೊಕ್ಕಳ ವರೆಗೆ ಪೆರಿನಿಯಂ ಮತ್ತು ಕಿಬ್ಬೊಟ್ಟೆಗಳ ಭಾಗಗಳನ್ನು ಮಾತ್ರ ಕುಗ್ಗಿಸಲ್ಪಟ್ಟು ಹಿಂದಕ್ಕೆಳೆದು ಮೇಲೆತ್ತಲಾಗುತ್ತದೆ.
ಪರಿಣಾಮ :-
ಇದರಿಂದ ಲೈಂಗಿಕ ಶಕ್ತಿಯ ಧಾರಣೆ ಹೆಚ್ಚುತ್ತದೆ. ಇದನ್ನು ಅಭ್ಯಾಸಿಸುವಾಗ ಯೋಗಿಯು ಮೂಲ ಸೃಷ್ಟಿಯ ಅಂತರಾಳವನ್ನು ಅರಿಯಲು ಯತ್ನಿಸುತ್ತಾನೆ, ಚಿತ್ತ ಬುದ್ಧಿಯ ಅಹಂಕಾರ ಈ ಮೂರು ಧಾತುಗಳ ಬಂಧನದಿಂದ ಬಿಡುಗಡೆ ಹೊಂದುವುದು ಅವನ ಮೂಲ ಉದ್ದೇಶವಾಗಿರುತ್ತದೆ.
ಅಶ್ವಿನಿ ಮುದ್ರೆ (ಅಥವಾ ಅಶ್ವಿನಿಮುದ್ರಾ ಕ್ರಿಯೆ) :-
ಅರ್ಥ ಸಹ ನೋಡಿದರೆ ಮುದ್ರೆಯಲ್ಲ ಬದಲಿಗೆ ಇದೊಂದು ಕ್ರಿಯೆ ಆಗಿದೆ. ಆದರೆ ರೂಢಿಯಲ್ಲಿ ಮುದ್ರೆಯೆಂದು ಹೇಳುತ್ತಾರೆ. ಬರಿ ಹೊಟ್ಟೆಯಲ್ಲಿ ಯಾವುದೇ ಧನಾತ್ಮಕ ಆಸನ (ಪದ್ಮಾಸನ ಅಥವಾ ವಜ್ರಸನದಲ್ಲಿ) ಅಥವಾ ಮಲಗಿ ಅಥವಾ ಕುಳಿತು (ಯಾವುದೇ ಸ್ಥಿತಿಯಲ್ಲಿ) ಮಲದ್ವಾರ ಅಥವಾ ಗುದದ್ವಾರವನ್ನು ಆಕುಂಚನ ಪ್ರಸರಣ ಮಾಡುವುದು (ಮೇಲಕ್ಕೆ ಸುಳಿಯುವುದು ಮತ್ತು ಸಡಿಲ ಬಿಡುವುದು) ಅಶ್ವಿನಿ ಮುದ್ರೆ, ಈ ಗುದದ್ವಾರದ ಸ್ನಾಯುವನ್ನು ಎಳೆದು ಕುಗ್ಗಿಸಲು ಕ್ರಿಯೆಯಿಂದ ಮೂಲಬಂಧನದಲ್ಲಿ ಸಹಾಯವಾಗುವುದು. ಬಾಹ್ಯ ಕುಂಭಕ ಸ್ಥಿತಿಯಲ್ಲಿ ಈ ಕ್ರಿಯೆ ಮಾಡಿದರೆ ಹೆಚ್ಚು ಲಾಭ ಉಂಟು.
ಪರಿಣಾಮ :-
ಇದರಿಂದ ಪ್ರಾಣಶಕ್ತಿ ವೃದ್ಧಿ ಮತ್ತು ಬ್ರಹ್ಮಚರ್ಯೆಯಲ್ಲಿ ಸಹಕಾರಿ. ಗ್ಯಾಸ್, ಮಲಬದ್ಧತೆ, ಮೂಲವ್ಯಾಧಿ, ಮೂತ್ರ ರೋಗಗಳನ್ನು ವಾಸಿಮಾಡಿ ಬಸ್ತಿ ಪ್ರದೇಶವನ್ನು ಸ್ವಸ್ಥಗೊಳಿಸುತ್ತದೆ. ಇದರ ಅಭ್ಯಾಸದಿಂದ ಸ್ತ್ರೀ- ಪುರುಷರಿಬ್ಬರ ಯೌವನಾಂಗಗಳು ಸಶಕ್ತ ಹಾಗೂ ನಿರ್ವಿಕಾರವಾಗುತ್ತದೆ. ಯೌವನೋತ್ಸವ ಹೆಚ್ಚುತ್ತದೆ. ಮುಪ್ಪು ದೂರ ಸರಿಯುತ್ತದೆ. ಸ್ತ್ರೀಯರ ಗರ್ಭಾಶಯ ಸ್ವಸ್ಥವೂ, ಬಲಿಷ್ಠವಾಗುತ್ತದೆ. ಗರ್ಭಾವತಿ ಅಭ್ಯಾಸಿಸುತ್ತಿದ್ದರೆ, ಸುಖ ಪ್ರಸವವಾಗುವುದು. ವಯೋವೃದ್ದರಿಗೆ ವಿಶೇಷವಾಗಿ ಮಲಬದ್ಧತೆ, ಮೂಲ್ಯವಾಧಿ ತೊಂದರೆ ಇದ್ದವರಿಗೆ ತುಂಬಾ ಸಹಾಯಕಾರಿ.
ಶಕ್ತಿಚಾಲಿನೀ ಮುದ್ರೆ (ಶಕ್ತಿಚಾಲಿನೀ ಮುದ್ರಾಕ್ರಿಯೆ) :-
ಇದು ಅಷ್ಟೇ ಮುದ್ರೆಯಲ್ಲ ಇದೊಂದು ಕ್ರಿಯೆಯಾಗಿದೆ. ವಜ್ರಾಸನದಲ್ಲಿ ಕುಳಿತು ಮುತೇಂದ್ರಿಯವನ್ನು ಒಳಗೆ ಎಳೆದುಕೊಳ್ಳುವ ಮತ್ತು ಹೊರಬಿಡುವ ಕ್ರಿಯೆ ಇದನ್ನು ಕ್ರಮವಾಗಿ ಹೆಚ್ಚಿಸುತ್ತಾ ಹೋಗಬೇಕು. (20-25 ಸುತ್ತುಗಳಿಂದ ಪ್ರಾರಂಭಿಸಿ 50-100 ಸಲ ದವರೆಗೂ ಮಾಡಬಹುದು)
ಪರಿಣಾಮ :-
ಈ ಮುದ್ರೆಯ ಅಭ್ಯಾಸದಿಂದ ಆಲಸ್ಯ, ಪ್ರಮಾದ, ಜಡತ್ವದೂರ, ಕುಂಡಲಿನಿ ಜಾಗೃತಿಗೆ ಸಹಾಯ, ಸ್ತ್ರೀಯರ ಪ್ರಜನನಾಂಗ ಮತ್ತು ಗರ್ಭಾಶಯಗಳು ಸ್ವಸ್ಥ ಮತ್ತು ಬಲಿಷ್ಠವಾಗುವವು.