ಮನೆ ರಾಜ್ಯ ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿಗೆ ಒಸಿ ನೀಡಿದ ಬಿಬಿಎಂಪಿ: ದೂರು ದಾಖಲು

ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿಗೆ ಒಸಿ ನೀಡಿದ ಬಿಬಿಎಂಪಿ: ದೂರು ದಾಖಲು

0

ಬೆಂಗಳೂರು(Bengaluru): ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಸುಮಾರು ಶೇ. 30 ರಷ್ಟು ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ) ನೀಡಿರುವ ಬಿಬಿಎಂಪಿ ನಗರ ಯೋಜನಾ ವಿಭಾಗ ವಿರುದ್ಧ ದೂರು ದಾಖಲಾಗಿದೆ.

ಬಹುತೇಕ ಪ್ರಕರಣಗಳಲ್ಲಿ ಶೇ 40 ರಷ್ಟು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ರಸ್ತೆಯ ಅಗಲವನ್ನು ವಿಸ್ತರಿಸುತ್ತಿದ್ದಾರೆ. ಈ ಮೂಲಕ ನಿಯಮ ಉಲ್ಲಂಘಿಸಿದ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ದೂರಲಾಗಿದೆ.

ಬೆಂಗಳೂರು ಕಲ್ಯಾಣ ಸಮಿತಿ ಅಧ್ಯಕ್ಷ ಎ.ಪಿ. ಪವನ್‌ ಕುಮಾರ್‌ ಅವರು ನೀಡಿದ ದೂರಿನ ಅನ್ವಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಟಸ್ಥ ಸಂಸ್ಥೆಗೆ ಸೂಚನೆ ನೀಡಿದೆ. ಪ‍್ರಮುಖ ಐದು ಪ್ರಕರಣಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ ತನಿಖೆ ನಡೆಸುವಂತೆ ಸೂಚಿಸಿದೆ.

ಎರಡು ಕಟ್ಟಡಗಳ ನಡುವೆ 5 ಮೀಟರ್‌ ಬದಲಾಗಿ ಕೇವಲ 3.5 ಮೀಟರ್‌ ಜಾಗ ಬಿಡುವ ಮೂಲಕ ಶೇ32ರಷ್ಟು ನಿಯಮಗಳನ್ನು ಉಲ್ಲಂಘಿ ಸಿದ ಪ್ರಕರಣ, ಶೇ 35ರಷ್ಟು ನಿಯಮ ಉಲ್ಲಂಘಿಸಿದ ಪ್ರಕರಣ ಮತ್ತು ವಿವಿಧ ಪ್ರದೇಶಗಳಲ್ಲಿನ ರಸ್ತೆ ಅಗಲವನ್ನು ಉಲ್ಲೇಖಿಸಿ ಕಟ್ಟಡ ನಿರ್ಮಾಣ ಯೋಜನೆಗೆ ಮಂಜೂರಾತಿ ನೀಡುವ ಮೂಲಕ ಬಿಲ್ಡರ್‌ಗೆ ಸುಮಾರು ₹50 ಕೋಟಿ ಲಾಭವಾಗುವಂತೆ ಅನುಕೂಲ ಮಾಡಿಕೊಟ್ಟಿರುವುದು ಹಾಗೂ ಶೇ 40ರಷ್ಟು ನಿಯಮ ಉಲ್ಲಂಘಿಸಿದ್ದರೂ ಸ್ವಾಧೀನಾನುಭವ ಪತ್ರ ನೀಡಿರುವುದು ಇದರಲ್ಲಿ ಸೇರಿವೆ.