ಮನೆ ಕಾನೂನು ಬಿಬಿಎಂಪಿ ಆಸ್ತಿ ತೆರಿಗೆ: ವಿಧಾನಸೌಧ, ರಾಜ ಭವನ ಸೇರಿ 258 ಸರ್ಕಾರಿ ಕಚೇರಿಗಳಿಗೂ ನೋಟಿಸ್

ಬಿಬಿಎಂಪಿ ಆಸ್ತಿ ತೆರಿಗೆ: ವಿಧಾನಸೌಧ, ರಾಜ ಭವನ ಸೇರಿ 258 ಸರ್ಕಾರಿ ಕಚೇರಿಗಳಿಗೂ ನೋಟಿಸ್

0

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಕಠಿಣ ಕ್ರಮಕ್ಕೆ ಮುಂದಾಗಿದೆ. ಖಾಸಗಿ ಆಸ್ತಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೂಡ ಕೈಗೊಳ್ಳಲಾಗುತ್ತಿದೆ. ಆದರೆ ವಿಧಾನಸೌಧ ರಾಜ್ಯಭವನ ಸೇರಿದಂತೆ ಸುಮಾರು 258 ಸರ್ಕಾರಿ ಕಚೇರಿಗಳೇ ತೆರಿಗೆ ಪಾವತಿ ಮಾಡಿಲ್ಲ ಎಂಬ ವಿಚಾರ ಬಳಕೆ ಬಂದಿದೆ.

Join Our Whatsapp Group

ಬಾಕಿ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಮತ್ತು ದಂಡವನ್ನು 50% ರಷ್ಟು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ನೀಡುವ ಒಂದು ಬಾರಿ ಇತ್ಯರ್ಥ (ವನ್ ಟೈಂ ಸೆಟಲ್​ಮೆಂಟ್) ಯೋಜನೆಯು ಸರ್ಕಾರಿ ಕಚೇರಿಗಳಿಗೂ ಮುಕ್ತವಾಗಿತ್ತು. ಆದಾಗ್ಯೂ, ಇದರ ಪ್ರಯೋಜನವನ್ನು ಪಡೆಯಲಿಲ್ಲ ಮತ್ತು ವನ್ ಟೈಂ ಸೆಟಲ್​ಮೆಂಟ್ ಯೋಜನೆಯು ಈಗ ಕೊನೆಗೊಂಡಿದೆ.

ಬಿಬಿಎಂಪಿಯು ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಲು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಜ್ಞಾಪನೆ ಪತ್ರಗಳನ್ನು ಕಳುಹಿಸುತ್ತಿದೆ. ಬಿಬಿಎಂಪಿಯ ಎಂಟು ವಲಯಗಳಲ್ಲಿ ಹೆಚ್ಚಿನ ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಿರಾಸ್ತಿಯ ಹರಾಜಿನ ಮೂಲಕ (ವಸತಿ ಮತ್ತು ವಸತಿಯೇತರ ಆಸ್ತಿಗಳು) ತೆರಿಗೆ ಬಾಕಿ ವಸೂಲಿಗೆ ಖಾಸಗಿ ಆಸ್ತಿ ಮಾಲೀಕರ ವಿರುದ್ಧ ಬಿಬಿಎಂಪಿ ಈಗಾಗಲೇ ಕ್ರಮಕ್ಕೆ ಮುಂದಾಗಿದೆ. ಆದರೆ, ಸರ್ಕಾರಿ ಕಚೇರಿಗಳ ವಿರುದ್ಧ ಇನ್ನೂ ಅಂತಹ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈವರೆಗೆ ಅಧಿಕೃತ ಹೇಳಿಕೆಯನ್ನಾಗಲೀ ಪ್ರತಿಕ್ರಿಯೆಯನ್ನಾಗಲೀ ನೀಡಿಲ್ಲ.