ಮನೆ ರಾಜ್ಯ ನೀರಿನ ಸಮಸ್ಯೆ ಇರುವ ಕಡೆ ಬೋರ್ ವೆಲ್​ ಕೊರೆಸಲು ಬಿಬಿಎಂಪಿ ನಿರ್ಧಾರ

ನೀರಿನ ಸಮಸ್ಯೆ ಇರುವ ಕಡೆ ಬೋರ್ ವೆಲ್​ ಕೊರೆಸಲು ಬಿಬಿಎಂಪಿ ನಿರ್ಧಾರ

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಕಡೆ ನೀರಿನ ಅಭಾವ ಸೃಷ್ಠಿಯಾಗಿದೆ. ಬಿಬಿಎಂಪಿ ಇಂದು ಸಭೆ ನಡೆಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್ ವೆಲ್​ ಕೊರೆಸಲು ನಿರ್ಧಾರ ಮಾಡಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ನೀರಿನ ಸಮಸ್ಯೆ ಬಗ್ಗೆ ನಡೆದ ಹೈವೋಲ್ಟೇಜ್ ಸಭೆ ನಡೆದಿದ್ದು, ಸಭೆ ಅಂತ್ಯಗೊಂಡಿದೆ.  

ನೀರಿನ ಸಮಸ್ಯೆ ಬಗೆಹರಿಸಲು ಬೋರ್​ವೆಲ್ ಕೊರೆಸಲು ನಿರ್ಧಾರ ಮಾಡಲಾಗಿದೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್ ​ವೆಲ್​​ ಕೊರೆಸಲು ಬಿಬಿಎಂಪಿ ತೀರ್ಮಾನಿಸಿದೆ. ಸಭೆ ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕ್ರಮಕೈಗೊಳ್ಳಲಾಗುತ್ತೆ. BBMP, BWSSB, BDA ಸಮನ್ವಯದಿಂದ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ. 1472 Mld ನೀರು ಸರಬರಾಜು ಮಾಡಬಹುದು. ಕಾವೇರಿ 5ನೇ ಹಂತ ಕಾಮಗಾರಿ ಮುಗಿದು ಏಪ್ರಿಲ್ ನಿಂದ ನೀರು ಪೂರೈಕೆ ಮಾಡಬಹುದು. ನಾವು ಹಾಗೂ BWSSB ನವರು ಈಗ ಬೋರ್​ ವೆಲ್ ಕೊರೆಸುತ್ತೇವೆ. ನಾವು ಪ್ರತಿ ಕ್ಷೇತ್ರಕ್ಕೆ 10 ಕೋಟಿ ಹಣ bwssb ಗೆ ಕೊಡುತ್ತೇವೆ. ಡಿಸಿಎಂ ಗ್ರಾಂಟ್ ನಲ್ಲಿ ಮಾಡಿಸುತ್ತೇವೆ. 110 ಹಳ್ಳಿಗಳಿಗೆ 40 ಸಾವಿರ ಕನೆಕ್ಷನ್ ಕೊಟ್ಟಿದ್ದೇವೆ. ಕಾವೇರಿ 5ನೇ ಹಂತ ಬರುವರೆಗೂ ವಲಯ ಆಯುಕ್ತರು ಹಾಗೂ bwssb ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ.

110 ಹಳ್ಳಿಗಳ ನೀರಿನ ನಿರ್ವಹಣೆ ಬಿಬಿಎಂಪಿ ಮಾಡುತ್ತದೆ. ಸಿಟಿ ಲಿಮಿಟ್ಸ್ ನಲ್ಲಿ bwssb ನಿರ್ವಹಣೆ ಮಾಡುತ್ತದೆ. ಖಾಸಗಿ ಟಾಂಕರ್ ಗಳನ್ನು ಕೂಡ ನಾವು ದುಡ್ಡು ಕೊಟ್ಟು ಕೆಲ ದಿನ ಖರೀದಿ ಮಾಡುತ್ತೇವೆ. ಖಾಸಗಿ ಟ್ಯಾಂಕರ್ ದರ ಕಡಿಮೆ ಮಾಡಲು ನಾವು ಅವರಿಂದ ಖರೀದಿ ಮಾಡುತ್ತೇವೆ. 200 ಟ್ಯಾಂಕರ್ ನಾವು ತೆಗೆದುಕೊಂಡಿದ್ದೇವೆ ಎಂದರು.