ಮೈಸೂರು(Mysuru): ಮಾನವ ಜನ್ಮ ದೊಡ್ಡದು, ಅದು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ಎಂಬ ದಾಸರ ವಾಣಿಯಂತೆ ಜೀವನ ಅಂತ್ಯದವರೆಗೂ ನಾವೆಲ್ಲ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು. ಮತ್ತೊಬ್ಬರಿಗೆ ಕೇಡನ್ನು ಬಯಸದೆ ಉತ್ತಮ ವ್ಯಕ್ತಿಯಾಗಬೇಕು ಎಂದು ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.
ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ಕೆಂಪನಂಜಮ್ಮ ಇಂದು ಅಗ್ರಹಾರದಲ್ಲಿರುವ ಸರಸ್ವತಿನಿಲಯದಲ್ಲಿ ಋಗ್ವೇದ ಉಪಾಕರ್ಮವನ್ನು ಬ್ರಾಹ್ಮಣರು ಯಜ್ಞೋಪವೀತಂ ಜನಿವಾರ ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ, ವೇದಘೋಷ ನಂತರ ಹೋಮ ನೆರವೇರಿಸಿದರು.
ಉಪಾಕರ್ಮದ ಅಂಗವಾಗಿ ಜನಿವಾರ ಧಾರಣೆ ಮಾಡಿದ ಸಮಾಜದ ಬ್ರಾಹ್ಮಣರಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನಿತ್ಯ ಸಂಧ್ಯಾವಂದನೆ ಪುಸ್ತಕ ಹಾಗೂ ಗಾಯತ್ರಿ ಮಂತ್ರ ಪುಸ್ತಕ ನೀಡಿ ಋಗ್ವೇದ ಉಪಾಕರ್ಮದ ಶುಭಾಶಯ ಕೋರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಇಳೈ ಆಳ್ವಾರ್ ಸ್ವಾಮೀಜಿ, ಉಪ ಎಂದರೆ ಸಮೀಪ. ದೇವರ ಸಾಮಿಪ್ಯ ಹೊಂದಲು (ಮೋಕ್ಷ ಪ್ರಾಪ್ತಿ) ಪ್ರತಿಯೊಬ್ಬರು ದೇವರ ಮೇಲೆ ಶ್ರದ್ಧೆ ಇಟ್ಟು, ಉಪಾಸನೆ ಮಾಡಿ ಮೋಕ್ಷ ಪಡೆಯಲು ಪ್ರಯತ್ನಿಸಬೇಕು. ಸದಾಚಾರ, ಒಳ್ಳೆಯ ಚಾರಿತ್ರ್ಯ, ಸನ್ಮಾರ್ಗಗಳನ್ನು ಅಳವಡಿಸಿಕೊಂಡು ದೇವರನ್ನು ಪೂಜಿಸಿದರೆ ನಮ್ಮ ಜನ್ಮ ಸಫಲವಾಗುತ್ತದೆ ಎಂದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಮಾತನಾಡಿ, ಮೈಸೂರು ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಕೃಷ್ಣಮೂರ್ತಿಪುರಂ ರಾಮಮಂದಿರ ಜಯನಗರ ರಾಮಮಂದಿರ ಸೇರಿದಂತೆ ಇದೇ ತಿಂಗಳು 11ನೇ ತಾರೀಕು ಯಜುರ್ವೇದ ಸಾಮೂಹಿಕ ಯಜ್ಞೋ ಪವೀತ೦ ಜನಿವಾರ ಬದಲಾಯಿಸಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ಸಹ ಪ್ರತಿಯೊಬ್ಬರಿಗೂ ಗಾಯತ್ರಿ ಮಾತೆಯ ಪುಸ್ತಕಗಳನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ,
ಶ್ರೀಕಾಂತ್ ಕಶ್ಯಪ್, ಸುಚಿಂದ್ರ ,ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘ ಅಧ್ಯಕ್ಷರಾದ ಬಿಆರ್ ಸೀತಾರಾಮಯ್ಯ, ಉಪಾಧ್ಯಕ್ಷರು ನಂಜುಂಡಸ್ವಾಮಿ, ಕಾರ್ಯದರ್ಶಿ ಮಹೇಶ್ ಕುಮಾರ್, ಖಜಾಂಜಿ ಎಸ್ ಎಲ್ ನಾಗರಾಜ್, ಸಹ ಕಾರ್ಯದರ್ಶಿ ಬಾಲಾಜಿ ಹಾಗೂ ಇನ್ನಿತರರು ಹಾಜರಿದ್ದರು.