ಮನೆ ರಾಜ್ಯ ಮಡಿಕೇರಿ ದಸರಾ ವೇಳೆ ಯುವತಿಯರನ್ನ ಕೆಣಕ್ಕಿದ್ರೆ ಹುಷಾರ್‌..!

ಮಡಿಕೇರಿ ದಸರಾ ವೇಳೆ ಯುವತಿಯರನ್ನ ಕೆಣಕ್ಕಿದ್ರೆ ಹುಷಾರ್‌..!

0

ಮಡಿಕೇರಿ : ಮೈಸೂರು ದಸರಾ ಬಿಟ್ಟರೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದ ದಸರಾ ಅಂದ್ರೆ ಅದು ಮಂಜಿನ ನಗರಿ ದಸರಾ. ಮಡಿಕೇರಿಯ ದಸರಾ ಉತ್ಸವಕ್ಕೆ ಎಲ್ಲಾ ಕಡೆಯಿಂದಲೂ ಜನರು ಆಗಮಿಸ್ತಾರೆ. ಇದೀಗ ದಸರಾಕ್ಕೆ ಆಗಮಿಸುವ ಮಹಿಳೆಯರು, ಯುವತಿಯರನ್ನು ಕೆಣಕಿದ್ರೆ ಅಂತಹವರನ್ನು ಮದುವೆ ಮಂಟಪಕ್ಕೆ ಕರೆತಂದು ಪ್ರಕರಣ ದಾಖಲಿಸುವುದಾಗಿ ಕೊಡಗು ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮಡಿಕೇರಿ ದಸರಾವನ್ನು ನೋಡಲು ಆಗಮಿಸುವ ಹೆಣ್ಣುಮಕ್ಕಳ ಮೇಲೆ ಕೆಲ ಕಿಡಿಗೇಡಿಗಳು ದೈಹಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಬಂದಿತ್ತು. ಈ ಹಿನ್ನಲೆ ಈ ವರ್ಷದ ದಸರಾ ಸಂದರ್ಭದಲ್ಲಿ ಮಹಿಳಾ ಪೊಲೀಸರ ಜಂಬೋ ತಂಡಗಳನ್ನು ರಚನೆ ಮಾಡುತ್ತೇವೆ.

ದಸರಾ ಉತ್ಸವದ ಶೋಭಾಯಾತ್ರೆಯ ಸಂದರ್ಭ ಜನಸಂದಣಿ ಹೆಚ್ಚಾಗಿರುವ ಕಡೆ ಕಿಡಿಗೇಡಿಗಳ ಬಗ್ಗೆ ನಿಗಾ ಇಡಲು ಒಬ್ಬರು ಎಸ್‌ಐ ನೇತೃತ್ವದ 15 ಸಿಬ್ಬಂದಿ ಒಳಗೊಂಡ ಜಂಬೋ ತಂಡಗಳನ್ನು ರಚಿಸಲಾಗುತ್ತಿದೆ. ಮಹಿಳೆಯರಿಗೆ ಕಿರುಕುಳ ನೀಡುವುದು ಖಾತ್ರಿಯಾದರೆ ಅಂತಹವರನ್ನು ನೇರವಾಗಿ ಮದುವೆ ಮಂಟಪಕ್ಕೆ ಕರೆತಂದು ಪ್ರಕರಣ ದಾಖಲು ಮಾಡುತ್ತೇವೆ ಎಂದು ಕೊಡಗು ಎಸ್‌ಪಿ ರಾಮರಾಜನ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಐತಿಹಾಸಿಕ ಮಡಿಕೇರಿ ದಸರಾ ಆಚರಣೆ ದಿನಗಣನೆ ಆರಂಭವಾಗಿದ್ದು, ಕೆಲ ನಿಯಮಗಳ ಸಡಿಲಿಕೆ ಮಾಡಬೇಕು ಎಂದು ಮಡಿಕೇರಿ ದಸರಾ ಸಮಿತಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಇತ್ತ ಪೊಲೀಸರು, ದಸರಾ ಸಂದರ್ಭದಲ್ಲಿ ಮಹಿಳೆಯರು ಹಾಗೂ ಯುವತಿಯರಿಗೆ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.‌