ಮೈಸೂರು: ಕ್ರೀಡಾ ಪಟುಗಳಿಗೆ ಸಮಯ ಪ್ರಜ್ಞೆ ಹೊಂದಿದ್ದರೆ ಯಾವುದೇ ಕ್ರೀಡೆಯಲ್ಲಾದರು ಜಯಗಳಿಸ ಬಹುದು ಎಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಕ್ರೀಡಪಟು ಎಂ ಸಹನಾ ಅವರು ತಿಳಿಸಿದರು.
ಜ್ಯೋತಿನಗರದ ಡಿ.ಎ.ಆರ್. ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಕಾರ್ಯಕ್ರಮವನ್ನು ಬಲೂನ್ ಹಾರಿ ಬಿಡುವುದರ ಮೂಲಕ ಉದ್ಘಾಟಿಸಿದರು ಹಾಗೂ ಕ್ರೀಡಾಜ್ಯೋತಿಯನ್ನು ಸಾಂಪ್ರದಾಯಕವಾಗಿ ಸ್ಪರ್ಶಿಸುವ ಮೂಲಕ ಕ್ರೀಡೆಗೆ ಚಾಲನೆ ನೀಡುತ್ತ ಅವರು ಮಾತನಾಡಿದರು.
ಕ್ರೀಡಾಪಟುಗಳು ತಮಗೆ ತಾವೇ ಪ್ರೇರಣೆ ಪಡೆದುಕೊಂಡು ನಿರಂತರ ಪ್ರಯತ್ನ ಮಾಡಿದರೆ ಕ್ರೀಡೆಯಲ್ಲಿ ಯಶಸ್ಸು ಕಟಿಟ್ಟ ಬುತ್ತಿ ಎಂದು ತಮ್ಮ ಸಾಧನೆಯ ಹಾದಿಯನ್ನು ತಿಳಿಸಿದರು.
ಅವರ ತಂದೆಯಾದ ನಿವೃತ್ತ ಎ.ಎಸ್.ಐ ಮಹದೇವಯ್ಯ ಅವರು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಇಂದು ನಾನು ಮುಖ್ಯ ಅತಿಥಿಯಾಗಿ ಬಂದಿರುವುದು ತುಂಬ ಸಂತೋಷವಾಗುತ್ತಿದೆ ಎಂದು ಹೇಳುತ್ತ ತನ್ನ ತಾಯಿ ಸಹೋದರ ಹಾಗೂ ತಮ್ಮ ಕ್ರೀಡಾ ಗುರುಗಳಿಗೆ ಧನ್ಯವಾದವನ್ನು ತಿಳಿಸಿದರು.
ಪೊಲೀಸ್ ವಾರ್ಷಿಕ ಕ್ರೀಡಾ ಕಾರ್ಯಕರ್ಮದಲ್ಲಿ ಪುರುಷರ ನಾನೂರು ಮೀಟರ್ ಹಾಗೂ ಮಹಿಳೆಯರ ನೂರು ಮೀಟರ್ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. ಓಟದ ಸ್ಪರ್ಧೆಯಲ್ಲಿ ವಿಜೇತರಾದ ಪುರುಷ ಹಾಗೂ ಮಹಿಳಾ ಪೊಲೀಸರಿಗೆ ಪ್ರಥಮ ದ್ವಿತ್ತೀಯ ತೃತ್ತೀಯವಾಗಿ ಪದಕಗಳನ್ನು ನೀಡಿ ಸಹನಾ ಅವರ ಗೌರವಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಎನ್ ವಿಷ್ಣುವರ್ಧನ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.