ಬೆಳಗಾವಿ: ಎರಡು ಕುಟುಂಬಗಳ ಗಲಾಟೆ ನಡುವೆ ಮೂರು ವರ್ಷದ ಮಗುವನ್ನ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ನಡೆದಿದೆ.
ಎದೆ ಮೇಲೆ ಕಾಲಿಟ್ಟು ಬಾಲಕಿ ಶ್ರೀನಿಧಿ ಕಾಳಾಪಾಟೀಲ್(3) ಅವರನ್ನು ಹತ್ಯೆಗೈಯಲಾಗಿದೆ.
ಹಣಕಾಸಿನ ವಿಚಾರಕ್ಕೆ ನಡೆದ ಜಗಳದ ವೇಳೆ ಜ್ಯೋತಿಬಾ ಬಾಬರ್ ಎಂಬಾತ ಮಗುವಿನ ಮೇಲೆ ಕಾಲಿಟ್ಟು ಕೊಂದಿದ್ದಾನೆ.
ಈ ಕುರಿತು ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.